ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಫಾಪ್ ಡು ಪ್ಲೆಸಿಸ್ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಮುಂಬೈನ ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.
ಉದ್ಘಾಟನಾ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ವಿರುದ್ಧ ಗೆದ್ದಿರುವ ಕೆಕೆಆರ್ ಹಾಗೂ ಪಂಜಾಬ್ ವಿರುದ್ಧ ಸೋಲು ಕಂಡಿರುವ ಆರ್ಸಿಬಿ ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಬೆಂಗಳೂರು ತಂಡ ಆಡುವ 11ರ ಬಳಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ, ಆದರೆ, ಕೆಕೆಆರ್ ಮಾವಿ ಜಾಗಕ್ಕೆ ಅನುಭವಿ ಸೌಥಿಗೆ ಮಣೆ ಹಾಕಿದೆ.
-
#RCB have won the toss and they will bowl first against #KKR.
— IndianPremierLeague (@IPL) March 30, 2022 " class="align-text-top noRightClick twitterSection" data="
Live - https://t.co/BVieVfFKPu #RCBvKKR #TATAIPL pic.twitter.com/oZmaJ5IyTH
">#RCB have won the toss and they will bowl first against #KKR.
— IndianPremierLeague (@IPL) March 30, 2022
Live - https://t.co/BVieVfFKPu #RCBvKKR #TATAIPL pic.twitter.com/oZmaJ5IyTH#RCB have won the toss and they will bowl first against #KKR.
— IndianPremierLeague (@IPL) March 30, 2022
Live - https://t.co/BVieVfFKPu #RCBvKKR #TATAIPL pic.twitter.com/oZmaJ5IyTH
ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 205 ರನ್ ಬಾರಿಸಿದ್ದರೂ ಬೌಲಿಂಗ್ನಲ್ಲಿ ವೈಫಲ್ಯತೆ ಅನುಭವಿಸಿದ್ದ ಬೆಂಗಳೂರು 5 ವಿಕೆಟ್ಗಳಿಂದ ಸೋಲು ಕಂಡಿತ್ತು. ತಂಡ ನೂತನ ನಾಯಕ ಫಾಫ್ ಡು ಪ್ಲೆಸಿಸ್ ಆರಂಭಿಕ ಪಂದ್ಯದಲ್ಲೇ ಮಿಂಚಿನ ಬ್ಯಾಟಿಂಗ್ ನಡೆಸಿ 57 ಎಸೆತಗಳಲ್ಲಿ 88 ರನ್ ಬಾರಿಸಿದ್ದರು. ಆದರೆ, ಮೊಹಮದ್ ಸಿರಾಜ್ ಸೇರಿದಂತೆ ಪ್ರಮುಖ ಬೌಲರ್ಗಳ ವೈಫಲ್ಯತೆಯಿಂದ ಸೋಲು ಕಂಡಿತ್ತು.
ಇನ್ನೊಂದೆಡೆ, ಎದುರಾಳಿ ನೈಟ್ ರೈಡರ್ಸ್ ಯುವ ಮುಂದಾಳು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯದಲ್ಲಿನ ಗೆಲುವಿನ ವಿಶ್ವಾಸದಲ್ಲಿದೆ. ಉಮೇಶ್ ಯಾದವ್, ನರೈನ್ ಸೇರಿದಂತೆ ಬೌಲರ್ಗಳ ಕರಾರುವಾಕ್ ದಾಳಿಯಿಂದ ಚೆನ್ನೈ ವಿರುದ್ಧ ಸುಲಭದ ಜಯ ಸಾಧಿಸಿತ್ತು.ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ಕೋಲ್ಕತ್ತಾ, ಇಲ್ಲಿ ಯಾವುದೇ ಸೋಲು ಕಂಡಿಲ್ಲ. ಅಲ್ಲದೆ, ಬೆಂಗಳೂರು ವಿರುದ್ಧ ನೈಟ್ ರೈಡರ್ಸ್ ಕಳೆದ ಸೀಸನ್ನಲ್ಲಿನ ಎಲಿಮಿನೇಟರ್ ಸೇರಿದಂತೆ ಈ ಹಿಂದೆ ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.
ಆಡುವ 11ರ ಬಳಗ: ಬೆಂಗಳೂರು ತಂಡ: ಫಾಪ್ ಡು ಪ್ಲೆಸಿಸ್(ಕ್ಯಾಪ್ಟನ್), ಅಂಜು ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್(ವಿ.ಕೀ), ರುದ್ರಫಾರ್ಡ್, ಶಹಬಾಜ್ ಅಹ್ಮದ್, ವನಿದು ಹಸರಂಗ, ಡೆವಿಡ್ ವಿಲ್ಲೆ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್
ಕೋಲ್ಕತ್ತಾ ನೈಟ್ ರೈಡರ್ಸ್: ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ಸ್ಯಾಮ್ ಬಿಲ್ಲಿಂಗ್ಸ್, ಜಾಕ್ಸನ್(ವಿ.ಕೀ), ರಸೆಲ್, ಸುನಿಲ್ ನರೈನ್, ಥಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಆರ್ಸಿಬಿಗೆ ನಾಯಕ ಡುಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ಯುವ ಆಟಗಾರ ಅನುಜ್ ರಾವತ್, ಅನುಭವಿ ದಿನೇಶ್ ಕಾರ್ತಿಕ್ ಅವರು ಬ್ಯಾಟಿಂಗ್ ಬಲವಾಗಿದ್ದಾರೆ. ಜೋಶ್ ಹೇಜಲ್ವುಡ್ ಅನುಪಸ್ಥಿತಿಯಲ್ಲಿ ಡೆವಿಡ್ ವಿಲ್ಲಿ, ರುದರ್ಫೋರ್ಡ್, ಶಹಬಾಜ್ ಅಹ್ಮದ್ ಅವರಿಂದ ತಕ್ಕ ಬೆಂಬಲ ಅಗತ್ಯವಿದೆ. ಅದರಲ್ಲೂ ಸಿರಾಜ್, ಹರ್ಷಲ್ ಬೌಲಿಂಗ್ ಜೋಡಿಯು ಚಮತ್ಕಾರ ತೋರಿದರೆ ಗೆಲುವಿನ ನಗೆ ಬೀರುವುದು ಕಷ್ಟವೇನಲ್ಲ.
ಕೋಲ್ಕತ್ತಾ ತಂಡ ದೀರ್ಘ ಬ್ಯಾಟಿಂಗ್ ವಿಭಾಗ ಹೊಂದಿದ್ದು, ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್ ಸೇರಿದಂತೆ 8ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸುನಿಲ್ ನರೈನ್ವರೆಗೂ ಪಂದ್ಯ ಗೆಲ್ಲಿಸಬಹುದಾದ ಆಟಗಾರರಿದ್ದಾರೆ. ಉಮೇಶ್ ಯಾದವ್ ಅವರು ಪವರ್‌ಪ್ಲೇನಲ್ಲಿ ಪ್ರಮುಖ ಅಸ್ತ್ರವಾಗಿದ್ದಾರೆ. ಆದರೆ, ಸಿಎಸ್ಕೆ ವಿರುದ್ಧ ಕೋಲ್ಕತ್ತಾ ಬೌಲರ್ಗಳು ಕೊನೆಯ ಮೂರು ಓವರ್‌ಗಳಲ್ಲಿ 47 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯೆನಿಸಿದ್ದರು.