ಮುಂಬೈ (ಮಹಾರಾಷ್ಟ್ರ): ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ಗೆ ಮುಂಬೈ ಇಂಡಿಯನ್ಸ್ ತಂಡ ಎಂಟ್ರಿ ಕೊಟ್ಟಿದೆ. ಕ್ಯಾಮರೂನ್ ಗ್ರೀನ್ ಮತ್ತು ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 16 ಅಂಕಗಳೊಂದಿಗೆ ಮುಂಬೈ ತಂಡ ನಾಲ್ಕನೇ ಸ್ಥಾನಕ್ಕೆ ಏರಿದೆ. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದರೆ ಮುಂಬೈ ತಂಡ ಕುಸಿಯಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಇಂದು ನಡೆಯುವ ಪಂದ್ಯದ ಮೇಲೆ ರೋಹಿತ ಪಡೆಯ ಭವಿಷ್ಯ ನಿಂತಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಇದರಿಂದ ಮೊದಲ ಬ್ಯಾಟಿಂಗ್ಗೆ ಇಳಿದಿದ್ದ ಹೈದರಾಬಾದ್ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು ಬರೋಬ್ಬರಿ 200 ರನ್ ಪೇರಿಸಿತ್ತು. ಈ ಕಠಿಣ ಗುರಿ ಬೆಟ್ಟಿದ್ದ ಮುಂಬೈ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕರಾದ ಇಶಾನ್ ಕಿಶನ್ 14 ರನ್ ಸಿಡಿಸಿ ನಿರ್ಗಮಿಸಿದರೂ ಕ್ಯಾಮರೂನ್ ಗ್ರೀನ್ ಮತ್ತು ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್ಗೆ 128 ರನ್ಗಳ ಭರ್ಜರಿ ಜೊತೆಯಾಟ ನೀಡಿತು. ರೋಹಿತ್ 37 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ 56 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ಕ್ಯಾಮರೂನ್ ಗ್ರೀನ್ ಬಿರುಸಿನಿಂದ ಬ್ಯಾಟಿಂಗ್ ಮಾಡಿದರು. 48 ಎಸತೆಗಳನ್ನು ಎದುರಿಸಿ ಭರ್ಜರಿ ತಲಾ ಎಂಟು ಸಿಕ್ಸರ್ ಮತ್ತು ಬೌಂಡರಿಗಳ ಸಮೇತ ಅಜೇಯ 100 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ನಂತರ ಕ್ಯಾಮರೂನ್ಗೆ ಉತ್ತಮ ಸಾಥ್ ನೀಡಿದ ಸೂರ್ಯಕುಮಾರ್ ಯಾದವ್ 16 ಬಾಲ್ಗಳಲ್ಲಿ ನಾಲ್ಕು ಬೌಂಡರಿಗಳ ಸಮೇತ 25 ರನ್ಗಳ ಕಾಣಿಕೆ ನೀಡಿದರು. ಇದರಿಂದ ಇನ್ನೂ ಎರಡು ಓವರ್ಗಳ ಬಾಕಿ ಇರುವಾಗಲೇ ಮುಂಬೈ ತಂಡ 201 ರನ್ ಸಿಡಿಸಿ ಗೆಲುವಿನ ಕೇಕೆ ಹಾಕಿತು.
