ETV Bharat / sports

ಬಲಿಷ್ಠ ಗುಜರಾತ್​ ವಿರುದ್ಧ ಗೆದ್ದ ಪಂಜಾಬ್​​.. ಪಾಯಿಂಟ್​ ಪಟ್ಟಿಯಲ್ಲಿ ಆರ್​ಸಿಬಿ ಹಿಂದಿಕ್ಕಿದ ಮಯಾಂಕ್​ ಬಳಗ

author img

By

Published : May 4, 2022, 12:26 AM IST

ಇಂಡಿಯನ್​ ಪ್ರೀಮಿಯರ್​​ ಲೀಗ್​ನ ಇಂದಿನ ಪಂದ್ಯದಲ್ಲಿ ಕನ್ನಡಿಗ ಮಯಾಂಕ್​ ಅಗರವಾಲ್​ ಸಾರಥ್ಯದ ಪಂಜಾಬ್ ತಂಡ ಗುಜರಾತ್​ ಟೈಟನ್ಸ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ.

Punjab Kings
Punjab Kings

ಮುಂಬೈ: ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆದ ಐಪಿಎಲ್​ನ 48ನೇ ಪಂದ್ಯದಲ್ಲಿ ಬಲಿಷ್ಠ ಗುಜರಾತ್​ ಟೈಟನ್ಸ್​ ವಿರುದ್ಧ ಮಯಾಂಕ್​ ನೇತೃತ್ವದ ಪಂಜಾಬ್​​ ಕಿಂಗ್ಸ್​ 8 ವಿಕೆಟ್​ಗಳ ಗೆಲುವಿನ ನಗೆ ಬೀರಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಿಂದಿಕ್ಕಿದೆ.

Shikhar Batting
ಐಪಿಎಲ್​​​ನಲ್ಲಿ 47ನೇ ಅರ್ಧಶತಕ ಸಿಡಿಸಿದ ಧವನ್​

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಸಾಹಸಕ್ಕೆ ಕೈಹಾಕಿದ ಗುಜರಾತ್​ ಟೈಟನ್ಸ್​​ ಆರಂಭದಲ್ಲೇ ಪ್ರಮುಖ ವಿಕೆಟ್​ ಕಳೆದುಕೊಂಡ ಹೊರತಾಗಿ ಕೂಡ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​​ನಷ್ಟಕ್ಕೆ 143ರನ್​ಗಳಿಕೆ ಮಾಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮಧ್ಯಮ ಕ್ರಮಾಂಕದ ಬ್ಯಾಟರ್​​ ಸಾಯಿ ಸುದರ್ಶನ್​​ ತಾವು ಎದುರಿಸಿದ 50 ಎಸೆತಗಳಲ್ಲಿ 64ರನ್​ಗಳಿಕೆ ಮಾಡಿ, ತಂಡ ಸ್ಪರ್ಧಾತ್ಮಕ ರನ್​ಗಳಿಸಲು ಸಹಾಯ ಮಾಡಿದರು.

Sai Sudharsan
ಐಪಿಎಲ್​​ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್​

ಗುಜರಾತ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಶುಬ್ಮನ್​ ಗಿಲ್(1)​ ರನೌಟ್ ಆದರೆ, ನಂತರ ವೃದ್ಧಿಮಾನ್​​ ಸಹಾ(21) ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಬ್ಯಾಟರ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ನಾಯಕ ಪಾಂಡ್ಯ ಕೇವಲ 1ರನ್​ಗಳಿಸಿ ರಿಷಿ ಧವನ್ ಬೌಲಿಂಗ್​ನಲ್ಲಿ ಔಟಾದರೆ, ಡೇವಿಡ್​ ಮಿಲ್ಲರ್​(11) ರನ್​ಗಳಿಸಿದ ಲಿವಿಂಗ್​ಸ್ಟೋನ್​ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿಕೊಂಡರು. ಅದ್ಭುತ ಫಾರ್ಮ್​ನಲ್ಲಿ ರಾಹುಲ್ ತೆವಾಟಿಯಾ(11) ಮತ್ತು ರಶೀದ್ ಖಾನ್​(0) ರನ್ನು ರಬಾಡ 17ನೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು. ನಂತರ ಬಂದ ಪ್ರದೀಪ್ ಸಂಗ್ವಾನ್(2), ಫರ್ಗುಸನ್(5) ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ನಿರಂತರ ವಿಕೆಟ್​ ಕಳೆದುಕೊಳ್ಳುತ್ತಿದ್ದ ಟೈಟನ್ಸ್ ಒಂದು ಹಂತದಲ್ಲಿ 120-130 ರನ್ ಗಳಿಸುವುದು​ ಅಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು. ಆದರೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಸಾಯಿ ಸುದರ್ಶನ್ ಕೊನೆಯವರೆಗೂ ಕ್ರೀಸ್​ನಲ್ಲಿ ನೆಲೆಯೂರಿ ​ 50 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ ಅಜೇಯ 64 ರನ್​ಗಳಿಸಿ ತಂಡದ ಮೊತ್ತವನ್ನು 143ಕ್ಕೆ ಕೊಂಡೊಯ್ದರು.

