ETV Bharat / sports

ಡುಪ್ಲೆಸಿ ಕೆಚ್ಚೆದೆಯ ಬ್ಯಾಟಿಂಗ್​, ಬೌಲರ್​ಗಳ ಮಿಂಚು: ಲಖನೌ ವಿರುದ್ಧ ಗೆದ್ದ ರಾಯಲ್​ ಚಾಲೆಂಜರ್ಸ್​​ - ಐಪಿಎಲ್​ ಆರ್​ಸಿಬಿ

ಲಖನೌ ತಂಡದ ವಿರುದ್ಧ ಕೆಚ್ಚೆದೆಯ ಬ್ಯಾಟಿಂಗ್​ ಪ್ರದರ್ಶನ ನೀಡಿದ ಆರ್​ಸಿಬಿ ಕ್ಯಾಪ್ಟನ್ ಡುಪ್ಲೆಸಿ(96) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಲಖನೌ ವಿರುದ್ಧ ಗೆದ್ದ ರಾಯಲ್​ ಚಾಲೆಂಜರ್ಸ್
ಲಖನೌ ವಿರುದ್ಧ ಗೆದ್ದ ರಾಯಲ್​ ಚಾಲೆಂಜರ್ಸ್
author img

By

Published : Apr 20, 2022, 12:49 AM IST

Updated : Apr 20, 2022, 6:10 AM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ಲಖನೌ ತಂಡದ ವಿರುದ್ಧ 18 ರನ್​ಗಳ ಗೆಲುವು ದಾಖಲು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ.

ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಇಳಿದಿದ್ದ ಆರ್​ಸಿಬಿ ಇಂದೂ ಕೂಡ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಇದರ ಹೊರತಾಗಿ ಕೂಡ ನಾಯಕನ ಆಟ ಪ್ರದರ್ಶಿಸಿದ ಡುಪ್ಲೆಸಿ 63 ಎಸೆತಗಳಲ್ಲಿ 96ರನ್​ಗಳಿಕೆ ಮಾಡಿ ಎದುರಾಳಿ ತಂಡಕ್ಕೆ ಸ್ಪರ್ಧಾತ್ಮಕ ರನ್​ಗಳ ಗುರಿ ನೀಡುವಲ್ಲಿ ಯಶಸ್ವಿಯಾದರು.

ಆರ್​ಸಿಬಿ ಪರ ಆರಂಭಿಕ ಬ್ಯಾಟರ್ ಅನುಜ್ ರಾವತ್​(4) ಮತ್ತು ವಿರಾಟ್ ಕೊಹ್ಲಿ(0) ಮೊದಲ ಓವರ್​​ನಲ್ಲೇ ದುಷ್ಮಂತ ಚಮೀರ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು.ಆದರೆ 3ನೇ ವಿಕೆಟ್​ಗೆ ಮ್ಯಾಕ್ಸ್​ವೆಲ್ ಜೊತೆಗೂಡಿ 37 ರನ್​ಗಳ ಜೊತೆಯಾಟ ನಡೆಸಿದರು. ಚಮೀರ ಬೌಲಿಂಗ್​ನಲ್ಲಿ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಸಿಡಿಸಿ ಅಬ್ಬರದ ಮುನ್ಸೂಚನೆ ನೀಡಿದರಾದರೂ, ಕೃನಾಲ್ ಪಾಂಡ್ಯ ಸ್ಪಿನ್​ ಮೋಡಿಗೆ ಬಲಿಯಾದರು. ನಂತರ ಬಂದಂತಹ ಪ್ರಭುದೇಸಾಯಿ(10) ಕೂಡ ಹೆಚ್ಚು ಹೊತ್ತು ನಿಲ್ಲಿಲ್ಲ.

62ಕ್ಕೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ್ದ ಆರ್​ಸಿಬಿ ಒಂದು ಹಂತದಲ್ಲಿ ಅಲ್ಪಮೊತ್ತಕ್ಕೆ ಕುಸಿಯಬಹುದೆಂದು ನಿರೀಕ್ಷಿಸಲಾಗಿತ್ತು, ಆದರೆ ಡುಪ್ಲೆಸಿಸ್ ಯುವ ಆಲ್​ರೌಂಡರ್​​ ಶಹಬಾಜ್​(26) ಜೊತೆಗೂಡಿ 70 ರನ್ ಸೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಶಹಬಾಜ್ ರನ್​ಔಟ್​ಗೆ ಬಲಿಯಾದರು.

