ETV Bharat / sports

IPL 2023: ಡೆಲ್ಲಿ ಕ್ಯಾಪಿಟಲ್ಸ್​ಗೆ ದಾದಾ ಮುಖ್ಯ ಕೋಚ್​ ಆಗಬೇಕು - ಇರ್ಫಾನ್​ ಪಠಾಣ್

ಡೆಲ್ಲಿ ಕ್ಯಾಪಿಟಲ್ಸ್​ ತಂಡ 2023ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಮೂರು ಪಂದ್ಯ ಬಾಕಿ ಇರುವಾಗಲೇ ಲೀಗ್​ನಿಂದ ಡಿಸಿ ಹೊರಬಿದ್ದಿತ್ತು. ಇಂದು ಪಂಜಾಬ್​ ವಿರುದ್ಧದ ಔಪಚಾರಿಕ ಪಂದ್ಯಕ್ಕೂ ಮುನ್ನ ಪಠಾಣ್​ ಡೆಲ್ಲಿಗೆ ಗಂಗೂಲಿ ಕೋಚ್​ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

author img

By

Published : May 17, 2023, 9:06 PM IST

IPL 2023: Ganguly should now be given the role of DC's head coach, says Irfan Pathan
IPL 2023: ಡೆಲ್ಲಿ ಕ್ಯಾಪಿಟಲ್ಸ್​ಗೆ ದಾದಾ ಮುಖ್ಯ ಕೋಚ್​ ಆಗಬೇಕು - ಇರ್ಫಾನ್​ ಪಠಾಣ್

ನವದೆಹಲಿ: ಐಪಿಎಲ್‌ನ ಮುಂದಿನ ಸೀಸನ್‌ನತ್ತ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಗಮನವನ್ನು ಹರಿಸಿರುವುದರಿಂದ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಈಗ ತಂಡದ ಮುಖ್ಯ ಕೋಚ್ ಪಾತ್ರವನ್ನು ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರಿಗೆ ನೀಡಬೇಕು. ದೆಹಲಿ ಡಗೌಟ್‌ನಲ್ಲಿ ಸೌರವ್ ಗಂಗೂಲಿ ಉಪಸ್ಥಿತಿಯು ದೊಡ್ಡ ವಿಷಯವಾಗಿದೆ. ದಾದಾಗೆ ಕೋಚ್ ಜವಾಬ್ದಾರಿಯನ್ನು ನೀಡಿದರೆ, ಅವರು ಈ ತಂಡದಲ್ಲಿ ದೊಡ್ಡ ಬದಲಾವಣೆ ಮಾಡಬಹುದು ಎಂದು ನಾನು ಭಾವಿಸುತ್ತೇನೆ. ದಾದಾಗೆ ಭಾರತೀಯ ಆಟಗಾರರ ಆಟದ ಬಗ್ಗೆ ಜ್ಞಾನವಿದೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ಹೇಗೆ ನಡೆಸಿಕೊಳ್ಳಬೇಕು ಎಂದು ಗಂಗೂಲಿ ಬಲ್ಲರು ಹೀಗಾಗಿ ಡೆಲ್ಲಿ ಅದರ ಲಾಭವನ್ನು ಪಡೆದುಕೊಳ್ಳಬೇಕು" ಎಂದು ಪಠಾಣ್ ಹೇಳಿದರು.

"ಟಾಸ್ ಸಮಯದಲ್ಲಿ, ವಾರ್ನರ್ ಅವರು ತಮ್ಮ ತಂಡವು ಮುಂದಿನ ಋತುವಿಗಾಗಿ ತಯಾರಿ ಆರಂಭಿಸಿದೆ ಮತ್ತು ಈ ಹಿನ್ನೆಲೆಯಲ್ಲಿ ಗಂಗೂಲಿಯನ್ನು ಬದಲಾದ ಪಾತ್ರದಲ್ಲಿ ನೋಡುವುದು ತಪ್ಪಲ್ಲ" ಎಂದು ಹೇಳಿದ್ದಾರೆ. ಐಪಿಎಲ್ 2023 ರಲ್ಲಿ ಪ್ಲೇಆಫ್‌ಗಳ ರೇಸ್ ತೀವ್ರವಾಗಿದೆ. ಅಗ್ರ ನಾಲ್ಕು ಸ್ಥಾನಕ್ಕಾಗಿ ಪೈಪೋಟಿ 8 ತಂಡಗಳಲ್ಲಿ ಜೋರಾಗಿದೆ. 8 ರಲ್ಲಿ ಗುಜರಾತ್​ ಟೈಟಾನ್ಸ್​ ಕ್ವಾಲಿಫೈ ಆಗಿದ್ದರೂ ಅಗ್ರ ಸ್ಥಾನ ಉಳಿಸಿಕೊಳ್ಳಲು ಪಂದ್ಯ ಗೆಲ್ಲುವ ಅಗತ್ಯವಿದೆ.

