ಮುಂಬೈ: ಟೂರ್ನಾಮೆಂಟ್ನ ಆರಂಭದ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ನಂತರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದು, ಬೌಲಿಂಗ್ ಆಯ್ದುಕೊಂಡಿದೆ. ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.
ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸ್(ಕ್ಯಾಪ್ಟನ್), ರಾಹುಲ್ ತ್ರಿಪಾಠಿ, ನಿಕೂಲಸ್ ಪೂರನ್(ವಿ,ಕೀ), ಆಡಿನ್ ಮರ್ಕ್ರಾಮ್,ಶಶಾಂಕ್ ಸಿಂಗ್, ಜಗದೀಶ್ ಸುಚಿತ್,ಭುವನೇಶ್ವರ್ ಕುಮಾರ್, ಮಾರ್ಕೋ ಜಾನ್ಸೆನ್, ಉಮ್ರನ್ ಮಲಿಕ್, ಟಿ. ನಟರಾಜನ್
-
🚨 Toss Update 🚨
— IndianPremierLeague (@IPL) April 15, 2022 " class="align-text-top noRightClick twitterSection" data="
Kane Williamson has won the toss & @SunRisers have elected to bowl against @KKRiders.
Follow the match ▶️ https://t.co/HbO7UhlWeq#TATAIPL | #SRHvKKR pic.twitter.com/WeAUCl11Mp
">🚨 Toss Update 🚨
— IndianPremierLeague (@IPL) April 15, 2022
Kane Williamson has won the toss & @SunRisers have elected to bowl against @KKRiders.
Follow the match ▶️ https://t.co/HbO7UhlWeq#TATAIPL | #SRHvKKR pic.twitter.com/WeAUCl11Mp🚨 Toss Update 🚨
— IndianPremierLeague (@IPL) April 15, 2022
Kane Williamson has won the toss & @SunRisers have elected to bowl against @KKRiders.
Follow the match ▶️ https://t.co/HbO7UhlWeq#TATAIPL | #SRHvKKR pic.twitter.com/WeAUCl11Mp
ಕೋಲ್ಕತ್ತಾ ನೈಟ್ ರೈಡರ್ಸ್: ಆರೊನ್ ಫಿಂಚ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ನಿತಿಶ್ ರಾಣಾ, ಆಂಡ್ರೋ ರೆಸೆಲ್, ಜಾಕ್ಸನ್(ವಿ.ಕೀ), ಪ್ಯಾಟ್ ಕಮ್ಮಿನ್ಸ್, ಸುನಿಲ್ ನರೈನ್, ಉಮೇಶ್ ಯಾದವ್, ಅಮನ್ ಹಕೀಮ್, ವರುಣ್ ಚಕ್ರವರ್ತಿ
ಆಡುವ 11ರ ಬಳಗದಲ್ಲಿ ಹೈದರಾಬಾದ್ ಕೇವಲ ಒಂದು ಬದಲಾವಣೆ ಮಾಡಿದ್ದು, ಸುಂದರ್ ಬದಲಿಗೆ ಸುಚಿತ್ರಗೆ ಅವಕಾಶ ನೀಡಲಾಗಿದೆ. ಆದರೆ, ಕೋಲ್ಕತ್ತಾ ತಂಡ ರಹಾನೆ ಸ್ಥಾನಕ್ಕೆ ಫಿಂಚ್ಗೆ ಅವಕಾಶ ನೀಡಿದ್ದು, ಉಳಿದಂತೆ ಅಮನ್ ಖಾನ್ ಹಾಗೂ ಜಾಕ್ಸನ್ಗೂ ಆಡುವ 11ರ ಬಳಗದಲ್ಲಿ ಅವಕಾಶ ನೀಡಿದೆ.
ಕೆಕೆಆರ್ ಆಡಿರುವ 5 ಪಂದ್ಯಗಳಲ್ಲಿ 3 ಗೆಲುವು 2ಸೋಲು ಕಂಡು 2ನೇ ಸ್ಥಾನದಲ್ಲಿದೆ, ಒಂದು ವೇಳೆ ಸನ್ರೈಸರ್ಸ್ ಮಣಿಸಿದರೆ ಮತ್ತೆ ಅಗ್ರಸ್ಥಾನಕ್ಕೆ ಏರಲಿದೆ. ನೈಟ್ರೈಡರ್ಸ್ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದೆ,ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ತೀರ ಕಳಪೆಯಾಗಿತ್ತು. ಉಮೇಶ್ ಯಾದವ್ ಮತ್ತು ಕಮಿನ್ಸ್ ದುಬಾರಿಯಾಗಿದ್ದರು. ರಸೆಲ್ ಮತ್ತು ವರುಣ್ ಚಕ್ರವರ್ತಿ ಕೂಡ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಉಳಿದಿದ್ದರಲ್ಲಿ ನರೈನ್ ಮಾತ್ರ ಸ್ಥಿರ ಬೌಲಿಂಗ್ ಪ್ರದರ್ಶನ ತೋರುತ್ತಿದ್ದಾರೆ.
ಇನ್ನು ಹೈದರಾಬಾದ್ ತಂಡ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯ ಸೋತು, ಮತ್ತೆರೆಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ.