ಚೆನ್ನೈ: ಸ್ಪಿನ್ ಸ್ನೇಹಿ, ಬ್ಯಾಟರ್ಗಳಿಗೆ ನೆರವು ನೀಡುವ ಇಲ್ಲಿನ ಚೆಪಾಕ್ ಮೈದಾನದಲ್ಲಿ ನಿನ್ನೆ (ಬುಧವಾರ) ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ವೇಗಿಗಳೇ ಮೇಲುಗೈ ಸಾಧಿಸಿದರು. ಅದರಲ್ಲೂ ಆಕಾಶ್ ಮಧ್ವಾಲ್ರ ಉರಿ ಬೌಲಿಂಗ್ ದಾಳಿಗೆ ಸಿಲುಕಿದ ಕೃನಾಲ್ ಪಾಂಡ್ಯ ನೇತೃತ್ವದ ಪಡೆ ಟೂರ್ನಿಯಿಂದಲೇ ಎಲಿಮಿನೇಟ್ ಆಯಿತು. ಒದ್ದಾಡಿಕೊಂಡು ನಾಕೌಟ್ ತಲುಪಿರುವ ಮುಂಬೈ ಪಂದ್ಯ ಜಯಿಸುವ ಮೂಲಕ ಪ್ರಶಸ್ತಿ ಸುತ್ತಿಗಾಗಿ ಇನ್ನೊಂದು ಹೆಜ್ಜೆ ಮುಂದಿಟ್ಟಿತು.
-
A MI-ghty special victory! 😎
— IndianPremierLeague (@IPL) May 24, 2023 " class="align-text-top noRightClick twitterSection" data="
The Mumbai Indians win by 81 runs and progress to the #Qualifier2 of #TATAIPL 2023 👏🏻👏🏻
Scorecard ▶️ https://t.co/CVo5K1wG31#TATAIPL | #Eliminator | #LSGvMI pic.twitter.com/77zW6NmInn
">A MI-ghty special victory! 😎
— IndianPremierLeague (@IPL) May 24, 2023
The Mumbai Indians win by 81 runs and progress to the #Qualifier2 of #TATAIPL 2023 👏🏻👏🏻
Scorecard ▶️ https://t.co/CVo5K1wG31#TATAIPL | #Eliminator | #LSGvMI pic.twitter.com/77zW6NmInnA MI-ghty special victory! 😎
— IndianPremierLeague (@IPL) May 24, 2023
The Mumbai Indians win by 81 runs and progress to the #Qualifier2 of #TATAIPL 2023 👏🏻👏🏻
Scorecard ▶️ https://t.co/CVo5K1wG31#TATAIPL | #Eliminator | #LSGvMI pic.twitter.com/77zW6NmInn
ಲಖನೌ ಸೋಲು ಅನುಭವಿಸುವ ಮೂಲಕ ಐಪಿಎಲ್ ಅಭಿಯಾನ ಮುಗಿಸಿದರೆ, ಮುಂಬೈ ಕ್ವಾಲಿಫೈಯರ್- 2 ಹಂತಕ್ಕೆ ತಲುಪಿತು. ಮೊದಲು ಬ್ಯಾಟ್ ಮಾಡಿದ ಮುಂಬೈ 8 ವಿಕೆಟ್ಗೆ 182 ರನ್ ಗಳಿಸಿತು. ಸವಾಲಿನ ಮೊತ್ತ ಬೆನ್ನತ್ತಿದ ಸೂಪರ್ಜೈಂಟ್ಸ್ ದಿಢೀರ್ ಕುಸಿತ ಕಂಡು 101 ರನ್ಗೆ ಸೋಲೊಪ್ಪಿಕೊಂಡಿತು.
