ಮುಂಬೈ ಇಂಡಿಯನ್ಸ್ ತಂಡವು ಈ ಬಾರಿಯೂ ಸಹ ಸೋಲಿನೊಂದಿಗೆ ಐಪಿಎಲ್ ಅಭಿಯಾನವನ್ನು ಆರಂಭಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭಾನುವಾರ ನಡೆದ ಆರಂಭಿಕ ಪಂದ್ಯದಲ್ಲಿ 8 ವಿಕೆಟ್ಗಳ ಸೋಲು ಕಂಡಿದೆ. ಇನ್ನೊಂದೆಡೆ ತವರಿನಲ್ಲಿ ಅಬ್ಬರಿಸಿದ ಬೆಂಗಳೂರು ತಂಡ 2023ರ ಐಪಿಎಲ್ಗೆ ಭರ್ಜರಿ ಗೆಲುವಿನ ಎಂಟ್ರಿ ಕೊಟ್ಟಿದೆ. ಆರ್ಸಿಬಿ ಪರ ವಿರಾಟ್ ಕೊಹ್ಲಿ (82*) ಹಾಗೂ ನಾಯಕ ಫಾಫ್ ಡುಪ್ಲೆಸಿಸ್ (73) ಅಬ್ಬರಿಸಿದರೆ, ಮುಂಬೈನ ಸೋಲಿನ ನಡುವೆಯೂ ಕೆಲ ಯುವ ಆಟಗಾರರ ಬ್ಯಾಟಿಂಗ್ ಪ್ರದರ್ಶನವು ಮೆಚ್ಚುಗೆಗೆ ಪಾತ್ರವಾಯಿತು.
5 ಬಾರಿಯ ಚಾಂಪಿಯನ್ ತಂಡ ಸಂಕಷ್ಟಕ್ಕೆ ಸಿಲುಕಿದ್ದಾಗ ಎದೆಗುಂದದೆ ಬ್ಯಾಟ್ ಮಾಡಿದ ತಿಲಕ್ ವರ್ಮಾ (84 ರನ್, 46 ಎಸೆತ) ಹಾಗೂ ನೆಹಾಲ್ ವಧೇರಾ (21, 13 ಎಸೆತ) ಬ್ಯಾಟಿಂಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಅದರಲ್ಲೂ ಪಾದಾರ್ಪಣೆ ಪಂದ್ಯದಲ್ಲೇ ಭರ್ಜರಿ ಹೊಡೆತಗಳಿಂದ ಮಿಂಚಿದ ನೆಹಾಲ್ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ಒಂದರ ಹಿಂದೆ ಒಂದು ಸಿಕ್ಸರ್ ಸಿಡಿಸಿದರು. ಎರಡನೇ ಸಿಕ್ಸರ್ನಲ್ಲಿ ಚೆಂಡನ್ನು ಮೈದಾನದಿಂದ ಹೊರಗಟ್ಟಿದ ನೆಹಾಲ್ ತಮ್ಮ ಬ್ಯಾಟಿಂಗ್ ತಾಕತ್ತನ್ನು ತೋರ್ಪಡಿಸಿದರು. ನೆಹಾಲ್ ಸಿಕ್ಸರ್ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊದಲ ಪಂದ್ಯದಲ್ಲೇ 22ರ ಹರೆಯದ ಯುವ ಕ್ರಿಕೆಟರ್ ಬ್ಯಾಟಿಂಗ್ ಕೌಶಲ್ಯಕ್ಕೆ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ.
-
22-year-old, on his debut match, Big 3 of MI top order in dugout & this kid played one of the shots in this IPL.
— Johns. (@CricCrazyJohns) April 2, 2023 " class="align-text-top noRightClick twitterSection" data="
Nehal Wadhera, brilliant. pic.twitter.com/wKisjarHmh
">22-year-old, on his debut match, Big 3 of MI top order in dugout & this kid played one of the shots in this IPL.
— Johns. (@CricCrazyJohns) April 2, 2023
Nehal Wadhera, brilliant. pic.twitter.com/wKisjarHmh22-year-old, on his debut match, Big 3 of MI top order in dugout & this kid played one of the shots in this IPL.
— Johns. (@CricCrazyJohns) April 2, 2023
Nehal Wadhera, brilliant. pic.twitter.com/wKisjarHmh
ಪಂಜಾಬ್ನ ಲುಧಿಯಾನ ಮೂಲದ ಯುವ ಕ್ರಿಕೆಟಿಗ ನೆಹಾಲ್ ವಧೇರಾ ಐಪಿಎಲ್ 2023ರ ಟೂರ್ನಿಯಲ್ಲಿ ಕೇವಲ 20 ಲಕ್ಷ ರೂ.ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರು ವಿರುದ್ಧ ಮುಂಬೈ ತಂಡವು 48 ರನ್ಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದಾಗ ಕ್ರೀಸ್ಗೆ ಬಂದ ನೆಹಾಲ್ ಜೊತೆಗಾರ ತಿಲಕ್ ವರ್ಮಾ ಜೊತೆ ಸೇರಿ 50 ರನ್ಗಳ ಅಮೂಲ್ಯ ಜೊತೆಯಾಟ ಆಡಿದರು. ಒಂದು ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 21 ರನ್ ಬಾರಿಸಿ, ತಿಲಕ್ ವರ್ಮಾಗೆ ತಕ್ಕ ಸಾಥ್ ನೀಡಿದರು.
ಅಂಡರ್-19ನಿಂದಲೂ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ತೋರುತ್ತಿರುವ ವಧೇರಾ ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ತೋರಿದ್ದಾರೆ. ನೆಹಾಲ್ ಬ್ಯಾಟಿಂಗ್ ಶೈಲಿಯನ್ನು ಭಾರತ ತಂಡದ ಮಾಜಿ ದಿಗ್ಗಜ ಯುವರಾಜ್ ಸಿಂಗ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. 2018ರಲ್ಲಿ ಅಂಡರ್-19 ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಅರ್ಧ ಶತಕಗಳನ್ನು ಗಳಿಸುವ ಮೂಲಕ ತಮ್ಮ ಪ್ರತಿಭೆ ತೋರಿದ್ದರು. 2022ರ ಪಂಜಾಬ್ ರಾಜ್ಯ ಅಂತರ್ ಜಿಲ್ಲಾ ಪಂದ್ಯಾವಳಿಯಲ್ಲಿ ಬಟಿಂಡಾ ಅಂಡರ್-23 ವಿರುದ್ಧ 578 ರನ್ಗಳ ಬೃಹತ್ ಮೊತ್ತ ಬಾರಿಸಿ ಕ್ರಿಕೆಟ್ ಲೋಕವನ್ನು ಬೆರಗುಗೊಳಿಸಿದ್ದರು.
ಅಲ್ಲದೆ ಗುಜರಾತ್ ವಿರುದ್ಧದ ರಣಜಿ ಚೊಚ್ಚಲ ಪಂದ್ಯದಲ್ಲಿ ಶತಕ (123) ಗಳಿಸಿ ಸಂಭ್ರಮಿಸಿದ್ದರು. ಬಳಿಕ 2022-23ರ ಋತುವಿನಲ್ಲಿ ಮಧ್ಯಪ್ರದೇಶ ವಿರುದ್ಧ ದ್ವಿಶತಕ (214) ಗಳಿಸುವ ಮೂಲಕ ಮಿಂಚಿನ ಪ್ರದರ್ಶನ ಮುಂದುವರೆಸಿದ್ದರು. ವಧೇರಾ ಭರವಸೆಯ ಯುವ ಕ್ರಿಕೆಟಿಗನಾಗಿದ್ದು, ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹಲವು ಕ್ರಿಕೆಟಿಗರು ಮೆಚ್ಚಿದ್ದಾರೆ. ವಧೇರಾ ಪ್ರತಿಭೆ ಗುರುತಿಸಿದ್ದ ಮುಂಬೈ ಇಂಡಿಯನ್ಸ್ 2023ರ ಐಪಿಎಲ್ ಹರಾಜಿನಲ್ಲಿ ಖರೀದಿಸಿದೆ.
ಇದನ್ನೂ ಓದಿ: ವಿರಾಟ್-ಡುಪ್ಲೆಸಿಸ್ ಮಿಂಚು: ಮುಂಬೈ ವಿರುದ್ಧ 4ನೇ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