ಮುಂಬೈ: ಮುಂಬೈ ತಂಡದ ಮಾರಕ ಬೌಲಿಂಗ್ ನಡುವೆ ಕೂಡ ಡೆಲ್ಲಿ ತಂಡದ ಪೊವೆಲ್(43), ರಿಷಭ್ ಪಂತ್(39)ರನ್ಗಳ ನೆರವಿಂದ ಡೆಲ್ಲಿ ತಂಡ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 159ರನ್ಗಳಿಕೆ ಮಾಡಿದ್ದು, ಎದುರಾಳಿ ಮುಂಬೈ ತಂಡಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಬಂದ ಮಿಚೆಲ್ ಮಾರ್ಷ್(0) ಖಾತೆ ತೆರೆಯುವುದಕ್ಕೂ ಮುನ್ನವೇ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಒಂದಾದ ಪೃಥ್ವಿ ಶಾ- ಕ್ಯಾಪ್ಟನ್ ಪಂತ್ ತಂಡಕ್ಕೆ ಚೇತರಿಕೆ ನೀಡಿದರು.
ಜ್ವರದಿಂದ ಗುಣಮುಖರಾಗಿ ಇಂದಿನ ಪಂದ್ಯದಲ್ಲಿ ಬ್ಯಾಟ್ ಬೀಸಿದ ಪೃಥ್ವಿ ಶಾ 24ರನ್ಗಳಿಸಿದರೆ, ಪಂತ್ 39ರನ್ಗಳ ಕಾಣಿಕೆ ನೀಡಿದರು. ಪಂತ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬಂದ ಸರ್ಫರಾಜ್ ಖಾನ್ 10ರನ್ ಗಳಿಸಿದರು.
ಅಬ್ಬರಿಸಿದ ಪೊವೆಲ್: ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದ ಡೆಲ್ಲಿ ತಂಡಕ್ಕೆ ಪೊವೆಲ್ ಆಸರೆಯಾದರು. ಇವರು ತಾವು ಎದುರಿಸಿದ 34 ಎಸೆತಗಳಲ್ಲಿ 4 ಸಿಕ್ಸರ್, 1 ಬೌಂಡರಿ ಸಮೇತ 43 ರನ್ಗಳಿಸಿದರು. ಕೊನೆಯಾಗಿ ಅಬ್ಬರಿಸಿದ ಅಕ್ಸರ್ ಕೂಡ ತಾವು ಎದುರಿಸಿದ 10 ಎಸೆತಗಳಲ್ಲಿ 2 ಸಿಕ್ಸರ್ ಸಮೇತ ಅಜೇಯ 19ರನ್ಗಳಿಕೆ ಮಾಡಿದ್ದರಿಂದ ತಂಡ 20 ಓವರ್ಗಳಲ್ಲಿ 7ವಿಕೆಟ್ನಷ್ಟಕ್ಕೆ 159ರನ್ಗಳಿಕೆ ಮಾಡಿತು.
ಮುಂಬೈ ಇಂಡಿಯನ್ಸ್ ಪರ ಮಿಂಚಿದ ವೇಗಿ ಬುಮ್ರಾ ತಾವು ಎಸೆದ 4ಓವರ್ಗಳಲ್ಲಿ 30 ರನ್ ನೀಡಿ, 4 ವಿಕೆಟ್ ಪಡೆದುಕೊಂಡರು. ಇವರಿಗೆ ಸಾಥ್ ನೀಡಿದ ರಮಣದೀಪ್ 2 ವಿಕೆಟ್ ಪಡೆದರೆ, ಸ್ಯಾಮ್ಸ್ ಹಾಗೂ ಮಾರ್ಕಡೆ ತಲಾ 1 ವಿಕೆಟ್ ಪಡೆದರು.
-
🚨 Toss Update 🚨@mipaltan have elected to bowl against @DelhiCapitals.
