ETV Bharat / sports

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮತ್ತೆ ಶುರುವಾಗಲಿದೆ ಐಪಿಎಲ್.. ಉಳಿದ ಪಂದ್ಯಗಳಿಗೆ ಸ್ಥಳ ನಿಗದಿ ಮಾಡಿದ ಬಿಸಿಸಿಐ.. - ಐಪಿಎಲ್​-14 ಉಳಿದ ಪಂದ್ಯಗಳಿಗೆ ದಿನಾಂಕ, ಸ್ಥಳ ನಿಗದಿ ಮಾಡಿದ ಬಿಸಿಸಿಐ

ಕೊರೊನಾದಿಂದಾಗಿ ಭಾರತದಲ್ಲಿ ಟೂರ್ನಿ ನಡೆಯದಿದ್ದರೆ ಈ ಟೂರ್ನಿಯೂ ಕೂಡ ಯುಎಇಗೆ ಸ್ಥಳಾಂತರವಾಗಲಿದೆ. ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಒಟ್ಟಾರೆ 41 ದಿನಗಳ ಕಾಲ ನಡೆಯಲಿದೆ..

ಐಪಿಎಲ್
ಐಪಿಎಲ್
author img

By

Published : May 24, 2021, 12:38 PM IST

ನವದೆಹಲಿ : ಈ ಬಾರಿಯ ಐಪಿಎಲ್​​ ಟೂರ್ನಿಯೂ ಕೊರೊನಾರ್ಭಟದಿಂದ ಸ್ಥಗಿತಗೊಂಡು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಈಗ ಬಿಸಿಸಿಐ ಮತ್ತೆ ಐಪಿಎಲ್​ ಟೂರ್ನಿಯನ್ನ ಆಯೋಜಿಸಲು ದಿನಾಂಕ ನಿಗದಿಪಡಿಸಿದೆ ಎನ್ನಲಾಗಿದೆ.

ಐಪಿಎಲ್ 14ನೇ ಆವೃತ್ತಿಯನ್ನ ಟಿ-20 ವಿಶ್ವಕಪ್‌ಗೂ ಮುನ್ನ ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ನಡುವಿನ ಒಂದು ತಿಂಗಳ ಕಾಲಾವಕಾಶದಲ್ಲಿ ಐಪಿಎಲ್ ಪೂರ್ಣಗೊಳಿಸಲು ಬಿಸಿಸಿಐ ಪ್ಲಾನ್​ ಮಾಡಿದೆ ಎಂದು ವರದಿಯಾಗಿದೆ.

ಐಪಿಎಲ್‌ನಲ್ಲಿ ಸದ್ಯ 29 ಪಂದ್ಯ ನಡೆದಿದ್ದು, ಇನ್ನು 31 ಪಂದ್ಯ ಬಾಕಿ ಉಳಿದಿವೆ. 8 ಡಬಲ್ ಹೆಡರ್‌ಗಳ (ಒಂದೇ ದಿನ 2 ಪಂದ್ಯ) ಸಹಿತ 4 ವಾರಗಳಲ್ಲಿ 31 ಪಂದ್ಯ ಮುಗಿಸಲು ಬಿಸಿಸಿಐ ಯೋಜನೆ ಹಾಕಿದೆ.

ಮೇ 29ರಂದು ನಡೆಯಲಿರುವ ಬಿಸಿಸಿಐ ವಿಶೇಷ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರ ಬೀಳಲಿದೆ. ಐಪಿಎಲ್ ಟೂರ್ನಿಯನ್ನೂ ಯುಎಇಯಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.

ಟಿ-20 ವಿಶ್ವಕಪ್ ಅಕ್ಟೋಬರ್ 18ರಂದು ಆರಂಭಗೊಳ್ಳಲಿದೆ. ಭಾರತದಲ್ಲಿ ನಿಗದಿಯಾಗಿರುವ ಈ ಟೂರ್ನಿಯನ್ನ ಭಾರತದಲ್ಲಿ ನಡಸಬೇಕೋ, ಬೇಡವೋ ಎನ್ನುವುದನ್ನ ಜೂನ್ 2ರಂದು ನಡೆಯುವ ಐಸಿಸಿ ಸಭೆಯಲ್ಲಿ ನಿರ್ಧಾರವಾಗಲಿದೆ.

ಕೊರೊನಾದಿಂದಾಗಿ ಭಾರತದಲ್ಲಿ ಟೂರ್ನಿ ನಡೆಯದಿದ್ದರೆ ಈ ಟೂರ್ನಿಯೂ ಕೂಡ ಯುಎಇಗೆ ಸ್ಥಳಾಂತರವಾಗಲಿದೆ. ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಒಟ್ಟಾರೆ 41 ದಿನಗಳ ಕಾಲ ನಡೆಯಲಿದೆ.

2 ಮತ್ತು 3ನೇ ಪಂದ್ಯದ ನಡುವೆ 9 ದಿನಗಳ ಅಂತರವಿದೆ. ಇದನ್ನು ಕಡಿಮೆ ಮಾಡುವ ಮೂಲಕ ಸರಣಿಯನ್ನು ಬೇಗನೆ ಮುಗಿಸುವಂತೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಮನವಿ ಸಲ್ಲಿಸಲಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.