ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ನ 53ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಖನೌ 20 ಓವರ್ಗಳಲ್ಲಿ 176ರನ್ಗಳಿಕೆ ಮಾಡಿದ್ದು, ಕೋಲ್ಕತ್ತಾ ತಂಡದ ಗೆಲುವಿಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಲಖನೌ ಮೊದಲ ಓವರ್ನಲ್ಲೇ ಕ್ಯಾಪ್ಟನ್ ರಾಹುಲ್(0) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒದಾದ ಡಿಕಾಕ್-ಹೂಡಾ ಜೋಡಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಈ ಮೂಲಕ 70ರನ್ಗಳ ಜೊತೆಯಾಟ ನೀಡಿದರು.
ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಡಿಕಾಕ್ ನರೈನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕೃನಾಲ್ 25ರನ್ಗಳಿಕೆ ಮಾಡಿದ್ರೆ, ಬದೌನಿ 15ರನ್, ಸ್ಟೋಯ್ನಿಸ್ 28ರನ್, ಹೂಲ್ಡರ್ 13ರನ್ಗಳಿಕೆ ಮಾಡಿ, ತಂಡ 20 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 176ರನ್ಗಳಿಕೆ ಮಾಡುವಲ್ಲಿ ಸಹಾಯ ಮಾಡಿದ್ರು. ಕೋಲ್ಕತ್ತಾ ಪರ ರಸೆಲ್ 2 ವಿಕೆಟ್ ಪಡೆದರೆ, ಸೌಥಿ, ಶಿವಂ ಮಾವಿ, ನರೈನ್ ತಲಾ 1 ವಿಕೆಟ್ ಪಡೆದರು. ಮಹಾರಾಷ್ಟ್ರ ಅಸೋಷಿಯೇಷನ್ ಮೈದಾನದಲ್ಲಿ ಆಯೋಜನೆಗೊಂಡಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ.
ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿಕಾಕ್(ವಿ.ಕೀ), ಕೆ.ಎಲ್ ರಾಹುಲ್(ಕ್ಯಾಪ್ಟನ್), ದೀಪಕ್ ಹೂಡಾ, ಸ್ಟೋನಿಸ್, ಕೃನಾಲ್ ಪಾಂಡ್ಯಾ, ಆಯೂಷ್ ಬದೌನಿ, ಜಾಸನ್ ಹೊಲ್ಡರ್, ಚಮೀರಾ, ರವಿ ಬಿಷ್ಟೋಯ್, ಆವೇಶ್ ಖಾನ್, ಮೊಸಿನ್ ಖಾನ್
-
#KKR have won the toss and they will bowl first against #LSG.#TATAIPL pic.twitter.com/GQHYjW07bW
— IndianPremierLeague (@IPL) May 7, 2022 " class="align-text-top noRightClick twitterSection" data="
">#KKR have won the toss and they will bowl first against #LSG.#TATAIPL pic.twitter.com/GQHYjW07bW
— IndianPremierLeague (@IPL) May 7, 2022#KKR have won the toss and they will bowl first against #LSG.#TATAIPL pic.twitter.com/GQHYjW07bW
— IndianPremierLeague (@IPL) May 7, 2022
ಕೋಲ್ಕತ್ತಾ ನೈಟ್ ರೈಡರ್ಸ್: ಆರನ್ ಫಿಂಚ್, ಬಾಬಾ ಇಂದ್ರಜಿತ್(ವಿ.ಕೀ), ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ನಿತಿಶ್ ರಾಣಾ, ರಿಂಕು ಸಿಂಗ್, ಅಂಕುಲ್ ರಾಯ್, ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಶಿವಂ ಮಾವಿ, ಹರ್ಷಿತ್ ರಾಣಾ
ಇದನ್ನೂ ಓದಿ: 'ಗೋ ಗ್ರೀನ್' ಅಭಿಯಾನ: ಹಸಿರು ಜೆರ್ಸಿ ತೊಟ್ಟು ಮೈದಾನಕ್ಕಿಳಿಯಲಿರುವ ಆರ್ಸಿಬಿ
ಪಾಯಿಂಟ್ ಪಟ್ಟಿಯಲ್ಲಿ ಕೆ.ಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ಜೈಂಟ್ಸ್ ತಂಡ 7 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ದಾಖಲಿಸಿ ಮೊದಲ ಸ್ಥಾನ ಅಲಂಕರಿಸಲು ಕಾತರದಲ್ಲಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಉತ್ತಮವಾಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈ ಬಾರಿ ಆಡಿದ 10 ಪಂದ್ಯದಲ್ಲಿ ಕೇವಲ 4 ಪಂದ್ಯ ಗೆದ್ದಿದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ಆರ್ಆರ್ ವಿರುದ್ಧ ಕೋಲ್ಕತ್ತಾ ತಂಡ ಏಳು ವಿಕೆಟ್ಗಳಿಂದ ಭರ್ಜರಿ ಜಯ ದಾಖಲು ಮಾಡಿದ್ದು, ತಂಡಕ್ಕೆ ಆತ್ಮವಿಶ್ವಾಸ ತುಂಬಿದೆ.