ETV Bharat / sports

IPL 2022 : ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದ ಲಖನೌ ಸೂಪರ್​ ಜೈಂಟ್ಸ್ - ಲಖನೌ ಸೂಪರ್​ ಜೈಂಟ್ಸ್ ಗೆ 36 ರನ್ ಗಳ ಜಯ

ನಾಯಕ ಕೆಎಲ್ ರಾಹುಲ್​ ಅವರ ಅಬ್ಬರದ ಶತಕದ ನೆರವಿನಿಂದ ಲಖನೌ ಸೂಪರ್​ ಜೈಂಟ್ಸ್​ ಎದುರಾಳಿ ಮುಂಬೈ ಇಂಡಿಯನ್ಸ್​ ತಂಡವನ್ನು 36 ರನ್‌ಗಳಿಂದ ಸೋಲಿಸಿದೆ..

IPL 2022: Lucknow Super Giants wins against Mumbai Indians
IPL 2022:ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದ ಲಖನೌ ಸೂಪರ್​ ಜೈಂಟ್ಸ್
author img

By

Published : Apr 25, 2022, 7:00 AM IST

ಮುಂಬೈ : ನಾಯಕ ಕೆಎಲ್ ರಾಹುಲ್​ ಅವರ ಅಬ್ಬರದ ಶತಕದ ನೆರವಿನಿಂದ ಲಖನೌ ಸೂಪರ್​ ಜೈಂಟ್ಸ್​ ಎದುರಾಳಿ ಮುಂಬೈ ಇಂಡಿಯನ್ಸ್​ ತಂಡವನ್ನು 36 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಕೆ ಎಲ್ ರಾಹುಲ್ ಎಂದಿನಂತೆ ಮುಂಬೈ ಬೌಲರ್​ಗಳನ್ನು ದಂಡಿಸಿದರು.

62 ಎಸೆತಗಳಲ್ಲಿ 12 ಬೌಂಡರಿ 4 ಸಿಕ್ಸರ್​ಗಳ ಸಹಿತ ಅಜೇಯ 103 ರನ್​ಗಳಿಸಿದರು. ಆದರೆ, ರಾಹುಲ್​ಗೆ ತಂಡದ ಇತರೆ ಬ್ಯಾಟರ್​ಗಳಿಂದ ಸೂಕ್ತ ಬೆಂಬಲ ದೊರೆಯಲಿಲ್ಲ. ಮನೀಶ್ ಪಾಂಡೆ 22 ಎಸೆತಗಳಲ್ಲಿ 22 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರೆ, ಡಿಕಾಕ್ 10 ರನ್​, ಸ್ಟೋಯಿನಿಸ್​(0), ಕೃನಾಲ್​ ಪಾಂಡ್ಯ(1), ದೀಪಕ್ ಹೂಡ(10) ಮತ್ತು ಬದೋನಿ(14) ಅಲ್ಪ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದ್ದರಿಂದ ಲಖನೌ ಬೃಹತ್​ ಮೊತ್ತ ದಾಖಲಿಸಲು ವಿಫಲವಾಯಿತು.

ಆಲ್​ರೌಂಡರ್​ ಕೀರನ್​ ಪೊಲಾರ್ಡ್​ ಮನೀಶ್ ಪಾಂಡೆ ಮತ್ತು ಕೃನಾಲ್ ಪಾಂಡ್ಯ ವಿಕೆಟ್​ ಪಡೆಯುವ ಮೂಲಕ ಉತ್ತಮವಾಗಿ ಸಾಗುತ್ತಿದ್ದ ಲಖನೌ ತಂಡಕ್ಕೆ ಬ್ರೇಕ್ ಹಾಕಿದರು. ಬುಮ್ರಾ 31ಕ್ಕೆ1, ಮೆರಿಡಿತ್​ 40ಕ್ಕೆ2 ಮತ್ತು ಸ್ಯಾಮ್ಸ್​ 40ಕ್ಕೆ1 ವಿಕೆಟ್ ಪಡೆದರು. ಲಖನೌ ಒಟ್ಟು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಲಷ್ಟೇ ಶಕ್ತವಾಯಿತು.

IPL 2022: Lucknow Super Giants wins against Mumbai Indians
IPL 2022:ಮುಂಬೈ ಇಂಡಿಯನ್ಸ್​ ವಿರುದ್ಧ ಗೆದ್ದ ಲಖನೌ ಸೂಪರ್​ ಜೈಂಟ್ಸ್

ಬಳಿಕ ಸಾಮಾನ್ಯ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಉತ್ತಮ ಪ್ರದರ್ಶನ ತೋರುವಂತೆ ಕಂಡರೂ ತಂಡವನ್ನು ಗೆಲುವಿನ ದಡ ದಾಟಿಸುವಲ್ಲಿ ವಿಫಲರಾದರು. 31 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 39 ರನ್‌ಗಳಿಸಲಷ್ಟೇ ಶಕ್ತರಾದರು.

ಬಳಿಕ ಬಂದ ತಂಡದ ಆಟಗಾರ ತಿಲಕ್ ವರ್ಮ ಮುಂಬೈ ತಂಡಕ್ಕೆ ಚೇತರಿಕೆ ನೀಡುವಂತೆ ಕಂಡರೂ ಅದು ವಿಫಲವಾಯಿತು. 27 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 38 ರನ್ ಗಳಿಸಿದ ತಿಲಕ್ ವರ್ಮ ಜೇಸನ್ ಹೋಲ್ಡರ್ ಅವರಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಮುಂಬೈನ ಯಾವುದೇ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿಲ್ಲವಾದದ್ದರಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 132 ರನ್ ಗಳಿಸಲಷ್ಟೇ ಶಕ್ತವಾಯಿತು.

ಲಖನೌ ಪರ ಕೃನಾಲ್ ಪಾಂಡ್ಯಾ 19ಕ್ಕೆ 3 ವಿಕೆಟ್ ಗಳಿಸಿದರೆ, ಜೇಸನ್ ಹೋಲ್ಡರ್,ರವಿ ಬಿಸ್ನೋಯಿ, ಆಯುಷ್ ಬದೋನಿ ತಲಾ ಒಂದೊಂದು ವಿಕೆಟ್ ಪಡೆದರು. ಮುಂಬೈ ಸತತ 8ನೇ ಸೋಲು ಕಂಡಿದ್ದು, ಪ್ಲೇ ಆಫ್ ಹಂತದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗಿದೆ.

ಓದಿ : ಫಾರ್ಮ್​ ಸಮಸ್ಯೆ ಸಾಮಾನ್ಯ ನನಗೂ ಎದುರಾಗಿತ್ತು, ಕೊಹ್ಲಿ ಶೀಘ್ರವೇ ರಾರಾಜಿಸ್ತಾರೆ: ಪೀಟರ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.