Rabada
4 ವಿಕೆಟ್​ ಪಡೆದು ಮಿಂಚಿದ ರಬಾಡ

ಕಗಿಸೋ ರಬಾಡ 33 ರನ್​ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಅರ್ಶದೀಪ್ ಸಿಂಗ್ , ರಿಷಿ ಧವನ್ ಮತ್ತು ಲಿಯಾಮ್ ಲಿವಿಂಗ್​ಸ್ಟನ್​ ತಲಾ ಒಂದು ವಿಕೆಟ್ ಪಡೆದರು.

ಪಂಜಾಬ್​ ಕಿಂಗ್ಸ್​​​ ಇನ್ನಿಂಗ್ಸ್​: 144ರನ್​​ಗಳ ಗುರಿ ಬೆನ್ನತ್ತಿದ್ದ ಪಂಜಾಬ್​ ಕಿಂಗ್ಸ್​ ಕೂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಕ್ಯಾಪ್ಟನ್ ಮಯಾಂಕ್​ ಅಗರವಾಲ್​ ಸ್ಥಾನದಲ್ಲಿ ಅವಕಾಶ ಪಡೆದು ಬ್ಯಾಟ್ ಬೀಸಲು ಬಂದ ಬೈರ್​ಸ್ಟೋ ಕೇವಲ 1ರನ್​ಗಳಿಕೆ ಮಾಡಿ ಶಮಿ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದರು.

ಉತ್ತಮ ಜೊತೆಯಾಟವಾಡಿದ ಧವನ್​-ರಾಜಪಕ್ಸೆ ಜೋಡಿ: ಬೈರ್​ಸ್ಟೋ ವಿಕೆಟ್ ಪತನಗೊಳ್ಳುತ್ತಿದ್ದಂತೆ ಧವನ್ ಜೊತೆಯಾದ ರಾಜಪಕ್ಸೆ ಉತ್ತಮ ಬ್ಯಾಟಿಂಗ್​​ ಪ್ರದರ್ಶನ ನೀಡಿದರು. ಈ ಜೋಡಿ 90ರನ್​ಗಳ ಜೊತೆಯಾಟವಾಡಿತು. ಈ ವೇಳೆ ಕೇವಲ 28 ಎಸೆತಗಳಲ್ಲಿ 1 ಸಿಕ್ಸರ್​, 5 ಬೌಂಡರಿ ಸಮೇತ 40ರನ್​ಗಳಿಕೆ ಮಾಡಿದ್ದ ರಾಜಪಕ್ಸೆ, ಫರ್ಗ್ಯೂಸನ್​ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇದಾದ ಬಳಿಕ ಧವನ್ ಜೊತೆಯಾದ ಲಿವಿಂಗ್‌ಸ್ಟೋನ್ ಕೇವಲ 10 ಎಸೆತಗಳಲ್ಲಿ ಭರ್ಜರಿ 3 ಸಿಕ್ಸರ್​, 1 ಬೌಂಡರಿ ಸಮೇತ ಅಜೇಯ 30ರನ್​ಗಳಿಸಿ, ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಆರಂಭದಿಂದಲೂ ಬ್ಯಾಟ್​ ಬೀಸಿದ ಧವನ್​ ಅಜೇಯ 62ರನ್​ಗಳಿಸಿದರು. ಕೊನೆಯದಾಗಿ ತಂಡ 16 ಓವರ್​ಗಳಲ್ಲಿ ಕೇವಲ 2 ವಿಕೆಟ್​ ಕಳೆದುಕೊಂಡು 145ರನ್​ಗಳಿಸಿ, ಜಯ ಸಾಧಿಸಿತು. ಜೊತೆಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಹಾಕಿತು.

ಗುಜರಾತ್​ ತಂಡದ ಪರ ಶಮಿ ಹಾಗೂ ಫಾರ್ಗ್ಯೂಸನ್​ ತಲಾ 1 ವಿಕೆಟ್​ ಪಡೆದರು. 4 ವಿಕೆಟ್​ ಪಡೆದು ಮಿಂಚಿದ ಪಂಜಾಬ್​ನ ರಬಾಡ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.