ETV Bharat / sports

ಧೋನಿಗೆ ಸಿಎಸ್​ಕೆ ನಾಯಕತ್ವ ಬಿಟ್ಟುಕೊಟ್ಟ ಜಡೇಜಾ.. ಕಾರಣ?

author img

By

Published : Apr 30, 2022, 8:19 PM IST

Updated : Apr 30, 2022, 8:30 PM IST

2022ರ ಐಪಿಎಲ್​ನಲ್ಲಿ ಚೆನ್ನೈ ತಂಡದ ನಾಯಕನಾಗಿದ್ದ ರವೀಂದ್ರ ಜಡೇಜಾ ಇದೀಗ ತಮ್ಮ ಜವಾಬ್ದಾರಿಯನ್ನು ಮಹೇಂದ್ರ ಸಿಂಗ್ ಧೋನಿಗೆ ಹಸ್ತಾಂತರ ಮಾಡಿದ್ದಾರೆ.

Ravindra Jadeja hands over CSK captaincy

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್​ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಇದೀಗ ತಮ್ಮ ಜವಾಬ್ದಾರಿಯನ್ನು ಮರಳಿ ಮಹೇಂದ್ರ ಸಿಂಗ್​ ಧೋನಿ ಅವರಿಗೆ ಹಸ್ತಾಂತರಿಸಿದ್ದಾರೆ. ಆಟದ ಮೇಲೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಹೀಗಾಗಿ, ಉಳಿದ ಆರು ಪಂದ್ಯಗಳಲ್ಲಿ ಸಿಎಸ್​ಕೆ ನಾಯಕತ್ವ ಜವಾಬ್ದಾರಿಯನ್ನ ಧೋನಿ ನೋಡಿಕೊಳ್ಳಲಿದ್ದಾರೆ. ಈ ಸಲದ ಐಪಿಎಲ್​ನಲ್ಲಿ ತಂಡ ಪ್ಲೇ-ಆಫ್​ಗೆ ಲಗ್ಗೆ ಹಾಕಬೇಕಾದ್ರೆ ತಂಡ ಉಳಿದ ಎಲ್ಲ ಪಂದ್ಯಗಳಲ್ಲೂ ಗೆಲ್ಲಲೇಬೇಕಾಗಿದೆ.

📢 Official announcement!

Read More: 👇#WhistlePodu #Yellove 🦁💛 @msdhoni @imjadeja

— Chennai Super Kings (@ChennaiIPL) April 30, 2022

ಇದಕ್ಕೆ ಸಂಬಂಧಿಸಿದಂತೆ ಸಿಎಸ್​ಕೆ ಫ್ರಾಂಚೈಸಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಇಂಡಿಯನ್​ ಪ್ರೀಮಿಯರ್ ಲೀಗ್​ 2022 ಟೂರ್ನಿ ಆರಂಭಗೊಳ್ಳುವುದಕ್ಕೂ ಕೇವಲ ಎರಡು ದಿನ ಮುಂಚಿತವಾಗಿ ತಂಡದ ನಾಯಕತ್ವವನ್ನ ಧೋನಿ ಬಿಟ್ಟುಕೊಟ್ಟಿದ್ದರು. ಇದೀಗ ಅರ್ಧ ಪಂದ್ಯಗಳು ಮುಕ್ತಾಯಗೊಂಡಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆಟದ ಮೇಲೆ ಗಮನ ಹರಿಸುವ ಉದ್ದೇಶದಿಂದ ಜಡೇಜಾ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದುಬಂದಿದೆ. ಜೊತೆಗೆ ಎಂ ಎಸ್ ಧೋನಿ ಅವರೇ ತಂಡವನ್ನು ಮುನ್ನಡೆಸಬೇಕು ಎಂದು ವಿನಂತಿಸಿದ್ದಾರೆ. ಪ್ರಸಕ್ತ ಐಪಿಎಲ್​ನಲ್ಲಿ ಜಡೇಜಾ ಆಡಿರುವ 8 ಪಂದ್ಯಗಳಿಂದ ಕೇವಲ 112ರನ್​ಗಳಿಕೆ ಮಾಡಿದ್ದು, 5 ವಿಕೆಟ್​ ಕಬಳಿಸಿದ್ದಾರೆ. 2012ರಿಂದಲೂ ಜಡೇಜಾ ಚೆನ್ನೈ ತಂಡದ ಭಾಗವಾಗಿದ್ದು, ಈ ಸಲದ ಹರಾಜು ಪ್ರಕ್ರಿಯೆಗೂ ಮುಂಚಿತವಾಗಿ ತಂಡ ಅವರಿಗೆ ಬರೋಬ್ಬರಿ 16 ಕೋಟಿ ರೂ. ನೀಡಿ ರಿಟೈನ್ ಮಾಡಿಕೊಂಡಿತ್ತು.

2008ರಿಂದಲೂ 2021ರವರೆಗೆ ಚೆನ್ನೈ ತಂಡದ ನಾಯಕತ್ವ ಜವಾಬ್ದಾರಿ ಹೊತ್ತುಕೊಂಡಿದ್ದ ಧೋನಿ, ನಾಲ್ಕು ಸಲ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಈ ಸಲ ನಾಯಕತ್ವ ಜವಾಬ್ದಾರಿಯನ್ನ ಜಡೇಜಾ ಹೆಗಲ ಮೇಲೆ ಹಾಕಿದ್ದರು. ಪ್ರಸಕ್ತ ಐಪಿಎಲ್​ನಲ್ಲಿ ಸಿಎಸ್​ಕೆ ಆಡಿರುವ 8 ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿದೆ.

Last Updated : Apr 30, 2022, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.