ಮುಂಬೈ: ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಆರಂಭದ ಹೊರತಾಗಿ ಕೂಡ ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡು 20 ಓವರ್ನಷ್ಟಕ್ಕೆ 9 ವಿಕೆಟ್ ಕಳೆದುಕೊಂಡು 165ರನ್ಗಳಿಕೆ ಮಾಡಿದೆ. ಡಿ ವೈ ಪಾಟೀಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಬುಮ್ರಾ ಬೌಲಿಂಗ್ ದಾಳಿಗೆ ಸಂಪೂರ್ಣ ತತ್ತರಿಸಿ ಹೋಯಿತು.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಯ್ಯರ್(43ರನ್) ರಹಾನೆ(25ರನ್) ಉತ್ತಮ ಜೊತೆಯಾಟವಾಡಿತು. ಈ ಜೋಡಿ 5.4 ಓವರ್ಗಳಲ್ಲಿ 60ರನ್ಗಳಿಕೆ ಮಾಡಿತು. ಈ ವೇಳೆ, ಕಾರ್ತಿಕೇಯ ಓವರ್ನಲ್ಲಿ ಅಯ್ಯರ್ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ರಹಾನೆ ಕೂಡ ಕಾರ್ತಿಕೇಯ ಓವರ್ನಲ್ಲೇ ಔಟಾದರು. ಇದಾದ ಬಳಿಕ ಬಂದ ರಾಣಾ(43ರನ್) ಉತ್ತಮವಾಗಿ ಬ್ಯಾಟ್ ಬೀಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ಅಯ್ಯರ್ 6ರನ್, ರೆಸೆಲ್ 9ರನ್, ಜಾಕ್ಸನ್ 5ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದರ ಬೆನ್ನಲ್ಲೇ ಕಮ್ಮಿನ್ಸ್, ರಾಣಾ ಹಾಗೂ ಸ್ಯಾಮ್ಸ್ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದರು. ಏಕಾಂಗಿಯಾಗಿ ಹೊರಾಟ ನಡೆಸಿದ ರಿಂಕು ಸಿಂಗ್ 23ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದರು.
ಐದು ವಿಕೆಟ್ ಪಡೆದು ಮಿಂಚಿದ ಬುಮ್ರಾ: ಈ ಹಿಂದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಬುಮ್ರಾ ಇಂದಿನ ಪಂದ್ಯದಲ್ಲಿ ಮಿಂಚು ಹರಿಸಿದರು. ತಾವು ಎಸೆದ 4 ಓವರ್ಗಳಲ್ಲಿ ಕೇವಲ 10 ರನ್ ನೀಡಿ, 5 ವಿಕೆಟ್ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ಕಾರ್ತಿಕೇಯ 2 ವಿಕೆಟ್ ಪಡೆದರೆ ಸ್ಯಾಮ್ಸ್, ಮುರ್ಗನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಇಂಡಿಯನ್ ಪ್ರೀಮಿಯರ್ ಲೀಗ್ನ 56ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿವೆ. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ರೋಹಿತ್ ಬಳಗ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.
ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನಗಳಲ್ಲಿರುವ ತಂಡಗಳ ನಡುವೆ ಇಂದಿನ ಪಂದ್ಯ ನಡೆಯುತ್ತಿರುವ ಕಾರಣ, ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಮುಂಬೈ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ, ಪ್ರತಿಷ್ಠೆ ಉಳಿಸಿಕೊಳ್ಳುವ ತವಕದಲ್ಲಿದೆ. ಉಳಿದಂತೆ ಇಂದಿನ ಪಂದ್ಯದಲ್ಲಿ ಕೆಕೆಆರ್ ಗೆಲುವು ದಾಖಲಿಸಿದರೆ ಮಾತ್ರ, ಪ್ಲೇ-ಆಫ್ ಆಸೆ ಜೀವಂತವಾಗಿರಲಿದೆ.
-
#MumbaiIndians have won the toss and they will bowl first against #KKR.
— IndianPremierLeague (@IPL) May 9, 2022 " class="align-text-top noRightClick twitterSection" data="
Live - https://t.co/0TDNSwhQXs #MIvKKR #TATAIPL pic.twitter.com/ztC9mbiYQB
">#MumbaiIndians have won the toss and they will bowl first against #KKR.
— IndianPremierLeague (@IPL) May 9, 2022
Live - https://t.co/0TDNSwhQXs #MIvKKR #TATAIPL pic.twitter.com/ztC9mbiYQB#MumbaiIndians have won the toss and they will bowl first against #KKR.
— IndianPremierLeague (@IPL) May 9, 2022
Live - https://t.co/0TDNSwhQXs #MIvKKR #TATAIPL pic.twitter.com/ztC9mbiYQB
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್(ವಿ.ಕೀ), ರೋಹಿತ್ ಶರ್ಮಾ(ಕ್ಯಾಪ್ಟನ್), ತಿಲಕ್ ವರ್ಮಾ, ರಾಮಣದೀಪ್ ಸಿಂಗ್, ಕಿರನ್ ಪೊಲಾರ್ಡ್, ಟಿಮ್ ಡೇವಿಡ್, ಡೆನಿಯಲ್ ಸ್ಯಾಮ್ಸ್, ಮುರ್ಗನ್ ಅಶ್ವಿನ್, ಕುಮಾರ್ ಕಾರ್ತಿಕೇಯ್, ಜಸ್ಪ್ರೀತ್ ಬುಮ್ರಾ, ಮೆರ್ಡಿತ್
ಕೋಲ್ಕತ್ತಾ ನೈಟ್ ರೈಡರ್ಸ್: ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ನಿತಿಶ್ ರಾಣಾ, ರಿಂಕು ಸಿಂಗ್,ಆಂಡ್ರೊ ರೆಸೆಲ್, ಸುನಿಲ್ ನರೈನ್, ಜಾಕ್ಸನ್(ವಿ,ಕೀ),ಕಮ್ಮಿನ್ಸ್, ಟಿಮ್ ಸೌಥಿ, ವರುಣ್ ಚಕ್ರವರ್ತಿ
ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸುವ ಇರಾದೆ ಇಟ್ಟುಕೊಂಡಿರುವ ಕೆಕೆಆರ್, ಆಡುವ 11ರ ಬಳಗದಲ್ಲಿ ಪ್ರಮುಖ ಐದು ಬದಲಾವಣೆ ಮಾಡಿದ್ದು, ರಹಾನೆ, ಕಮ್ಮಿನ್ಸ್, ವೆಂಕಟೇಶ್ ಅಯ್ಯರ್, ಚಕ್ರವರ್ತಿ ಹಾಗೂ ಜಾಕ್ಸನ್ಗೆ ಅವಕಾಶ ನೀಡಿದೆ. ಮುಂಬೈ ಇಂಡಿಯನ್ಸ್ ತಂಡದಿಂದ ಸೂರ್ಯಕುಮಾರ್ ಯಾದವ್ ಹೊರಗುಳಿದಿದ್ದು, ರಮಣ ದೀಪ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.