ಮುಂಬೈ : ಭಾನುವಾರದ ಡಬಲ್ ಹೆಡರ್ನ ಎರಡನೇ ಪಂದ್ಯ ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದೆ. ಟಾಸ್ ಗೆದ್ದ ರಾಜಸ್ಥಾನ ಬ್ಯಾಟಿಂಗ್ ಮಾಡಲು ಮುಂದಾಗಿದೆ. ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿರುವ ಲಖನೌ ಫ್ಲೇ-ಆಫ್ಗೆ ಪ್ರವೇಶಿಸಿದೆ.
ರಾಜಸ್ಥಾನಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈ ಪಂದ್ಯದ ಗೆಲುವಿನೊಂದಿಗೆ ಫ್ಲೇ-ಆಫ್ ಖಚಿತವಾಗಲಿದೆ. ಈ ಪಂದ್ಯ ಸೋತಲ್ಲಿ ಫ್ಲೇ-ಆಫ್ ಹಾದಿ ಕಠಿಣವಾಗಲಿದೆ. ರಾಜಸ್ಥಾನ 12 ಪಂದ್ಯಗಳಲ್ಲಿ ಏಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಲಖನೌ ತಂಡದಲ್ಲಿ ಒಂದು ಬದಲಾವಣೆಯಾಗಿದ್ದು, ಕರಣ್ ಶರ್ಮಾ ಜಾಗಕ್ಕೆ ಬದಲಿಯಾಗಿ ರವಿ ಬಿಷ್ಣೋಯ್ ಆಡಲಿದ್ದಾರೆ. ರಾಜಸ್ಥಾನದಲ್ಲಿ ಎರಡು ಬದಲಾವಣೆಯಾಗಿದ್ದು, ಜೇಮ್ಸ್ ನೀಶಮ್ ಮತ್ತು ಒಬೆದ್ ಮೆಕಾಯ್ ಇಂದಿನ ಪಂದ್ಯದಲ್ಲಿ ಕುಲದೀಪ್ ಸೇನ್ ಮತ್ತು ಡಸ್ಸೆನ್ ಜಾಗಕ್ಕೆ ಬದಲಿಯಾಗಿ ಆಡಲಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ : ಕ್ವಿಂಟನ್ ಡಿ ಕಾಕ್ (ಡಬ್ಲ್ಯು), ಕೆಎಲ್ ರಾಹುಲ್ (ಸಿ), ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ದುಷ್ಮಂತ ಚಮೀರಾ, ಅವೇಶ್ ಖಾನ್
ರಾಜಸ್ಥಾನ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (w/c), ದೇವದತ್ ಪಡಿಕ್ಕಲ್, ಜೇಮ್ಸ್ ನೀಶಮ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್, ಒಬೆದ್ ಮೆಕಾಯ್