ETV Bharat / sports

IPL: ಪಂಜಾಬ್​​-ಗುಜರಾತ್ ಮುಖಾಮುಖಿ; ಟಾಸ್​ ಸೋತ ಮಯಾಂಕ್ ಪಡೆ ಬ್ಯಾಟಿಂಗ್​​

15ನೇ ಆವೃತ್ತಿ ಐಪಿಎಲ್​​ನಲ್ಲಿ ಮೂರನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಗುಜರಾತ್ ಟೈಟನ್ಸ್​ ಇಂದಿನ ಪಂದ್ಯದಲ್ಲಿ ಪಂಜಾಬ್​​ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.

Punjab Kings vs Gujarat Titans
Punjab Kings vs Gujarat Titans
author img

By

Published : Apr 8, 2022, 7:23 PM IST

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್​ನ ಇಂದಿನ ಪಂದ್ಯದಲ್ಲಿ ಬಲಿಷ್ಠ ಗುಜರಾತ್​ ಹಾಗೂ ಪಂಜಾಬ್ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಹಾರ್ದಿಕ್ ಪಾಂಡ್ಯಾ ನೇತೃತ್ವದ ತಂಡ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಮುಂಬೈನ ಬ್ರೆಬೋರ್ನ್​ ಮೈದಾನದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ.

ಆಡಿರುವ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಹಾರ್ದಿಕ್ ಪಾಂಡ್ಯಾ ನಾಯಕತ್ವದ ಗುಜರಾತ್ ಟೈಟನ್ಸ್​ ಆತ್ಮವಿಶ್ವಾಸದಿಂದ ಕಣಕ್ಕಿಳಿದಿದ್ದು, ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇತ್ತ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಜಯಿಸಿರುವ ಪಂಜಾಬ್ ಕಿಂಗ್ಸ್ ಕೂಡ ಎಲ್ಲ ವಿಭಾಗದಲ್ಲೂ ಸಮತೋಲನದಿಂದ ಕೂಡಿದ್ದು, ಗುಜರಾತ್​ಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದೆ.

ಪಂಜಾಬ್ ಆಡುವ 11ರ ಬಳಗ: ಮಯಾಂಕ್ ಅಗರವಾಲ್​(ಕ್ಯಾಪ್ಟನ್​), ಶಿಖರ್ ಧವನ್, ಲಿವಿಂಗ್​ಸ್ಟೋನ್​, ಬೈರ್​​ಸ್ಟೋ(ವಿ.ಕೀ), ಜಿತೇಶ್ ಶರ್ಮಾ, ಶಾರೂಖ್ ಖಾನ್​, ಒಡೆನ್ ಸ್ಮಿತ್, ಕಾಗಿಸೋ ರಬಾಡ, ರಾಹುಲ್ ಚಹರ್​, ವೈಭವ್​ ಆರೋರ್​, ಅರ್ಷದೀಪ್​ ಸಿಂಗ್​

ಗುಜರಾತ್ ಟೈಟನ್ಸ್​ ಆಡುವ 11ರ ಬಳಗ: ಮಾಥ್ಯೂ ವೇಡ್​(ವಿ,ಕೀ), ಶುಬ್ಮನ್ ಗಿಲ್​, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯಾ(ಕ್ಯಾಪ್ಟನ್), ಡೇವಿಡ್ ