ಚೆನ್ನೈ (ತಮಿಳುನಾಡು): ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದು ಕಮಾಲ್ ಮಾಡಿದರೆ, ಬ್ಯಾಟಿಂಗ್ನಲ್ಲಿ ಆರಂಭಿಕರಾದ ಡೆವೂನ್ ಕಾನ್ವೆ ಮತ್ತು ರುತುರಾಜ್ ಗಾಯಕ್ವಾಡ್ ಜೋಡಿ 87 ರನ್ಗಳ ಉತ್ತಮ ಜೊತೆಯಾಟ ನೀಡಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 7 ವಿಕೆಟ್ಗಳಿಂದ ಗೆಲುವಿನ ದಡ ಸೇರಿಸಿದರು. ಬೌಲಿಂಗ್ನಲ್ಲಿ ಬಲಿಷ್ಠವಾಗಿರುವ ಹೈದರಾಬಾದ್ ಪಡೆ 1 ಓವರ್ 2 ಬಾಲ್ ಇರುವಂತೆಯೇ ಸೋಲು ಕಂಡಿತು.
134ರನ್ ಸರಳ ಗುರಿ ಬೆನ್ನತ್ತಿದ ಚೆನ್ನೈಗೆ ಉತ್ತಮ ಆರಂಭ ದೊರೆಯಿತು. ಭರ್ಜರಿ ಫಾರ್ಮ್ನಲ್ಲಿರುವ ಆರಂಭಿಕರಾದ ಡೆವೂನ್ ಕಾನ್ವೆ ಮತ್ತು ರುತುರಾಜ್ ಗಾಯಕ್ವಾಡ್ ಅರ್ಧಶತಕ ಮೀರಿ ಜೊತೆಯಾಟ ಮಾಡಿದರು. 35 ರನ್ ಗಳಿಸಿ ಆಡುತ್ತಿದ್ದ ಗಾಯಕ್ವಾಡ್ ದುರಾದೃಷ್ಟದಿಂದ ಕಾನ್ವೆ ಹೊಡೆದ ಸ್ಟ್ರೈಟ್ ಡ್ರೈವ್ನಿಂದ ರನ್ ಔಟ್ಗೆ ಬಲಿಯಾದರು. ಕಾನ್ವೆ ಅವರು ಉಮ್ರಾನ್ ಮಲಿಕ್ ಎಸೆತವನ್ನು ನೇರವಾಗಿ ಕಳಿಸಿದ್ದು, ಬೌಲರ್ ಕೈಗೆ ತಗುಲಿ ವಿಕೆಟ್‌ಗೆ ಬಡಿದ ಕಾರಣ ಗಾಯಕ್ವಾಡ್ ಕ್ರೀಸ್ ತೊರೆಯಬೇಕಾಯಿತು.
ನಂತರ ಬಂದ ಅಜಿಂಕ್ಯ ರಹಾನೆ 9 ರನ್ಗೆ ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ಅಂಬಟಿ ರಾಯುಡು ಸಹ 9 ರನ್ಗೆ ಪೆವಿಲಿಯನ್ ದಾರಿ ಹಿಡಿದರು. ಒಂದೆಡೆ ವಿಕೆಟ್ ಹೋಗುತ್ತಿದ್ದರೂ ನಿಂತು ಕಾನ್ವೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇನ್ನಿಂಗ್ಸ್ನಲ್ಲಿ 57 ಬಾಲ್ಗಳನ್ನು ಎದುರಿಸಿದ ಅವರು 12 ಬೌಂಡರಿ ಮತ್ತು ಒಂದು ಸಿಕ್ಸ್ನಿಂದ ಅಜೇಯ 77 ರನ್ ಗಳಿಸಿ ಐಪಿಎಲ್ನ 6ನೇ ಅರ್ಧಶತಕ ದಾಖಲಿಸಿದರು. 5ನೇ ವಿಕೆಟ್ ಆಗಿ ಬಂದ ಅಲಿ ಕೂಡಾ ಅಜೇಯರಾಗಿ 6 ರನ್ ಗಳಿಸಿದರು. ಚೆನ್ನೈ ಮೂರು ವಿಕೆಟ್ ಕಳೆದುಕೊಂಡು, 1.2 ಓವರ್ ಉಳಿಸಿ ಪಂದ್ಯ ಗೆದ್ದುಕೊಂಡಿತು. ಹೈದರಾಬಾದ್ ಪರ ಮಯಾಂಕ್ ಮಾರ್ಕಂಡೆ 2 ವಿಕೆಟ್ ಪಡೆದರು.
