ಮುಂಬೈ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಡೇವಿಡ್ ವಾರ್ನರ್ ನಿನ್ನೆ ನಾಲ್ಕನೇ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಹೊಸ ಮೈಲಿಗಲ್ಲು ತಲುಪಿದ್ದಾರೆ.
ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿರುವ ಡೇವಿಡ್ ವಾರ್ನರ್, ತನ್ನ ಹಳೆಯ ತಂಡವಾದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಕರ್ಷಕ ಅಜೇಯ 92ರನ್ಗಳಿಕೆ ಮಾಡಿದ್ದಾರೆ. ಈ ಮುಖೇನ ಐಪಿಎಲ್ನಲ್ಲಿ ದಾಖಲೆಯ 54ನೇ ಅರ್ಧಶತಕ ಸಿಡಿಸಿದ್ದು ಒಂದೆಡೆಯಾದರೆ, ಟಿ20 ಕ್ರಿಕೆಟ್ ಇತಿಹಾಸದಲ್ಲೇ 89ನೇ ಫಿಫ್ಟಿ ಬಾರಿಸಿ ಗಮನ ಸೆಳೆದರು. ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಕ್ರಿಸ್ ಗೇಲ್(88 ಅರ್ಧಶತಕ) ದಾಖಲೆಯನ್ನು ಅವರು ಪುಡಿಗಟ್ಟಿದ್ದಾರೆ.
ಇದನ್ನೂ ಓದಿ: ವಾರ್ನರ್, ಪೊವೆಲ್ ಬ್ಯಾಟಿಂಗ್ ವೈಭವಕ್ಕೆ ಒಲಿದ ಜಯ; ಹೈದರಾಬಾದ್‌ಗೆ ಹ್ಯಾಟ್ರಿಕ್ ಸೋಲು
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕ ಸಿಡಿಸಿರುವ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ(77), ಆ್ಯರನ್ ಫಿಂಚ್(70) ರೋಹಿತ್ ಶರ್ಮಾ(69) ಇದ್ದಾರೆ. ವಿಶೇಷವೆಂದರೆ, ಐಪಿಎಲ್ನಲ್ಲೂ ಡೇವಿಡ್ ವಾರ್ನರ್ ಅತಿ ಹೆಚ್ಚು ಅರ್ಧಶತಕದ ಸಾಧನೆ ಮಾಡಿದ್ದು, ಇಲ್ಲಿಯವರೆಗೆ ಒಟ್ಟು 54 ಫಿಫ್ಟಿ ಅವರ ಹೆಸರಿನಲ್ಲಿದೆ. ಇದರ ನಂತರದ ಸ್ಥಾನದಲ್ಲಿ ಶಿಖರ್ ಧವನ್(49), ವಿರಾಟ್ ಕೊಹ್ಲಿ(48) ಹಾಗೂ ಡಿವಿಲಿಯರ್ಸ್(43) ಇದ್ದಾರೆ.
ನಿನ್ನೆಯ ಪಂದ್ಯದಲ್ಲಿ 58 ಎಸೆತಗಳಲ್ಲಿ 3 ಸಿಕ್ಸರ್, 12 ಬೌಂಡರಿ ಸಮೇತ ಅಜೇಯ 92ರನ್ಗಳಿಸಿರುವ ವಾರ್ನರ್, ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.