— IndianPremierLeague (@IPL) May 21, 2022 " class="align-text-top noRightClick twitterSection" data="
Follow the match ▶️ https://t.co/sN8zo9RIV4#TATAIPL | #MIvDC pic.twitter.com/M4hl1zb4y7
">🚨 Toss Update 🚨@mipaltan have elected to bowl against @DelhiCapitals.
— IndianPremierLeague (@IPL) May 21, 2022
Follow the match ▶️ https://t.co/sN8zo9RIV4#TATAIPL | #MIvDC pic.twitter.com/M4hl1zb4y7🚨 Toss Update 🚨@mipaltan have elected to bowl against @DelhiCapitals.
— IndianPremierLeague (@IPL) May 21, 2022
Follow the match ▶️ https://t.co/sN8zo9RIV4#TATAIPL | #MIvDC pic.twitter.com/M4hl1zb4y7
ಇಂಡಿಯನ್ ಪ್ರೀಮಿಯರ್ ಲೀಗ್ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ರಿಷಭ್ ಪಂತ್ ಪಡೆಗೆ ಈ ಪಂದ್ಯ ಕ್ವಾರ್ಟರ್ ಫೈನಲ್ ಆಗಿದ್ದು, ಗೆದ್ದರೆ 4ನೇ ತಂಡವಾಗಿ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ದುಕೊಂಡಿದೆ.
ಉಭಯ ತಂಡಗಳಿಗೂ ಇದು ಲೀಗ್ ಹಂತದ ಕೊನೇ ಪಂದ್ಯವಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ರೋಹಿಗ್ ಬಳಗ ಗೆಲುವು ದಾಖಲು ಮಾಡಿದರೆ, ಆರ್ಸಿಬಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಹಂತದಲ್ಲಿ ತಾನು ಆಡಿರುವ 13 ಪಂದ್ಯಗಳ ಪೈಕಿ 7ರಲ್ಲಿ ಗೆಲುವು ದಾಖಲಿಸಿ 14 ಪಾಯಿಂಟ್ ಹೊಂದಿದ್ದು, ಇಂದಿನ ಪಂದ್ಯದಲ್ಲಿ ಜಯ ಸಾಧಿಸಿದರೆ ನೇರವಾಗಿ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳಲಿದೆ. ಹೀಗಾಗಿ, ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದೆ.ಇಂದಿನ ಪಂದ್ಯಕ್ಕಾಗಿ ಮುಂಬೈ ಎರಡು ಬದಲಾವಣೆ ಮಾಡಿದ್ದು, ಸ್ಟುಬ್ಸ್ ಸ್ಥಾನಕ್ಕೆ ಬ್ರೇವಿಸ್ ಹಾಗೂ ಸಂಜಯ್ ಸ್ಥಾನಕ್ಕೆ ಹೃತಿಕ್ ಶೋಕಿನ್ ಅವಕಾಸ ಪಡೆದುಕೊಂಡಿದ್ದಾರೆ. ಡೆಲ್ಲಿ ತಂಡದಲ್ಲಿ ಲಲಿತ್ ಯಾದವ್ ಸ್ಥಾನಕ್ಕೆ ಪೃಥ್ವಿ ಶಾ ಮರಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ವಿ,ಕೀ, ಕ್ಯಾಪ್ಟನ್), ಸರ್ಫರಾಜ್ ಖಾನ್, ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ನೊರ್ಡ್ಜೆ, ಖಲೀಲ್ ಅಹ್ಮದ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ಕ್ಯಾಪ್ಟನ್), ಇಶಾನ್ ಕಿಶನ್(ವಿ.ಕೀ), ಬ್ರೆವೀಸ್, ತಿಲಕ್ ವರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ಡೆನಿಯಲ್ ಸ್ಯಾಮ್ಸ್, ಹೃತಿಕ್ ಸೋಲಂಕಿ, ಜಸ್ಪ್ರೀತ್ ಬುಮ್ರಾ, ಮೆರ್ಡಿತ್, ಮಯಾಂಕ್ ಮಾರ್ಕೆಂಡೆ