ಮುಂಬೈ: ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅದ್ಭುತ ಕೈಚಳಕ ತೋರಿಸ್ತಿದ್ದಾರೆ. ಡೆಲ್ಲಿ ತಂಡದ ಭಾಗವಾಗಿರುವ ಇವರು ಆಡಿರುವ 8 ಪಂದ್ಯಗಳಿಂದ 17 ವಿಕೆಟ್ ಕಬಳಿಸಿ ಎದುರಾಳಿ ತಂಡವನ್ನು ದುಸ್ವಪ್ನದಂತೆ ಕಾಡುತ್ತಿದ್ದಾರೆ. ಇದರ ಜೊತೆಗೆ ಮಹತ್ವದ ದಾಖಲೆಯನ್ನೂ ಸಾಧಿಸಿದ್ದಾರೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 8 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. ಈ ಎಲ್ಲ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡಿರುವ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರ ಸಾಧನೆ ಸರಿಗಟ್ಟಿದ್ದಾರೆ.
ಇದನ್ನೂ ಓದಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಸೆಮೀಸ್ಗೆ ಸಿಂಧು ಲಗ್ಗೆ.. ಸೋತ್ರು ಪದಕ ಖಚಿತ!
ನಿನ್ನೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್ಗಳಲ್ಲಿ ಕೇವಲ 14ರನ್ ನೀಡಿ, ಪ್ರಮುಖ ನಾಲ್ಕು ವಿಕೆಟ್ ಪಡೆದುಕೊಂಡಿರುವ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು, ಈ ಮೂಲಕ ಐಪಿಎಲ್ ಆವೃತ್ತಿವೊಂದರಲ್ಲಿ ಅತಿ ಹೆಚ್ಚು ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯ ಪ್ಲೇಯರ್ ಸಾಲಿನಲ್ಲಿ ಸಚಿನ್ ಹಾಗೂ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ.
-
🗣️ "Yeh sabse better (season) hai. Kyunki main kaafi enjoy kar raha hoon apni bowling"
— Delhi Capitals (@DelhiCapitals) April 29, 2022 " class="align-text-top noRightClick twitterSection" data="
Here's what the 4️⃣ time Man of the Match winner had to say about his performance in #IPL2022 📹#YehHaiNayiDilli | @imkuldeep18#TATAIPL | #IPL | #DelhiCapitals | #DCvKKR | @bolt_earth pic.twitter.com/uwBP8vCkvq
">🗣️ "Yeh sabse better (season) hai. Kyunki main kaafi enjoy kar raha hoon apni bowling"
— Delhi Capitals (@DelhiCapitals) April 29, 2022
Here's what the 4️⃣ time Man of the Match winner had to say about his performance in #IPL2022 📹#YehHaiNayiDilli | @imkuldeep18#TATAIPL | #IPL | #DelhiCapitals | #DCvKKR | @bolt_earth pic.twitter.com/uwBP8vCkvq🗣️ "Yeh sabse better (season) hai. Kyunki main kaafi enjoy kar raha hoon apni bowling"
— Delhi Capitals (@DelhiCapitals) April 29, 2022
Here's what the 4️⃣ time Man of the Match winner had to say about his performance in #IPL2022 📹#YehHaiNayiDilli | @imkuldeep18#TATAIPL | #IPL | #DelhiCapitals | #DCvKKR | @bolt_earth pic.twitter.com/uwBP8vCkvq
2010ರಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ 2016ರಲ್ಲಿ ರೋಹಿತ್ ಶರ್ಮಾ ತಲಾ 4 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. 2016ರಲ್ಲಿ ವಿರಾಟ್ ಕೊಹ್ಲಿಗೆ ಐದು ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದುಬಂದಿತ್ತು. ಉಳಿದಂತೆ, 2021ರಲ್ಲಿ ಋತುರಾಜ್ ಗಾಯಕವಾಡ್, 2013ರಲ್ಲಿ ಅಮಿತ್ ಮಿಶ್ರಾ, 2008ರಲ್ಲಿ ಯೂಸುಫ್ ಪಠಾಣ್ ಕೂಡ ನಾಲ್ಕು ಸಲ ಪಂದ್ಯಶ್ರೇಷ್ಠರಾಗಿ ಗಮನ ಸೆಳೆದಿದ್ದರು.
2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಕುಲ್ದೀಪ್ ಯಾದವ್ಗೆ ಪ್ರತಿಭೆ ಪ್ರದರ್ಶನಕ್ಕೆ ಚಾನ್ಸ್ ಸಿಕ್ಕಿರಲಿಲ್ಲ. ಈ ಸಲ ಡೆಲ್ಲಿ ಪರ ಮೈದಾನಕ್ಕಿಳಿಯುತ್ತಿರುವ ಚೈನಾಮ್ಯಾನ್ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಒಂದು ವರ್ಷಗಳ ಕಾಲ ಬೆಂಚ್ ಕಾಯುವಂತೆ ಮಾಡಿದ್ದ ಕೆಕೆಆರ್ ಬ್ಯಾಟರ್‌ಗಳ ಬೆವರಿಳಿಸಿರುವ ಇವರು ಅಗ್ರ ಕ್ರಮಾಂಕದ ನಾಲ್ಕು ವಿಕೆಟ್ ಪಡೆದು ಸೇಡು ತೀರಿಸಿಕೊಂಡಿದ್ದರು.