ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದೆ. ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲೂ ಆರಂಭದಲ್ಲಿ ಬಿರುಸಿನ ಆಟಕ್ಕೆ ಮೊರೆ ಹೋದ ಕಿಂಗ್ ಕೊಹ್ಲಿ, ತದನಂತರ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ವಿಕೆಟ್ ಒಪ್ಪಿಸುತ್ತಿದ್ದಂತೆ ಆಕಾಶದತ್ತ ಮುಖಮಾಡಿ, ನಿರಾಶೆಯಿಂದಲೇ ವಿರಾಟ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ವಿರಾಟ್ ಕೊಹ್ಲಿಯ ಫೋಟೋವೊಂದನ್ನ ಹಚ್ಚಿಕೊಂಡಿರುವ ಕಿಂಗ್ಸ್ ಪಂಜಾಬ್ ತಂಡ, ನೀವು ಉತ್ತಮ ಲಯದಲ್ಲಿ ಕಂಡಬಂದಿರುವುದಕ್ಕೆ ನಾವೂ ಸಹ ಸಂಭ್ರಮಿಸಿದ್ದೇವೆ. ಆದಷ್ಟು ಬೇಗ ನೀವೂ ಹಿಂದಿನ ಫಾರ್ಮ್ಗೆ ಮರಳಲಿದ್ದೀರಿ. ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ ಎಂದು ಬರೆದುಕೊಂಡಿದೆ. ಕಿಂಗ್ಸ್ ಪಂಜಾಬ್ ಈ ಟ್ವೀಟ್ಗೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಲು ಶುರುವಾಗಿದೆ.
-
Have never seen him like this 💔 @imVkohli pic.twitter.com/edmH6T1feo
— Sweta Sharma (@SwetaSharma22) May 13, 2022 " class="align-text-top noRightClick twitterSection" data="
">Have never seen him like this 💔 @imVkohli pic.twitter.com/edmH6T1feo
— Sweta Sharma (@SwetaSharma22) May 13, 2022Have never seen him like this 💔 @imVkohli pic.twitter.com/edmH6T1feo
— Sweta Sharma (@SwetaSharma22) May 13, 2022
ಇದನ್ನೂ ಓದಿ: ಪಂಜಾಬ್ ವಿರುದ್ಧ ಹೀನಾಯವಾಗಿ ಸೋತ ಆರ್ಸಿಬಿಗೆ ಪ್ಲೇ ಆಫ್ ಕನಸು ಇನ್ನೂ ಜೀವಂತ!
2022ರ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 13 ಪಂದ್ಯಗಳನ್ನಾಡಿದ್ದು, 19.66ರ ಸರಾಸರಿಯಲ್ಲಿ 236 ರನ್ಗಳಿಕೆ ಮಾಡಿದ್ದರು. ಇದರಲ್ಲಿ ಕೇವಲ 1 ಅರ್ಧಶತಕ ಸೇರಿದೆ. ನಿನ್ನೆ ಪಂಜಾಬ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್, ತಾವು ಎದುರಿಸಿದ 14 ಎಸೆತಗಳಲ್ಲಿ 1 ಸಿಕ್ಸರ್, 2 ಬೌಂಡರಿ ಸೇರಿದಂತೆ 20ರನ್ಗಳಿಕೆ ಮಾಡಿದರು. ಆದರೆ, ರಬಾಡಾ ಎಸೆದ ಓವರ್ನಲ್ಲಿ ವಿಕೆಟ್ ಒಪ್ಪಿಸಿ, ನಿರಾಶೆ ಮೂಡಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ-ಆಫ್ ರೇಸ್ಗೆ ಲಗ್ಗೆ ಹಾಕಬೇಕಾದರೆ, ಮೇ 19ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾಗಿದೆ. ಟೂರ್ನಿಯಲ್ಲಿ ಆರ್ಸಿಬಿ ಈವರೆಗೆ 13 ಪಂದ್ಯಗಳ ಪೈಕಿ 7ರಲ್ಲಿ ಗೆಲುವು, 6ರಲ್ಲಿ ಸೋಲು ಕಂಡು 14 ಪಾಯಿಂಟ್ಗಳೊಂದಿಗೆ 4ನೇ ಸ್ಥಾನದಲ್ಲಿದೆ.