ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ಬೈರ್ಸ್ಟೋ(66) ಹಾಗೂ ಲಿವಿಗ್ಸ್ಟೋನ್(70)ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 209ರನ್ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು.
-
Innings Break! @liaml4893 & @jbairstow21 hammered fifties to power @PunjabKingsIPL to 209/9. 👌 👌@HarshalPatel23 was the pick of the @RCBTweets bowlers. 👍 👍
— IndianPremierLeague (@IPL) May 13, 2022 " class="align-text-top noRightClick twitterSection" data="
The #RCB chase to commence soon. 🤔 🤔
Scorecard ▶️ https://t.co/jJzEACTIT1 #TATAIPL | #RCBvPBKS pic.twitter.com/3knpV5oqxG
">Innings Break! @liaml4893 & @jbairstow21 hammered fifties to power @PunjabKingsIPL to 209/9. 👌 👌@HarshalPatel23 was the pick of the @RCBTweets bowlers. 👍 👍
— IndianPremierLeague (@IPL) May 13, 2022
The #RCB chase to commence soon. 🤔 🤔
Scorecard ▶️ https://t.co/jJzEACTIT1 #TATAIPL | #RCBvPBKS pic.twitter.com/3knpV5oqxGInnings Break! @liaml4893 & @jbairstow21 hammered fifties to power @PunjabKingsIPL to 209/9. 👌 👌@HarshalPatel23 was the pick of the @RCBTweets bowlers. 👍 👍
— IndianPremierLeague (@IPL) May 13, 2022
The #RCB chase to commence soon. 🤔 🤔
Scorecard ▶️ https://t.co/jJzEACTIT1 #TATAIPL | #RCBvPBKS pic.twitter.com/3knpV5oqxG
ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋ-ಶಿಖರ್ ಧವನ್ ಮೊದಲ ವಿಕೆಟ್ನಷ್ಟಕ್ಕೆ 60ರನ್ಗಳಿಕೆ ಮಾಡಿತು. ಆರ್ಸಿಬಿ ಬೌಲರ್ಗಳನ್ನ ಯದ್ವಾತದ್ವಾ ದಂಡಿಸಿದ ಬೈರ್ಸ್ಟೋ ತಾವು ಎದುರಿಸಿದ 29 ಎಸೆತಗಳಲ್ಲಿ 7 ಸಿಕ್ಸರ್, 4 ಬೌಂಡರಿ ಸಮೇತ 66ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ಧವನ್ ಕೂಡ 15 ಎಸೆತಗಳಲ್ಲಿ 21ರನ್ಗಳಿಕೆ ಮಾಡಿ ಮ್ಯಾಕ್ಸವೆಲ್ ಓವರ್ನಲ್ಲಿ ಔಟಾದರು. ಇದರ ಬೆನ್ನಲ್ಲೇ ಬಂದ ರಾಜಪಕ್ಸೆ 1 ರನ್ಗಳಿಸಿ ಹಸರಂಗ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
ಬೈರ್ಸ್ಟೋ- ಲಿವಿಂಗ್ಸ್ಟೋನ್ ಅಬ್ಬರದಾಟ: ಆರ್ಸಿಬಿ ಬೌಲರ್ಗಳ ಮೇಲೆ ದಾಳಿ ನಡೆಸಿದ ಆರಂಭಿಕ ಬ್ಯಾಟರ್ ಬೈರ್ಸ್ಟೋ ಹಾಗೂ ಮಧ್ಯಮ ಕ್ರಮಾಂಕದ ಲಿವಿಂಗ್ಸ್ಟೋನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೈರ್ ಸ್ಟೋ 66ರನ್ಗಳಿಕೆ ಮಾಡಿದರೆ, ಲಿವಿಗ್ಸ್ಟೋನ್ 42 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ಸಮೇತ 70ರನ್ಗಳಿಸಿದರು.
ಇದಾದ ಬಳಿಕ ಬಂದ ಲಿವಿಂಗ್ಸ್ಟೋನ್(70) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಗೆ ಕ್ಯಾಪ್ಟನ್ ಮಯಾಂಕ್(19), ಶರ್ಮಾ(9), ಬ್ರಾರ್(7)ರನ್, ರಿಷಿ ಧವನ್(7)ರನ್ಗಳಿಸಿದರು. ಕೊನೆಯದಾಗಿ ತಂಡ 20 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 209ರನ್ಗಳಿಕೆ ಮಾಡಿತು. ಆರ್ಸಿಬಿ ಪರ ಹರ್ಷಲ್ ಪಟೇಲ್ 4 ವಿಕೆಟ್, ಹಸರಂಗ ತಲಾ 2 ವಿಕೆಟ್ ಪಡೆದರೆ, ಮ್ಯಾಕ್ಸವೆಲ್, ಅಹ್ಮದ್ ತಲಾ 1 ವಿಕೆಟ್ ಕಿತ್ತರು.
