ಅಹಮದಾಬಾದ್ (ಗುಜರಾತ್): ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ವಿಕೆಟ್‌ಗಳ ಗೆಲುವು ದಾಖಲಿಸುವ ಮೂಲಕ 5 ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯದಲ್ಲಿ ಮತ್ತೊಮ್ಮೆ ಎಂ.ಎಸ್.ಧೋನಿ ಅವರ ಅದ್ಭುತ ಸ್ಟಂಪಿಂಗ್‌ಗೆ ಕ್ರಿಕೆಟ್ ಲೋಕ ಬೆರಗಾಯಿತು.
ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್‌ಗಳ ಪೈಕಿ ಒಬ್ಬರಾದ ಧೋನಿ ಮುಂದೆ ನಿನ್ನೆ ಪ್ರತಿಭಾವಂತ ಬ್ಯಾಟರ್ ಶುಭಮನ್ ಗಿಲ್ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಧೋನಿ ಅವರ ಕ್ವಿಕ್ ಸ್ಟಂಪಿಂಗ್‌ನಿಂದಾಗಿ ಈ ಋತುವಿನ ಆರೆಂಜ್ ಕ್ಯಾಪ್ ಗೌರವ ಪಡೆದ ಗಿಲ್ ಕೇವಲ 39 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಚೆನ್ನೈ ತಂಡ ಬೌಲಿಂಗ್ನಲ್ಲಿ ಕಮ್‌ಬ್ಯಾಕ್ ಮಾಡಿತು. ಧೋನಿ ಸ್ಟಂಪಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
-
Lightning fast MSD! ⚡️ ⚡️
— IndianPremierLeague (@IPL) May 29, 2023 " class="align-text-top noRightClick twitterSection" data="
How about that for a glovework 👌 👌
Big breakthrough for @ChennaiIPL as @imjadeja strikes! 👍 👍#GT lose Shubman Gill.
Follow the match ▶️ https://t.co/WsYLvLrRhp #TATAIPL | #Final | #CSKvGT | @msdhoni pic.twitter.com/iaaPHQFNsy
">Lightning fast MSD! ⚡️ ⚡️
— IndianPremierLeague (@IPL) May 29, 2023
How about that for a glovework 👌 👌
Big breakthrough for @ChennaiIPL as @imjadeja strikes! 👍 👍#GT lose Shubman Gill.
Follow the match ▶️ https://t.co/WsYLvLrRhp #TATAIPL | #Final | #CSKvGT | @msdhoni pic.twitter.com/iaaPHQFNsyLightning fast MSD! ⚡️ ⚡️
— IndianPremierLeague (@IPL) May 29, 2023
How about that for a glovework 👌 👌
Big breakthrough for @ChennaiIPL as @imjadeja strikes! 👍 👍#GT lose Shubman Gill.
Follow the match ▶️ https://t.co/WsYLvLrRhp #TATAIPL | #Final | #CSKvGT | @msdhoni pic.twitter.com/iaaPHQFNsy
ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ಪ್ರಮುಖ ಬ್ಯಾಟರ್ ಆಗಿದ್ದಾರೆ. ತಾನಾಡಿದ 17 ಪಂದ್ಯಗಳಲ್ಲಿ 890 ರನ್ ಗಳಿಸಿದ್ದಾರೆ. ಅಂತಿಮ ಪಂದ್ಯಕ್ಕೂ ಮೊದಲು ಗಿಲ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕ ಗಳಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಚೆನ್ನೈಗೆ ಗಿಲ್ ವಿಕೆಟ್ ಪ್ರಮುಖವಾಗಿತ್ತು.
ಪಂದ್ಯದ ಎರಡನೇ ಓವರ್ನಲ್ಲಿ ಮೂರು ರನ್ಗಳಿಸಿದ್ದ ವೇಳೆ ಗಿಲ್ ಕ್ಯಾಚ್ ನೀಡಿದ್ದರು. ಆದರೆ ದೀಪಕ್ ಚಹಾರ್ ಆ ಕ್ಯಾಚ್ ಕೈಚಲ್ಲಿದ್ದರು. ಸಿಕ್ಕ ಅವಕಾಶ ಕೈಬಿಟ್ಟಿದ್ದರಿಂದ ಗಿಲ್ ಚೆನ್ನೈ ಬೌಲರ್ಗಳನ್ನು ಕಾಡಬಹುದು ಎಂದೇ ಅಂದಾಜಿಸಲಾಗಿತ್ತು. ಅದರಂತೆ ಜೀವದಾನ ಪಡೆದ ಗಿಲ್ ವೇಗವಾಗಿ ಸ್ಕೋರ್ ಹೆಚ್ಚಿಸಲು ಪ್ರಾರಂಭಿಸಿದರು. 19 ಎಸೆತಗಳಲ್ಲಿ 39 ರನ್ ಸಹ ಗಳಿಸಿದರು. ಇನ್ನೊಂದು ತುದಿಯಲ್ಲಿ ಸಹಾ ಕೂಡ ವೇಗವಾಗಿ ರನ್ ಪೇರಿಸುತ್ತಿದ್ದರು. ಪವರ್‌ಪ್ಲೇ ನಂತರ ಗುಜರಾತ್ ಯಾವುದೇ ವಿಕೆಟ್ ನಷ್ಟವಿಲ್ಲದೆ 62 ರನ್ ಗಳಿಸಿತ್ತು. ಇದರಿಂದ ಗುಜರಾತ್ ಉತ್ತಮ ಆರಂಭ ಪಡೆಯಿತು.
