ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ವರ್ಷದಂತೆ ಈ ವರ್ಷವೂ ಗೋ ಗ್ರೀನ್ ಅಭಿಯಾನದಲ್ಲಿ ಭಾಗಿಯಾಗಲಿದ್ದು, ನಾಳೆ ನಡೆಯುವ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿದೆ. ಈ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ.
2011ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೋ ಗ್ರೀನ್ ಅಭಿಯಾನದಲ್ಲಿ ಭಾಗಿಯಾಗ್ತಿದ್ದು, ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಐಪಿಎಲ್ ಆವೃತ್ತಿಯ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಹಾಕಿಕೊಂಡು ಮೈದಾನಕ್ಕಿಳಿಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ ಅಕೌಂಟ್ನಲ್ಲಿ ಆರ್ಸಿಬಿ ವಿಡಿಯೋ ಸಹ ಹರಿಬಿಟ್ಟಿದೆ.
-
Continuing the #GoGreen sustainability initiative that we started in 2011, #RCB players would be wearing Green Match Kits when they step onto the field this Sunday against SRH at 3:30 PM IST. Here’s more on @kreditbee presents Bold Diaries.#PlayBold #IPL2022 #ForPlanetEarth pic.twitter.com/RrYwkwzMyo
— Royal Challengers Bangalore (@RCBTweets) May 7, 2022 " class="align-text-top noRightClick twitterSection" data="
">Continuing the #GoGreen sustainability initiative that we started in 2011, #RCB players would be wearing Green Match Kits when they step onto the field this Sunday against SRH at 3:30 PM IST. Here’s more on @kreditbee presents Bold Diaries.#PlayBold #IPL2022 #ForPlanetEarth pic.twitter.com/RrYwkwzMyo
— Royal Challengers Bangalore (@RCBTweets) May 7, 2022Continuing the #GoGreen sustainability initiative that we started in 2011, #RCB players would be wearing Green Match Kits when they step onto the field this Sunday against SRH at 3:30 PM IST. Here’s more on @kreditbee presents Bold Diaries.#PlayBold #IPL2022 #ForPlanetEarth pic.twitter.com/RrYwkwzMyo
— Royal Challengers Bangalore (@RCBTweets) May 7, 2022
ಹಸಿರು ಜೆರ್ಸಿ ಹಾಕಿಕೊಂಡು ಆರ್ಸಿಬಿ ಇಲ್ಲಿಯವರೆಗೆ 9 ಪಂದ್ಯಗಳನ್ನಾಡಿದ್ದು, ಇದರಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವು ದಾಖಲು ಮಾಡಿದೆ. 2011ರಲ್ಲಿ ಮೊದಲ ಸಲ ಹಸಿರು ಜೆರ್ಸಿ ಹಾಕಿಕೊಂಡು ಮೈದಾನಕ್ಕಿಳಿದಿದ್ದ ಆರ್ಸಿಬಿ ಕೊಚ್ಚಿ ಟಸ್ಕರ್ಸ್ ವಿರುದ್ಧ 9 ವಿಕೆಟ್ಗಳ ಗೆಲುವು ದಾಖಲು ಮಾಡಿತ್ತು. ಈ ಪಂದ್ಯದಲ್ಲಿ ದಿಲ್ಶಾನ್ ಹಾಗೂ ಗೇಲ್ ಅಬ್ಬರದ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಕಳೆದ ವರ್ಷ ಆರ್ಸಿಬಿ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಮೂಲಕ ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಗೌರವ ಸಲ್ಲಿಕೆ ಮಾಡಿತ್ತು. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆಡಿರುವ 11 ಪಂದ್ಯಗಳ ಪೈಕಿ 6ರಲ್ಲಿ ಗೆಲುವು ಸಾಧಿಸಿ 12 ಪಾಯಿಂಟ್ ಗಳಿಕೆ ಮಾಡಿ, 4ನೇ ಸ್ಥಾನದಲ್ಲಿದೆ.