ETV Bharat / sports

ಮುಂಬೈ ವಿರುದ್ಧ ಲಕ್ನೋಗೆ 5 ರನ್‌ಗಳ ಗೆಲುವು: ಅಬ್ಬರಿಸಿದ ಸ್ಟೋಯಿನಿಸ್‌

ಮುಂಬೈ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ 5 ರನ್​ಗಳ ಗೆಲುವು ದಾಖಲಿಸಿತು.

ಲಕ್ನೋಗೆ 5ರನ್​ಗಳ ಗೆಲುವು
ಲಕ್ನೋಗೆ 5ರನ್​ಗಳ ಗೆಲುವು
author img

By

Published : May 17, 2023, 7:57 AM IST

ಲಕ್ನೋ: ಇಂಡಿಯನ್​ ಪ್ರೀಮಿಯರ್​ ಲೀಗ್ ​2023ರ ಮಂಗಳವಾರದ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತವರು ನೆಲದಲ್ಲಿ ಗೆಲುವು ಕಂಡಿತು. ಪ್ಲೇಆಫ್‌ನ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಮುಂಬೈ ತಂಡವನ್ನು 5 ರನ್​ಗಳಿಂದ ಮಣಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಲಕ್ನೋ ನಿಗದಿತ 20 ಓವರ್​ಗಳಲ್ಲಿ 177 ರನ್​ ಕಲೆ ಹಾಕಿತು. 178 ರನ್‌ಗಳ ಗುರಿ ಮುಟ್ಟುವ ಉತ್ಸಾಹದಲ್ಲಿ ಕಣಕ್ಕಿಳಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಮುಂಬೈಗೆ ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿದರು. 90 ರನ್‌​ಗಳ ಜತೆಯಾಟ ನೀಡಿದ ಈ ಜೋಡಿ ಗೆಲುವಿನ ಮುನ್ಸೂಚನೆ ನೀಡಿದರು. ಆದರೆ, ಸ್ಪಿನ್ನರ್​ ರವಿ ಬಿಷ್ನೋಯಿ ಆರಂಭಿಕರ ಆಟಕ್ಕೆ ಕಡಿವಾಣ​ ಹಾಕಿದರು. ರೋಹಿತ್ ಶರ್ಮಾ ಮತ್ತು ಇಶನ್​ ಕಿಶನ್​ ಅವರ ವಿಕೆಟ್​ ಪಡೆದು ಶಾಕ್​ ನೀಡಿದರು.

ಆರಂಭದಿಂದಲೂ ಬೌಲಿಂಗ್​ನಲ್ಲಿ ಹಿಡಿತ ಸಾಧಿಸಲು ಪರದಾಡಿದ ಲಕ್ನೋ ಬೌಲರ್​ಗಳು ಈ ಇಬ್ಬರು ಬ್ಯಾಟರ್​ಗಳ ವಿಕೆಟ್​ ಉರುಳಿಸಿದ ನಂತರ ಪಂದ್ಯಲ್ಲಿ ಹಿಡಿತ ಸಾಧಿಸಿದರು. ಮುಂಬೈ ಸ್ಕೋರ್​ ಗಳಿಸಲು ಪರದಾಡುವಂತೆ ಬೌಲಿಂಗ್​ ಮಾಡಿದರು. ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಾದ ಸೂರ್ಯಕುಮಾರ್​ ಯಾದವ್​, ನೆಹಾಲ್​ ವದೇರಾ, ವಿಷ್ಣು ವಿನೋದ್​ರನ್ನು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲು ಬಿಡಲಿಲ್ಲ. ನಿಧಾನಗತಿ ಪಿಚ್​ನಲ್ಲಿ ಟಿಮ್ ಡೇವಿಡ್​ ಬೌಂಡರಿಗಳನ್ನು ಸಿಡಿಸಿ ಪಂದ್ಯವನ್ನು ಅಂತಿಮ ಹಂತದವರೆಗೆ ಕೊಂಡೊಯ್ದರು.

ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಕೊನೆಯ ಆರು ಎಸೆತಗಳಲ್ಲಿ ಮುಂಬೈ ಗೆಲುವಿಗೆ 11 ರನ್​ಗಳ ಅವಶ್ಯಕತೆ ಇತ್ತು. ಕ್ರೀಸ್​ನಲ್ಲಿ ಟಿಮ್​ ಡೇವಿಡ್​ ಮತ್ತು ಕಾಮರೂನ್​ ಗ್ರೀನ್​ ಇದ್ದರೂ ಲಕ್ನೋ ಬೌಲರ್​ ಮೊಹಿಸಿನ್​ ಖಾನ್ ಉತ್ತಮ ಬೌಲಿಂಗ್​​ ಮಾಡಿ ಕೊನೆಯ ಓವರ್​ನಲ್ಲಿ ಕೇವಲ 6 ರನ್ ಮಾತ್ರ ಬಿಟ್ಟು ಕೊಟ್ಟರು. ಈ ಮೂಲಕ ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಲಕ್ನೋ ಪರ ಸ್ಟೊಯಿನಿಸ್ (89), ಕೃನಾಲ್ ಪಾಂಡ್ಯ (49) ಬಿರುಸಿನ ಪ್ರದರ್ಶನದಿಂದ 3 ವಿಕೆಟ್​ ನಷ್ಟಕ್ಕೆ 177 ರನ್​ಗಳನ್ನು ಕಲೆ ಹಾಕಿತು. ಪಂದ್ಯಾರಂಭದಿಂದ ಬೌಲಿಂಗ್​ನಲ್ಲಿ ಹಿಡಿತ ಸಾಧಿಸಿದ್ದ ಮುಂಬೈ ಕೊನೆಯ ಮೂರು ಓವರ್​ಗಳಲ್ಲಿ 54 ರನ್ ಬಿಟ್ಟುಕೊಟ್ಟಿತು.

ಮುಂಬೈ ವಿರುದ್ಧದ ಈ ಗೆಲುವಿನೊಂದಿಗೆ ಲಕ್ನೋ ತನ್ನ ಪ್ಲೇಆಫ್ ಅವಕಾಶಗಳನ್ನು ಸುಧಾರಿಸಿತು. ಲಕ್ನೋಗೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಆ ಪಂದ್ಯದಲ್ಲಿ ಗೆದ್ದರೆ ನೇರ ಪ್ಲೇ ಆಫ್‌ ಪ್ರವೇಶಿಸಲಿದೆ. ಲಕ್ನೋ ಪ್ರಸ್ತುತ 13 ಪಂದ್ಯಗಳಿಂದ 7 ಗೆಲುವಿನೊಂದಿಗೆ 15 ಅಂಕ ಹೊಂದಿದೆ. ಸೋಲಿನ ಸಂದರ್ಭದಲ್ಲಿ ಇತರ ತಂಡಗಳ ಅಂಕಗಳು ಮತ್ತು ನಿವ್ವಳ ರನ್ ರೇಟ್ ನಿರ್ಣಾಯಕವಾಗಿರುತ್ತದೆ. ಮುಂಬೈಗೆ ಕೇವಲ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಮುಂಬೈ 7 ಗೆಲುವಿನೊಂದಿಗೆ 14 ಅಂಕ ಹೊಂದಿದೆ. ಕೊನೆಯ ಪಂದ್ಯದಲ್ಲಿ ಗೆದ್ದರೆ ಇತರ ತಂಡಗಳ ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್ ರೇಸ್‌ನಲ್ಲಿರುತ್ತದೆ.

ಸ್ಕೋರ್​ ಕಾರ್ಡ್​, ಲಕ್ನೋ : ದೀಪಕ್​ ಹೂಡಾ (5), ಡಿ ಕಾಕ್​(16), ಕೃನಾಲ್​ ಪಾಂಡ್ಯ (46), ಸ್ಟೋನಿಸ್​ (89), ಪೂರನ್​(8).

ಬೌಲಿಂಗ್​ : ಬ್ರೆಹೆಂಡ್ರಾಫ್​ (30ಕ್ಕೆ2), ಚಾವ್ಲ (26ಕ್ಕೆ1)

ಮುಂಬೈ : ಇಶನ್​ ಕಿಶಾನ್​ (59), ರೋಹಿತ್​ ಶರ್ಮಾ (37), ಸೂರ್ಯಕುಮಾರ್​ (7), ವದೇರಾ (16), ಟಿಮ್​ ಡೇವಿಡ್​(32)

ಬೌಲಿಂಗ್: ಮೋಹಿಸಿನ್​ (26ಕ್ಕೆ1), ಯಶ್ ಠಾಕೂರ್​, ರವಿ ಬಿಷ್ನೋಯಿ ತಲಾ ಒಂದು ವಿಕೆಟ್​

ಇದನ್ನೂ ಓದಿ: 'ದಾದ'ನಿಗೆ ಝೆಡ್ ಪ್ಲಸ್‌​ ಭದ್ರತೆ ನೀಡಲು ಮುಂದಾದ 'ದೀದಿ' ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.