-
𝗪𝗛𝗔𝗧. 𝗔. 𝗖𝗛𝗔𝗦𝗘!@mipaltan stay alive in #TATAIPL 2023 courtesy of an exceptional batting display and an 8-wicket win over #SRH 👏🏻👏🏻#MIvSRH pic.twitter.com/t1qXyVbkqG
— IndianPremierLeague (@IPL) May 21, 2023 " class="align-text-top noRightClick twitterSection" data="
">𝗪𝗛𝗔𝗧. 𝗔. 𝗖𝗛𝗔𝗦𝗘!@mipaltan stay alive in #TATAIPL 2023 courtesy of an exceptional batting display and an 8-wicket win over #SRH 👏🏻👏🏻#MIvSRH pic.twitter.com/t1qXyVbkqG
— IndianPremierLeague (@IPL) May 21, 2023𝗪𝗛𝗔𝗧. 𝗔. 𝗖𝗛𝗔𝗦𝗘!@mipaltan stay alive in #TATAIPL 2023 courtesy of an exceptional batting display and an 8-wicket win over #SRH 👏🏻👏🏻#MIvSRH pic.twitter.com/t1qXyVbkqG
— IndianPremierLeague (@IPL) May 21, 2023
ಇದಕ್ಕೂ ಮುನ್ನ ಮೊದಲ ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಆರಂಭವನ್ನೇ ಪಡೆಯಿತು. ಆರಂಭಿಕ ಆಟಗಾರರಾದ ವಿವ್ರಾಂತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್ಗೆ ಭದ್ರ ಅಡಿಪಾಯ ಹಾಕಿದ್ದರು. ಇಬ್ಬರು ಕೂಡ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ 140 ರನ್ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಿವ್ರಾಂತ್ ಶರ್ಮಾ 47 ಎಸೆತಗಳಲ್ಲಿ ಒಂಭತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ಗಳೊಂದಿಗೆ 69 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ, ಮಯಾಂಕ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. 46 ಬಾಲ್ಗಳನ್ನು ಎದುರಿಸಿದ ಮಯಾಂಕ್ ಎಂಟು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ಗಳ ಸಹಿತ 83 ರನ್ ಸಿಡಿಸಿ ನಿರ್ಗಮಿಸಿದರು. ಈ ವೇಳೆ ಸನ್ರೈಸರ್ಸ್ ತಂಡ 16.4 ಓವರ್ಗಳಿಗೆ 174 ರನ್ಗಳನ್ನು ಕಲೆ ಹಾಕಿ ಸುಭದ್ರ ಸ್ಥಿತಿಗೆ ತಲುಪಿತ್ತು. ಆದರೆ, ನಂತರದ ಬ್ಯಾಟರ್ಗಳಿಂದ ಹೆಚ್ಚಿನ ರನ್ಗಳು ಮೂಡಿ ಬರಲಿಲ್ಲ.
ಅಂತಿಮ ಮೂರು ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಕೇವಲ 26 ರನ್ ಗಳಿಸಲಷ್ಟೇ ಶಕ್ತವಾಯಿತು. ಗ್ಲೆನ್ ಫಿಲಿಪ್ಸ್ 1 ರನ್, ಹೆನ್ರಿಕ್ ಕ್ಲಾಸೆನ್ 18 ರನ್, ಹ್ಯಾರಿ ಬ್ರೂಕ್ ಶೂನ್ಯಕ್ಕೆ ನಿರ್ಗಮಿಸಿದರು. ಐಡೆನ್ ಮಾರ್ಕ್ರಾಮ್ ಅಜೇಯ 13 ಮತ್ತು ಸನ್ವೀರ್ ಸಿಂಗ್ ಅಜೇಯ 4 ರನ್ಗಳ ಕಾಣಿಕೆ ನೀಡಿದರು. ಇದರಿಂದ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು ಸನ್ರೈಸರ್ಸ್ ಹೈದರಾಬಾದ್ 200 ರನ್ಗಳ ಅಡಿ ತಲುಪಿತ್ತು. ಮುಂಬೈ ಪರವಾಗಿ ಆಕಾಶ್ ಮದ್ವಾಲ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಕ್ರಿಸ್ ಜೋರ್ಡನ್ ಒಂದು ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: ಆರ್ಸಿಬಿ, ಮುಂಬೈ, ರಾಯಲ್ಸ್: ಮೂವರಲ್ಲಿ 4ನೇ ಪ್ಲೇಆಫ್ ಸ್ಥಾನ ಯಾರಿಗೆ?