ಚೆನ್ನೈ ಬೌಲರ್‌ಗಳು ರನ್ಗಳನ್ನು ಬಿಟ್ಟು ಕೊಡುವ ಮೂಲಕ ದುಬಾರಿಯಾದರು. ಪವರ್‌ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈನ ಎಲ್ಲ ಬೌಲರ್‌ಗಳ ಎಕಾನಮಿ ದರ 10 ರ ಸಮೀಪದಲ್ಲಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಯಕ ಧೋನಿ, ಜಡೇಜಾ ಅವರನ್ನು ಬೌಲಿಂಗ್‌ಗಿಳಿಸಿದರು. ಇನಿಂಗ್ಸ್‌ನ ಏಳನೇ ಓವರ್ ಬೌಲ್ ಮಾಡಿದ ಜಡೇಜಾ ಕೊನೆಯ ಎಸೆತದಲ್ಲಿ ಗಿಲ್ ಕ್ರೀಸ್ನಿಂದ ಹೊರಬಂದು ಬಾಲ್ ಅನ್ನು ಆಫ್ಸೈಡ್ಗಟ್ಟಲು ನೋಡಿದರು. ಈ ವೇಳೆ ಧೋನಿ ಕ್ಷಣಾರ್ಧದಲ್ಲಿ ಸ್ಟಂಪ್ ಮಾಡಿ ಗಿಲ್ ಅವರನ್ನು ಔಟ್ ಮಾಡಿದರು. ಗಿಲ್ ಸ್ಟಂಪ್ ಔಟ್ ಆಗಿರುವ ವಿಚಾರ ಧೋನಿ ಬಿಟ್ಟು ಉಳಿದ ಆಟಗಾರರಿಗೆ ಅರೆಕ್ಷಣ ಗೊತ್ತೇ ಆಗಲಿಲ್ಲ. ಮೂರನೇ ಅಂಪೈರ್ ಕಾಲಿಂಗ್ನಲ್ಲಿ ಗಿಲ್ ಔಟಾಗಿರುವುದು ಸ್ಪಷ್ಟವಾಯಿತು. ಈ ಮೂಲಕ ಚೆನ್ನೈ ಕಮ್‌ಬ್ಯಾಕ್ ಮಾಡಿತು.
-
Wow ! One can change bank notes from bank but behind the wickets one cannot change MS Dhoni ! Nahi badal sakte .. As fast as ever MS Dhoni.
— Virender Sehwag (@virendersehwag) May 29, 2023 " class="align-text-top noRightClick twitterSection" data="
pic.twitter.com/zSRnz8DIXI
">Wow ! One can change bank notes from bank but behind the wickets one cannot change MS Dhoni ! Nahi badal sakte .. As fast as ever MS Dhoni.
— Virender Sehwag (@virendersehwag) May 29, 2023
pic.twitter.com/zSRnz8DIXIWow ! One can change bank notes from bank but behind the wickets one cannot change MS Dhoni ! Nahi badal sakte .. As fast as ever MS Dhoni.
— Virender Sehwag (@virendersehwag) May 29, 2023
pic.twitter.com/zSRnz8DIXI
ಸೆಹ್ವಾಗ್ ಟ್ವೀಟ್: ಈ ಬಗ್ಗೆ ಭಾರತೀಯ ಮಾಜಿ ಕ್ರಿಕೆಟರ್ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದು, "ಒಮ್ಮೆ ಬ್ಯಾಂಕ್ ನೋಟುಗಳನ್ನಾದರೂ ಬದಲಾಯಿಸಬಹುದು. ಆದರೆ ವಿಕೆಟ್‌ಗಳ ಹಿಂದಿನ ಧೋನಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ನಹೀ ಬದಲ್ ಸಕ್ತೇ.. ಎಂಎಸ್ ಧೋನಿ ಎಂದಿನಂತೆ ವೇಗವಾಗಿ" ಎಂದು ಬರೆದಿದ್ದಾರೆ. ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದು, ಮಿಂಚಿನ ವೇಗದ ಕೈಗಳು. ಇದು ಎಂಎಸ್ ಧೋನಿ ವಿಶೇಷತೆ ಎಂದು ಬರೆದಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಟಿ 20ಯಲ್ಲಿ ಈವರೆಗೆ 295 ಸ್ಟಂಪಿಂಗ್ ಮಾಡುವ ಮೂಲಕ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ 243 ಇನ್ನಿಂಗ್ಸ್‌ಗಳಲ್ಲಿ 137 ಕ್ಯಾಚ್‌ಗಳು ಮತ್ತು 42 ಸ್ಟಂಪಿಂಗ್‌ಗಳು ಸೇರಿದಂತೆ ಒಟ್ಟು 179 ಔಟ್‌ಗಳೊಂದಿಗೆ ವಿಕೆಟ್ ಕೀಪಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 250 ಐಪಿಎಲ್ ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು.
ಇದನ್ನೂ ಓದಿ: ಅಭಿಮಾನಿಗಳ ಪ್ರೀತಿ ನೋಡಿ ಅವರಿಗೆ ಮತ್ತೊಂದು ಸೀಸನ್ ಗಿಫ್ಟ್ ಕೊಡುವ ಆಸೆ ಇದೆ: ಧೋನಿ