ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ರೋಹಿತ್ ಬಳಗ ಗೆಲುವು ದಾಖಲು ಮಾಡಿದರೆ ಬೆಂಗಳೂರು ತಂಡ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳಲಿದೆ. ಬೆಂಗಳೂರು ತಂಡ ಪ್ಲೇಆಫ್ ಕನಸು ನನಸಾಗಲು ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ, ಆರ್ಸಿಬಿ ಪ್ಲೇಯರ್ಸ್ ರೋಹಿತ್ ಬಳಗಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಕೊಹ್ಲಿ ಹಾಗೂ ಡುಪ್ಲೆಸಿಸ್ ಬಹಿರಂಗವಾಗಿ ತಮ್ಮ ಬೆಂಬಲವನ್ನ ಮುಂಬೈ ತಂಡಕ್ಕೆ ಸೂಚಿಸಿದ್ದಾರೆ.
-
.@RCBTweets captain @faf1307 & @imVkohli share the microphone duties at Wankhede for an https://t.co/sdVARQFuiM special. 👍 👍 By - @28anand
— IndianPremierLeague (@IPL) May 20, 2022 " class="align-text-top noRightClick twitterSection" data="
P.S - @mipaltan, you know who's backing you against #DC 😉
Full interview 🎥 🔽 #TATAIPL | #RCBvGT https://t.co/w3HllceNNL pic.twitter.com/HRqkTkOleF
">.@RCBTweets captain @faf1307 & @imVkohli share the microphone duties at Wankhede for an https://t.co/sdVARQFuiM special. 👍 👍 By - @28anand
— IndianPremierLeague (@IPL) May 20, 2022
P.S - @mipaltan, you know who's backing you against #DC 😉
Full interview 🎥 🔽 #TATAIPL | #RCBvGT https://t.co/w3HllceNNL pic.twitter.com/HRqkTkOleF.@RCBTweets captain @faf1307 & @imVkohli share the microphone duties at Wankhede for an https://t.co/sdVARQFuiM special. 👍 👍 By - @28anand
— IndianPremierLeague (@IPL) May 20, 2022
P.S - @mipaltan, you know who's backing you against #DC 😉
Full interview 🎥 🔽 #TATAIPL | #RCBvGT https://t.co/w3HllceNNL pic.twitter.com/HRqkTkOleF
ಮುಂಬೈನ ವಾಖೆಂಡೆ ಮೈದಾನದಲ್ಲಿ ರಾತ್ರಿ 7:30ಕ್ಕೆ ಪಂದ್ಯ ನಡೆಯಲಿದ್ದು, ಈ ವೇಳೆ, ಆರ್ಸಿಬಿ ಪಂದ್ಯ ವೀಕ್ಷಣೆ ಮಾಡಲು ಮುಂದಾಗಿದ್ದು, ತನ್ನ ಬೆಂಬಲ ವ್ಯಕ್ತಪಡಿಸಲಿದೆ. ಕೊನೆ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ-ಆಫ್ ಆಸೆ ಜೀವಂತವಾಗಿಟ್ಟುಕೊಂಡಿದೆ. ಆದರೆ, ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಸಾಧಿಸಬೇಕಾಗಿದೆ.
ಗುಜರಾತ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ್ದ ಡುಪ್ಲೆಸಿಸ್-ವಿರಾಟ್, ಎರಡು ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಮುಂಬೈ ತಂಡಕ್ಕೆ ಬೆಂಬಲ ಸೂಚಿಸಲಿದ್ದೇವೆ. ಮುಂಬೈ ತಂಡಕ್ಕೆ ಮತ್ತಿಬ್ಬರು ಬೆಂಬಲಿಗರು ಸೇರಿಕೊಂಡಿದ್ದು, ನಾವು 25 ಸದಸ್ಯರನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ಕ್ಯಾಪ್ಟನ್ ಡುಪ್ಲೆಸಿಸ್, ಮುಂಬೈ... ಮುಂಬೈ ಎಂದು ಜೈಕಾರ ಹಾಕಿದ್ದು, ಕ್ರೀಡಾಂಗಣದಲ್ಲಿ ನಾವು ಮುಂಬೈ ತಂಡಕ್ಕೆ ಬೆಂಬಲ ನೀಡಲಿದ್ದೇವೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ಆಡಿರುವ 14 ಪಂದ್ಯಗಳ ಪೈಕಿ 8ರಲ್ಲಿ ಗೆಲುವು ದಾಖಲು ಮಾಡಿ 16 ಪಾಯಿಂಟ್ ಗಳಿಕೆ ಮಾಡಿದ್ದು, ಸದ್ಯ 4ನೇ ಸ್ಥಾನದಲ್ಲಿದೆ. ಆದರೆ, ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ದಾಖಲು ಮಾಡಿದರೆ ರನ್ರೇಟ್ ಆಧಾರದ ಮೇಲೆ 4ನೇ ಸ್ಥಾನಕ್ಕೆ ಪ್ರವೇಶ ಪಡೆದುಕೊಂಡು, ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಳ್ಳಲಿದೆ.ಈಗಾಗಲೇ ಗುಜರಾತ್, ಲಖನೌ ಹಾಗೂ ರಾಜಸ್ಥಾನ ರಾಯಲ್ಸ್ ಪ್ಲೇ-ಆಫ್ಗೆ ಲಗ್ಗೆ ಹಾಕಿವೆ. ಉಳಿದಂತೆ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡ ರೇಸ್ನಿಂದ ಹೊರಬಿದ್ದಿವೆ.