ಕಳೆದ ಆವೃತ್ತಿಯಲ್ಲೂ ಎಲಿಮಿನೇಟರ್ ಹಂತದಲ್ಲಿ ಸೋಲು ಕಂಡಿದ್ದ ಲಖನೌ, ಈ ಬಾರಿಯೂ ಎಡವಿತು. ಬ್ಯಾಟರ್ಗಳ ದಿಢೀರ್ ಪತನದಿಂದಾಗಿ ತಂಡ ಅಲ್ಪಮೊತ್ತಕ್ಕೆ ಕುಸಿಯಿತು. ಮಾರ್ಕಸ್ ಸ್ಟೊಯಿನೀಸ್ 40, ಕೈಲ್ ಮೇಯರ್ಸ್ 18, ದೀಪಕ್ ಹೂಡಾ 15 ರನ್ ಗಳಿಸಿದ್ದು ಬಿಟ್ಟರೆ ಬೇರೆ ಯಾವ ಬ್ಯಾಟರ್ ಕೂಡ ಎರಡಂಕಿ ದಾಟಲಿಲ್ಲ. 69 ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ತಂಡ ಆಕಾಶ್ ಮದ್ವಾಲ್ರ ದಾಳಿಗೆ ನೆಲಕಚ್ಚಿ 101 ರನ್ಗೆ ಆಲೌಟ್ ಆಗಿ ಮುಂಬೈ ಮುಂದೆ 81 ರನ್ಗಳಿಂದ ಮಂಡಿಯೂರಿತು.
ಉತ್ತಮವಾಗಿ ಆಡುತ್ತಿದ್ದ ಸ್ಟೊಯಿನೀಸ್ ಮತ್ತು ದೀಪಕ್ ಹೂಡಾ ರನ್ ಕದಿಯುವ ವೇಳೆ ರನೌಟ್ ಆಗಿದ್ದು, ತಂಡಕ್ಕೆ ದುಬಾರಿಯಾಯಿತು. ಮೂವರು ಬ್ಯಾಟರ್ಗಳು ರನೌಟ್ ಆದರು. ಹೊಡಿಬಡಿ ದಾಂಡಿಗ ನಿಕೋಲಸ್ ಪೂರನ್ ಮಹತ್ವದ ಪಂದ್ಯದಲ್ಲಿ ಸೊನ್ನೆ ಸುತ್ತಿದರು. ಇದರಿಂದ ತಂಡ 16.3 ಓವರ್ಗಳಲ್ಲಿ ಗಂಟುಮೂಟೆ ಕಟ್ಟಿತು.
-
Sensational! 🔥🔥
— IndianPremierLeague (@IPL) May 24, 2023 " class="align-text-top noRightClick twitterSection" data="
Akash Madhwal bags a FIFER & Lucknow Super Giants are all out for 101 #TATAIPL | #Eliminator | #LSGvMI pic.twitter.com/pfiLNkScnz
">Sensational! 🔥🔥
— IndianPremierLeague (@IPL) May 24, 2023
Akash Madhwal bags a FIFER & Lucknow Super Giants are all out for 101 #TATAIPL | #Eliminator | #LSGvMI pic.twitter.com/pfiLNkScnzSensational! 🔥🔥
— IndianPremierLeague (@IPL) May 24, 2023
Akash Madhwal bags a FIFER & Lucknow Super Giants are all out for 101 #TATAIPL | #Eliminator | #LSGvMI pic.twitter.com/pfiLNkScnz
ಆಕಾಶ್ ಮದ್ವಾಲ್ ದಾಖಲೆ: ಮಹತ್ವದ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ವಿರುದ್ಧ ದಂಡೆತ್ತಿದ ಆಕಾಶ್ ಮಧ್ವಾಲ್ 5 ವಿಕೆಟ್ ಗೊಂಚಲು ಪಡೆದರು. ಈ ಮೂಲಕ ಎಲಿಮಿನೇಟರ್ ಪಂದ್ಯದಲ್ಲಿ 5 ವಿಕೆಟ್ ಕಿತ್ತ ಮೊದಲ ಬೌಲರ್ ದಾಖಲೆ ಬರೆದರೆ, 5 ರನ್ ನೀಡಿ 5 ವಿಕೆಟ್ ಪಡೆದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದರು.
ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ನಿಧಾನಗತಿ ಪಿಚ್ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿತು. ಅದ್ಭುತ ಲಯದಲ್ಲಿರುವ ಕ್ಯಾಮರೂನ್ ಗ್ರೀನ್ 41, ಸೂರ್ಯಕುಮಾರ್ ಯಾದವ್ 33, ತಿಲಕ್ ವರ್ಮಾ 26, ನೆಹಾಲ್ ವಧೇರಾ 23 ರನ್ ಮಾಡಿ ತಂಡಕ್ಕೆ ನೆರವಾದರು. ನಾಯಕ ರೋಹಿತ್ ಶರ್ಮಾ(11) ಈ ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿದರು. ಲಖನೌನ ನವೀನ್ ಉಲ್ ಹಕ್ 4, ಯಶ್ ಠಾಕೂರ್ 3 ವಿಕೆಟ್ ಕಿತ್ತ ಹೊರತಾಗಿಯೂ ಮುಂಬೈ ನಿಗದಿತ ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್ ಸಂಪಾದಿಸಿತು.
-
For his spectacular five-wicket haul and conceding just five runs, Akash Madhwal receives the Player of the Match award 👌🏻👌🏻
— IndianPremierLeague (@IPL) May 24, 2023 " class="align-text-top noRightClick twitterSection" data="
Mumbai Indians register a comprehensive 81-run victory 👏🏻👏🏻
Scorecard ▶️ https://t.co/CVo5K1wG31#TATAIPL | #Eliminator | #LSGvMI pic.twitter.com/qy9ndLnKnA
">For his spectacular five-wicket haul and conceding just five runs, Akash Madhwal receives the Player of the Match award 👌🏻👌🏻
— IndianPremierLeague (@IPL) May 24, 2023
Mumbai Indians register a comprehensive 81-run victory 👏🏻👏🏻
Scorecard ▶️ https://t.co/CVo5K1wG31#TATAIPL | #Eliminator | #LSGvMI pic.twitter.com/qy9ndLnKnAFor his spectacular five-wicket haul and conceding just five runs, Akash Madhwal receives the Player of the Match award 👌🏻👌🏻
— IndianPremierLeague (@IPL) May 24, 2023
Mumbai Indians register a comprehensive 81-run victory 👏🏻👏🏻
Scorecard ▶️ https://t.co/CVo5K1wG31#TATAIPL | #Eliminator | #LSGvMI pic.twitter.com/qy9ndLnKnA
ಕ್ವಾಲಿಫೈಯರ್ 2- ಗುಜರಾತ್ ಎದುರಾಳಿ: ಲಖನೌ ಸದೆಬಡಿದು ಕ್ವಾಲಿಫೈಯರ್ 2 ಹಂತಕ್ಕೆ ಸಾಗಿರುವ ಮುಂಬೈ ಇಂಡಿಯನ್ಸ್, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಅನ್ನು ನಾಳೆ ಎದುರಿಸಲಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಸೋಲು ಕಂಡಿತ್ತು. ಇಲ್ಲಿ ಗೆದ್ದ ತಂಡ ಸಿಎಸ್ಕೆ ವಿರುದ್ಧ ಫೈನಲ್ನಲ್ಲಿ ಸೆಣಸಾಡಲಿದೆ.
ಇದನ್ನೂ ಓದಿ: MI vs LSG Eliminator: ನವೀನ್, ಯಶ್ ಆಕ್ರಮಣಕಾರಿ ಬೌಲಿಂಗ್ ನಡುವೆ 183 ರನ್ಗಳ ಸಾಧಾರಣ ಗುರಿ ನೀಡಿದ ಮುಂಬೈ