ಮುಂಬೈ: ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ವಿರುದ್ಧ ಕೇವಲ 2ರನ್ಗಳ ಅಂತರದ ರೋಚಕ ಗೆಲುವು ದಾಖಲು ಮಾಡಿರುವ ಲಖನೌ ಸೂಪರ್ ಜೈಂಟ್ಸ್ ಪ್ಲೇ-ಆಫ್ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಗುಜರಾತ್ ಬಳಿಕ ಎರಡನೇ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿರುವ 2ನೇ ತಂಡವಾಗಿ ಹೊರಹೊಮ್ಮಿದೆ. ಅತ್ತ ಎರಡು ಬಾರಿಯ ಚಾಂಪಿಯನ್ ಕೆಕೆಆರ್ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಕ್ಯಾಪ್ಟನ್ ರಾಹುಲ್ ಹಾಗೂ ಡಿಕಾಕ್ ಉತ್ತಮ ಜೊತೆಯಾಟವಾಡಿದರು. ವಿಕೆಟ್ ಪತನಗೊಳ್ಳದಂತೆ ನಿಗಾ ವಹಿಸಿದ ಈ ಜೋಡಿ ಎದುರಾಳಿ ಬೌಲರ್ಗಳನ್ನ ದಂಡಿಸಿದರು. ಕೊನೆ ಓವರ್ವರೆಗೆ ಬ್ಯಾಟ್ ಬೀಸಿದ ಈ ಜೋಡಿ 20 ಓವರ್ಗಳಲ್ಲಿ 210ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡದ ಮುಂದೆ ಬೃಹತ್ ಟಾರ್ಗೆಟ್ ನೀಡಿತು.
-
#LSG become the second team to qualify for the #TATAIPL 2022 Playoffs 🎉 pic.twitter.com/gaK0idsJ84
— IndianPremierLeague (@IPL) May 18, 2022 " class="align-text-top noRightClick twitterSection" data="
">#LSG become the second team to qualify for the #TATAIPL 2022 Playoffs 🎉 pic.twitter.com/gaK0idsJ84
— IndianPremierLeague (@IPL) May 18, 2022#LSG become the second team to qualify for the #TATAIPL 2022 Playoffs 🎉 pic.twitter.com/gaK0idsJ84
— IndianPremierLeague (@IPL) May 18, 2022
ವಿಕೆಟ್ ಕೀಪರ್ ಬ್ಯಾಟರ್ ಡಿಕಾಕ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ, ಐಪಿಎಲ್ನಲ್ಲಿ ಎರಡನೇ ಶತಕ( ಅಜೇಯ140) ಸಿಡಿಸಿ ಮಿಂಚಿದ್ರೆ, ಕ್ಯಾಪ್ಟನ್ ರಾಹುಲ್ 68 ರನ್ಗಳಿಸಿದರು. ಡಿಕಾಕ್ ತಾವು ಎದುರಿಸಿದ 70 ಎಸೆತಗಳಲ್ಲಿ 10 ಸಿಕ್ಸರ್, 10 ಬೌಂಡರಿ ಸೇರಿ ಅಜೇಯ 140 ರನ್ಗಳಿಕೆ ಮಾಡಿದರು. ಕೋಲ್ಕತ್ತಾ ತಂಡದ ಯಾವೊಬ್ಬ ಪ್ಲೇಯರ್ ಕೂಡ ಒಂದೇ ಒಂದು ವಿಕೆಟ್ ಸಹ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಟಿಮ್ ಸೌಥಿ ತಾವು ಎಸೆದ 4 ಓವರ್ಗಳಲ್ಲಿ 57ರನ್ ನೀಡಿ, ದುಬಾರಿಯಾದರು.