ಇಂದು ಪಂಜಾಬ್​ನ್ನು ಡೆಲ್ಲಿ ಔಪಚಾರಿಕವಾಗಿ ಎದುರಿಸಲಿದೆ. ಏಕೆಂದರೆ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್​​ ಲೀಗ್​ನಿಂದ ಹೊರಗುಳಿದೆ. ಆದರೆ ವಾರ್ನರ್​ ಪಡೆ ಪಂಜಾಬ್​ ಎದುರು ಕಳೆದ ಪಂದ್ಯದಲ್ಲಿ ಸೋಲನುಭವಿಸಿದ್ದು, ಇಂದು ಸೇಡು ತೀರಿಸಿಕೊಳ್ಳಲು ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ತಯಾರಿದೆ. ಕಳೆದ ಪಂದ್ಯದಲ್ಲಿ ಪಂಜಾಬ್​ನ ಯುವ ಆಟಗಾರ ಪ್ರಭಾಸಿಮ್ರಾನ್ ಸಿಂಗ್ ಐಪಿಎಲ್​ ಚೊಚ್ಚಲ ಶತಕ ದಾಖಲಿಸಿದ್ದರು. ಹೀಗಾಗಿ ಅವರ ಬ್ಯಾಟಿಂಗ್​ ಬಗ್ಗೆ ಇಂದು ಸಹ ಇರ್ಫಾನ್​ ನಿರೀಕ್ಷೆ ಇಟ್ಟಿದ್ದಾರೆ.

"ಪ್ರಭ್‌ಸಿಮ್ರಾನ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅನುಭವಿ ಬ್ಯಾಟರ್​ ನಂತೆ ಕಳೆದ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಚಿಕ್ಕ ವಯಸ್ಸಿನಲ್ಲೇ ಅವರ ಕೌಶಲ್ಯ ಮತ್ತು ಶಕ್ತಿಯಿಂದ ಉತ್ತಮ ಬ್ಯಾಟಿಂಗ್​ ನಿರ್ವಹಣೆ ಮಾಡಿದ್ದಾರೆ. ಅವರು ಎಲ್ಲಾ ರೀತಿಯ ಶಾಟ್​ಗಳನ್ನು ಸರಳವಾಗಿ ಆಡುತ್ತಾರೆ. ಪ್ರಭ್‌ಸಿಮ್ರಾನ್ ಮುಂದಿನ ಸ್ಟಾರ್​ ಆಟಗಾರರಾಗಲಿದ್ದಾರೆ.

ಐಪಿಎಲ್​ನ ಸಂಪ್ರದಾಯದಂತೆ ಇಂತಿಹ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ತಂಡದಲ್ಲಿ ಮಿಂಚುತ್ತಾರೆ. ಪಂದ್ಯವನ್ನು ಕೊನೆಯು ವರೆಗೂ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತರೆ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಬ್ಯಾಟರ್​" ಎಂದು ಯುವ ಬ್ಯಾಟರ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಮಾಜಿ ಆಟಗಾರ ಕೈಫ್​ ಅವರು ನಿನ್ನೆ ನಡೆದ ಪಂದ್ಯದಲ್ಲಿ ಮೊಹ್ಸಿನ್ ಖಾನ್ ಮಾಡಿದ ಬೌಲಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಟಿಮ್ ಡೇವಿಡ್ ರೀತಿ ದೊಡ್ಡ ಹೊಡೆತಗಳ ಬ್ಯಾಟರ್​ನನ್ನು ಮೊಹ್ಸಿನ್ ಖಾನ್ ಒತ್ತಡದ ನಡುವೆ ಉತ್ತಮವಾಗಿ ನಿಯಂತ್ರಿಸಿದ್ದಾರೆ. ಐಪಿಎಲ್ 2023 ರಲ್ಲಿ ಯುಪಿ ಕ್ರಿಕೆಟಿಗರು ಮಿಂಚುತ್ತಿದ್ದಾರೆ. ರಿಂಕು ಸಿಂಗ್ ಕೋಲ್ಕತ್ತಾಗೆ ಇಂತಹ ಆಟವನ್ನು ಬ್ಯಾಟಿಂಗ್​ನಲ್ಲಿ ತೋರಿದರೆ, ಮೊಹ್ಸಿನ್ ಬೌಲಿಂಗ್​ನಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ" ಎಂದಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ ಸಿದ್ಧತೆಯಲ್ಲಿ ಮಹಿಳಾ ಹಾಕಿ ತಂಡ: ಆಸ್ಟ್ರೇಲಿಯಾ ಪ್ರವಾಸದ ವೇಳಾಪಟ್ಟಿ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.