ನಂತರ ದಿನೇಶ್​ ಕಾರ್ತಿಕ್ ಜೊತೆಗೂಡಿದ ನಾಯಕ 49 ರನ್​ಗಳ ಜೊತೆಯಾಟ ನೀಡಿದರು. 64 ಎಸೆತಗಳನ್ನೆದುರಿಸಿದ ಡುಪ್ಲೆಸಿಸ್​ 11 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 96 ರನ್​ಗಳಿಸಿ ಕೊನೆಯ ಓವರ್​ನ 5ನೇ ಎಸೆತದಲ್ಲಿ ಔಟಾಗಿ 4 ರನ್​ಗಳಿಂದ ಶತಕ ವಂಚಿತರಾದರು. ಕಾರ್ತಿಕ್​ ಅಜೇಯ 13 ರನ್​ಗಳಿಸಿದರು.​ ಈ ಮೂಲಕ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 181ರನ್​ಗಳಿಕೆ ಮಾಡಿತು. ಲಖನೌ ಪರ ಜೇಸನ್ ಹೋಲ್ಡರ್ 25ಕ್ಕೆ2, ಕೃನಾಲ್ ಪಾಂಡ್ಯ 29ಕ್ಕೆ1, ಚಮೀರ 31ಕ್ಕೆ2 ವಿಕೆಟ್ ಪಡೆದರು.

ಲಖನೌ ಬ್ಯಾಟಿಂಗ್​: 182ರನ್​ಗಳ ಗುರಿ ಬೆನ್ನತ್ತಿದ ಲಖನೌ ಸೂಪರ್​ ಜೈಂಟ್ಸ್ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 163 ರನ್​ ಮಾತ್ರ ಗಳಿಸಲು ಶಕ್ತವಾಗಿದ್ದರಿಂದ 18ರನ್​ಗಳ ಸೋಲು ಕಂಡಿದೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಡಿಕಾಕ್​-ಕ್ಯಾಪ್ಟನ್​ ರಾಹುಲ್ ಜೋಡಿ​ ಆರಂಭದಲ್ಲಿ ವೈಫಲ್ಯ ಅನುಭವಿಸಿತು. ಕೇವಲ 3 ರನ್​ಗಳಿಸಿದಾಗ ಡಿಕಾಕ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಪಾಂಡೆ ಕೂಡ 6ರನ್​ಗಳಿಸಿ ಪೆವಿಲಿಯನ್​ ಸೇರಿಕೊಂಡರು.

ಈ ವೇಳೆ ಒಂದಾದ ರಾಹುಲ್ ಹಾಗೂ ಕೃನಾಲ್ ಜೋಡಿ ಸ್ವಲ್ಪ ಪ್ರತಿರೋಧ ಒಡ್ಡಿತು. ಆದರೆ, 30ರನ್​ಗಳಿಸಿದ್ದ ರಾಹುಲ್​, ವೇಗಿ ಹರ್ಷಲ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೃನಾಲ್​ 42ರನ್​ಗಳಿಕೆ ಮಾಡಿದರೆ, ಹೂಡಾ 13ರನ್, ಬಧೌನಿ 13,ಸ್ಟೋಯ್ನಿಸ್​ 24ರನ್​, ಹೊಲ್ಡರ್​ 16ರನ್​ಗಳಿಸಿದರು.

ಆರ್​ಸಿಬಿ ಪರ ಹ್ಯಾಜಲ್​ವುಡ್​ 4ವಿಕೆಟ್​, ಹರ್ಷಲ್​ ಪಟೇಲ್​ 2 ವಿಕೆಟ್​ ಪಡೆದರೆ, ಮ್ಯಾಕ್ಸವೆಲ್​ ಹಾಗೂ ಸಿರಾಜ್ ತಲಾ ವಿಕೆಟ್​ ಪಡೆದರು.

Last Updated : Apr 20, 2022, 6:10 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.