-
Highest opening partnership ever in the IPL 🙀🔥
— IndianPremierLeague (@IPL) May 18, 2022 " class="align-text-top noRightClick twitterSection" data="
Live - https://t.co/NbhFO1ozC7 #KKRvLSG #TATAIPL pic.twitter.com/sayam7hkbv
">Highest opening partnership ever in the IPL 🙀🔥
— IndianPremierLeague (@IPL) May 18, 2022
Live - https://t.co/NbhFO1ozC7 #KKRvLSG #TATAIPL pic.twitter.com/sayam7hkbvHighest opening partnership ever in the IPL 🙀🔥
— IndianPremierLeague (@IPL) May 18, 2022
Live - https://t.co/NbhFO1ozC7 #KKRvLSG #TATAIPL pic.twitter.com/sayam7hkbv
211ರನ್ಗಳ ಬೃಹತ್ ಗುರಿ ಬೆನ್ನತ್ತಿದ ಕೆಕೆಆರ್, ಆರಂಭಿಕ ಆಘಾತದ ಹೊರತಾಗಿ ನಾಯಕ ಶ್ರೇಯಸ್ ಅಯ್ಯರ್(50), ರಿಂಕು ಸಿಂಗ್ ಸ್ಫೋಟಕ(40) ಹಾಗೂ ನರೈನ್ ಅಜೇಯ(21) ಸಹಾಯದಿಂದ ನಿಗದಿತ 20 ಓವರ್ಗಳಲ್ಲಿ 8ವಿಕೆಟ್ನಷ್ಟಕ್ಕೆ 208ರನ್ಗಳಿಕೆ ಮಾಡಿ, 2ರನ್ಗಳ ರೋಚಕ ಸೋಲು ಕಂಡಿತು.
ಲಖನೌ ಪರ ಮೋಸಿನ್ ಖಾನ್, ಸ್ಟೋಯ್ನಿಸ್ ತಲಾ 3 ವಿಕೆಟ್ ಪಡೆದು ಗಮನ ಸೆಳೆದರೆ, ಗೌತಮ್ ಹಾಗೂ ಬಿಷ್ಣೋಯ್ 1 ವಿಕೆಟ್ ಕಿತ್ತರು.
ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಕನ್ನಡಿಗ ರಾಹುಲ್ ಪಡೆ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು.
-
#LSG have won the toss and they will bat first against #KKR.
— IndianPremierLeague (@IPL) May 18, 2022 " class="align-text-top noRightClick twitterSection" data="
Live - https://t.co/NbhFO1ozC7 #KKRvLSG #TATAIPL pic.twitter.com/SMb8cDc0s9
">#LSG have won the toss and they will bat first against #KKR.
— IndianPremierLeague (@IPL) May 18, 2022
Live - https://t.co/NbhFO1ozC7 #KKRvLSG #TATAIPL pic.twitter.com/SMb8cDc0s9#LSG have won the toss and they will bat first against #KKR.
— IndianPremierLeague (@IPL) May 18, 2022
Live - https://t.co/NbhFO1ozC7 #KKRvLSG #TATAIPL pic.twitter.com/SMb8cDc0s9
ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಅಭ್ಜಿತ್ ತೊಮರ್, ಶ್ರೇಯಸ್ ಅಯ್ಯರ್(ಕ್ಯಾಪ್ಟನ್), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್(ವಿ,ಕೀ), ರಿಂಕು ಸಿಂಗ್, ಆಂಡ್ರೋ ರೆಸೆಲ್, ಸುನಿಲ್ ನರೈನ್, ಉಮೇಶ್ ಯಾದವ್, ಟಿಮ್ ಸೌಥಿ, ವರುಣ್ ಚಕ್ರವರ್ತಿ
ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿಕಾಕ್(ವಿ,ಕೀ), ಕೆಎಲ್ ರಾಹುಲ್(ಕ್ಯಾಪ್ಟನ್), ಎವಿನ್ ಲಿವಿಸ್,ದೀಪಕ್ ಹೂಡಾ, ಮನನ್ ವೋಹ್ರಾ, ಮಾರ್ಕೋಸ್ ಸ್ಟೋನಿಸ್, ಜೆಸನ್ ಹೊಲ್ಡರ್, ಕೆ. ಗೌತಮ್, ಮೋಸಿನ್ ಖಾನ್, ಆವೇಶ್ ಖಾನ್, ರವಿ ಬಿಷ್ಣೋಯ್
ಕೋಲ್ಕತ್ತಾ ತಂಡದಲ್ಲಿ ರಹಾನೆ ಸ್ಥಾನಕ್ಕೆ ಅಭ್ಜಿತ್ ತೊಮರ್ಗೆ ಮಣೆ ಹಾಕಲಾಗಿದ್ದು, ಲಖನೌ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಕೃನಾಲ್, ಬದೌನಿ, ಚಮೀರಾ ಸ್ಥಾನಕ್ಕೆ ಮನನ್ ವೋಹ್ರಾ, ಲಿವಿಸ್ ಹಾಗೂ ಗೌತಮ್ ಅವಕಾಶ ಪಡೆದುಕೊಂಡಿದ್ದರು.