-
For his economical three-wicket haul, @imjadeja becomes our 🔝 performer from the first innings of the #CSKvSRH contest in the #TATAIPL 👌👌
— IndianPremierLeague (@IPL) April 21, 2023 " class="align-text-top noRightClick twitterSection" data="
A look at his bowling summary 🔽 pic.twitter.com/1IbhLEs9Th
">For his economical three-wicket haul, @imjadeja becomes our 🔝 performer from the first innings of the #CSKvSRH contest in the #TATAIPL 👌👌
— IndianPremierLeague (@IPL) April 21, 2023
A look at his bowling summary 🔽 pic.twitter.com/1IbhLEs9ThFor his economical three-wicket haul, @imjadeja becomes our 🔝 performer from the first innings of the #CSKvSRH contest in the #TATAIPL 👌👌
— IndianPremierLeague (@IPL) April 21, 2023
A look at his bowling summary 🔽 pic.twitter.com/1IbhLEs9Th
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಮತ್ತು ಚೆನ್ನೈ ತಂಡದ ಇತರ ಬೌಲರ್ಗಳ ಸಾಂಘಿಕ ದಾಳಿಗೆ ನಲುಗಿದ ಸನ್ ರೈಸರ್ಸ್ ಹೈದರಾಬಾದ್ ನಿಗದಿತ ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟದಿಂದ 134 ರನ್ ಗಳಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹಿಂದಿನ ಪಂದ್ಯಗಳಂತೆ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಈ ಆವೃತ್ತಿಯ ಮೊದಲ ಶತಕ ಗಳಿಸಿದ್ದ ಹ್ಯಾರಿ ಬ್ರೂಕ್ ಮತ್ತೊಂದು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ತಂಡದ ಮೊತ್ತ 35 ಆಗಿದ್ದಾಗ 18 ರನ್ ಗಳಿಸಿದ್ದ ಬ್ರೂಕ್ ಆಕಾಶ್ ಸಿಂಗ್ಗೆ ವಿಕೆಟ್ ಕೊಟ್ಟರು. ಬಳಿಕ ಬಂದ ಯಾರೂ ಕೂಡಾ ಬೃಹತ್ ರನ್ ಗಳಿಸಲಿಲ್ಲ.
ಪಿಚ್ ಅರ್ಥ ಮಾಡಿಕೊಳ್ಳುವುದು ಬ್ಯಾಟರ್ಗಳಿಗೆ ಕಬ್ಬಿಣದ ಕಡಲೆಯಂತಾಯಿತು. ವಿಕೆಟ್‌ಗೆ ಗಟ್ಟಿಯಾಗಿ ನೆಲೆಯೂರುವ ಮೊದಲೇ ಬ್ಯಾಟರ್‌ಗಳನ್ನು ಸಿಎಸ್ಕೆ ಬೌಲರ್ಗಳು ಪೆವಿಲಿಯನ್ ಸೇರಿಸುವ ಕೆಲಸ ಮಾಡಿದರು. ಬ್ರೂಕ್ ನಂತರ ಬಂದ ತ್ರಿಪಾಠಿ ಮತ್ತೋರ್ವ ಅಭಿಷೇಕ್ ಶರ್ಮಾ ಅವರ ಜೊತೆಗೆ ಇನ್ನಿಂಗ್ಸ್ ಮುಂದುವರೆಸಿದರು. ರನ್ ಕದಿಯುವ ಹಸಿವಿನಲ್ಲಿದ್ದ ಅಭಿಷೇಕ್ ಶರ್ಮಾ (34) ರವೀಂದ್ರ ಜಡೇಜಾಗೆ ವಿಕೆಟ್ ಕೊಟ್ಟರು. ಶರ್ಮಾ ಗಳಿಸಿದ 34 ರನ್ ತಂಡದ ಅತಿ ಹೆಚ್ಚಿನ ಮೊತ್ತ ಗಳಿಕೆಯಾಗಿದೆ.
ಉಳಿದಂತೆ, ರಾಹುಲ್ ತ್ರಿಪಾಠಿ (21), ಐಡೆನ್ ಮಾರ್ಕ್ರಾಮ್ (12), ಹೆನ್ರಿಚ್ ಕ್ಲಾಸೆನ್(17) ಮತ್ತು ಮಯಾಂಕ್ ಅಗರ್ವಾಲ್ (2) ಬೇಗ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ (9) ಮತ್ತು ಮಾರ್ಕೊ ಜಾನ್ಸೆನ್ (17*) ತಂಡಕ್ಕೆ ಅಳಿಲ ಸೇವೆಯ ರೀತಿ ರನ್ ಸೇರಿಸಿ ಮೊತ್ತವನ್ನು 134ಕ್ಕೆ ಏರಿಸಿದರು.
ಜಡೇಜಾ 3 ವಿಕೆಟ್ ಪಡೆದರೆ, ಉಳಿದಂತೆ ಆಕಾಶ್ ಸಿಂಗ್, ಮಥೀಶ ಪತಿರಾನ ಮತ್ತು ತುಷಾರ್ ದೇಶಪಾಂಡೆ ತಲಾ ಒಂದು ವಿಕೆಟ್ ಕಬಳಿಸಿದರು. ಕೊನೆಯ ಬಾಲ್ಗೆ ವಾಷಿಂಗ್ಟನ್ ಸುಂದರ್ ರನ್ ಔಟ್ಗೆ ಬಲಿಯಾದರು.
ಇದನ್ನೂ ಓದಿ: CSK vs SRH: ಮೂರನೇ ಸ್ಥಾನ ಉಳಿಸಿಕೊಳ್ಳುವತ್ತ ಧೋನಿ ಚಿತ್ತ.. ಗೆಲುವಿಗೆ ಮಾರ್ಕ್ರಾಮ್ ತಂತ್ರವೇನು?