ಇಂಡಿಯನ್ ಪ್ರೀಮಿಯರ್ ಲೀಗ್ನ 60ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಪಂಜಾಬ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆರ್ಸಿಬಿ ಕ್ಯಾಪ್ಟನ್ ಡುಪ್ಲೆಸಿ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಪ್ಲೇ-ಆಫ್ಗೆ ಲಗ್ಗೆ ಹಾಕುವ ಉದ್ದೇಶದಿಂದ ಆರ್ಸಿಬಿಗೆ ಈ ಪಂದ್ಯ ಮಹತ್ವದಾಗಿದ್ದು, ಪಂಜಾಬ್ ವಿರುದ್ಧ ಇಂದಿನ ಪಂದ್ಯದಲ್ಲಿ ಜಯ ದಾಖಲು ಮಾಡಿದರೆ, ಮುಂದಿನ ಹಂತಕ್ಕೆ ಬಹುತೇಕ ಲಗ್ಗೆ ಹಾಕಲಿದೆ.
ಪಂಜಾಬ್ ಕಿಂಗ್ಸ್: ಬೈರ್ಸ್ಟೋ, ಶಿಖರ್ ಧವನ್, ಭಾನುಕ್ ರಾಜಪಕ್ಸೆ, ಮಯಾಂಕ್ ಅಗರವಾಲ್(ಕ್ಯಾಪ್ಟನ್), ಜಿತೇಶ್ ಶರ್ಮಾ(ವಿ,ಕೀ), ಲಿವಿಂಗ್ಸ್ಟೋನ್, ರಿಷಿ ಧವನ್, ಕಾಗಿಸೋ ರಬಾಡಾ, ರಾಹುಲ್ ಚಹರ್, ಹರ್ಪ್ರಿತ್ ಬ್ರಾರ್,ಅರ್ಷದೀಪ್ ಸಿಂಗ್
ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್(ಕ್ಯಾಪ್ಟನ್), ರಜತ್ ಪಟಿದಾರ್, ಗ್ಲೇನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್(ವಿ,ಕೀ), ಮಹಿಪಾಲ್, ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಸ್ ಹ್ಯಾಜಲ್ವುಡ್
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ವೇಳೆ ಪಂಜಾಬ್ ತಂಡ 5 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಐಪಿಎಲ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಪಂಜಾಬ್ 16 ಹಾಗೂ ಆರ್ಸಿಬಿ 13 ಸಲ ಗೆಲುವಿನ ನಗೆ ಬೀರಿದೆ.
-
🚨 Toss Update 🚨@RCBTweets have elected to bowl against @PunjabKingsIPL.
— IndianPremierLeague (@IPL) May 13, 2022 " class="align-text-top noRightClick twitterSection" data="
Follow the match ▶️ https://t.co/jJzEACTIT1 #TATAIPL | #RCBvPBKS pic.twitter.com/xyx7pc62X3
">🚨 Toss Update 🚨@RCBTweets have elected to bowl against @PunjabKingsIPL.
— IndianPremierLeague (@IPL) May 13, 2022
Follow the match ▶️ https://t.co/jJzEACTIT1 #TATAIPL | #RCBvPBKS pic.twitter.com/xyx7pc62X3🚨 Toss Update 🚨@RCBTweets have elected to bowl against @PunjabKingsIPL.
— IndianPremierLeague (@IPL) May 13, 2022
Follow the match ▶️ https://t.co/jJzEACTIT1 #TATAIPL | #RCBvPBKS pic.twitter.com/xyx7pc62X3
ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಪ್ಲೇ-ಆಫ್ ರೇಸ್ನಲ್ಲಿರುವ ಕಾರಣ ಎರಡು ತಂಡಗಳಿಗೂ ಈ ಪಂದ್ಯ ಅತಿ ಮುಖ್ಯವಾಗಿದೆ. ಐಪಿಎಲ್ನಲ್ಲಿ ಆರ್ಸಿಬಿ ಇಲ್ಲಿಯವರೆಗೆ 12 ಪಂದ್ಯಗಳ ಪೈಕಿ 7ರಲ್ಲಿ ಜಯ, 5ರಲ್ಲಿ ಸೋಲು ಕಂಡಿದ್ದು, 14 ಪಾಯಿಂಟ್ಗಳೊಂದಿಗೆ 4ನೇ ಸ್ಥಾನದಲ್ಲಿದೆ. ಪಂಜಾಬ್ ಸದ್ಯ 8ನೇ ಸ್ಥಾನದಲ್ಲಿದೆ.