ಕೋಲ್ಕತ್ತಾ: 15ನೇ ಆವೃತ್ತಿ ಐಪಿಎಲ್ನಲ್ಲಿ ನಾಟಕೀಯ ಲೆಕ್ಕಾಚಾರದ ಮೇಲೆ ಪ್ಲೇ - ಆಫ್ ಹಂತಕ್ಕೆ ಲಗ್ಗೆ ಹಾಕಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಎಲಿಮಿನೇಟರ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಕ್ವಾಲಿಫೈಯರ್ 2ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಾದಾಟ ನಡೆಸಲಿದೆ.
-
The calm before the storm. 😉
— Royal Challengers Bangalore (@RCBTweets) May 24, 2022 " class="align-text-top noRightClick twitterSection" data="
See you on the field tomorrow, @LucknowIPL! 🤜🏻🤛🏻#PlayBold #WeAreChallengers #IPL2022 #Mission2022 #RCB #ನಮ್ಮRCB #PlayOffs #LSGvRCB pic.twitter.com/rDGmGHaBI0
">The calm before the storm. 😉
— Royal Challengers Bangalore (@RCBTweets) May 24, 2022
See you on the field tomorrow, @LucknowIPL! 🤜🏻🤛🏻#PlayBold #WeAreChallengers #IPL2022 #Mission2022 #RCB #ನಮ್ಮRCB #PlayOffs #LSGvRCB pic.twitter.com/rDGmGHaBI0The calm before the storm. 😉
— Royal Challengers Bangalore (@RCBTweets) May 24, 2022
See you on the field tomorrow, @LucknowIPL! 🤜🏻🤛🏻#PlayBold #WeAreChallengers #IPL2022 #Mission2022 #RCB #ನಮ್ಮRCB #PlayOffs #LSGvRCB pic.twitter.com/rDGmGHaBI0
ರಾಹುಲ್ ನಾಯಕತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್ ಇದೇ ಮೊದಲ ಸಲ ಐಪಿಎಲ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದು, ಲೀಗ್ ಹಂತದಲ್ಲಿ ತಾನು ಆಡಿರುವ 14 ಪಂದ್ಯಗಳ ಪೈಕಿ 9ರಲ್ಲಿ ಗೆಲುವು ದಾಖಲು ಮಾಡಿ 3ನೇ ತಂಡವಾಗಿ ಪ್ಲೇ - ಆಫ್ ಪ್ರವೇಶ ಪಡೆದುಕೊಂಡಿದೆ. ಉತ್ತಮ ಫಾರ್ಮ್ನಲ್ಲಿರುವ ನಾಯಕ ರಾಹುಲ್ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಈಗಾಗಲೇ ಶತಕ ಸಿಡಿಸಿ, ಮಿಂಚು ಹರಿಸಿದ್ದು, ಹಿಂದಿನ ಪಂದ್ಯದಲ್ಲಿ ಡಿಕಾಕ್ - ರಾಹುಲ್ ಜೋಡಿ ದ್ವಿಶತಕದಾಟ ಆಡಿದ್ದರು.
ಇವರಿಗೆ ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್ರೌಂಡರ್ ಸ್ಟೋಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಸಾಥ್ ನೀಡುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಆವೇಶ್ ಖಾನ್, ಮೊಸೀನ್ ಖಾನ್, ಸ್ಪಿನ್ನರ್ ರವಿ ಬಿಷ್ಣೋಯ್ ತಂಡಕ್ಕೆ ಮೆಲುಗೈ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶೇಷ ಎಂದರೆ ಲೀಗ್ ಹಂತದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಆರ್ಸಿಬಿ 18ರನ್ಗಳ ಗೆಲುವು ದಾಖಲು ಮಾಡಿದೆ.
ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ವಿರಾಟ್ ಕೊಹ್ಲಿ, ಹಿಂದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಫಾರ್ಮ್ಗೆ ಮರಳಿದ್ದಾರೆ. ಇದರ ಜೊತೆಗೆ ನಾಯಕ ಡುಪ್ಲೆಸಿಸ್, ಮ್ಯಾಕ್ಸವೆಲ್, ಕಾರ್ತಿಕ್ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಹಸರಂಗ, ಹರ್ಷಲ್ ಪಟೇಲ್, ಮ್ಯಾಕ್ಸಿ ಹಾಗೂ ಹ್ಯಾಜಲ್ವುಡ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.
ಲಖನೌ ಸೂಪರ್ ಜೈಂಟ್ಸ್(ಸಂಭವನೀಯ ತಂಡ): ಕ್ವಿಂಟನ್ ಡಿಕಾಕ್(ವಿ.ಕೀ), ಕೆಎಲ್ ರಾಹುಲ್(ಕ್ಯಾಪ್ಟನ್), ಎವಿನ್ ಲೂಯಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕೂಸ್ ಸ್ಟೋಯಿನಿಸ್, ಜೆಸನ್ ಹೋಲ್ಡರ್, ಕೆ. ಗೌತಮ್, ಮೋಸಿನ್ ಖಾನ್, ಆವೇಶ್ ಖಾನ್, ರವಿ ಬಿಷ್ಣೋಯ್
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಡುಪ್ಲೆಸಿಸ್(ಕ್ಯಾಪ್ಟನ್),ರಜತ್ ಪಟಿದಾರ್, ಗ್ಲೇನ್ ಮ್ಯಾಕ್ಸವೆಲ್, ದಿನೇಶ್ ಕಾರ್ತಿಕ್, ಮಹಿಪಾಲ್, ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್/ ಆಕಾಶ್ ದೀಪ್, ಸಿದ್ಧಾರ್ಥ್ ಕೌಲ್/ಮೊಹಮ್ಮದ್ ಸಿರಾಜ್, ಜೋಸ್ ಹ್ಯಾಜಲ್ವುಡ್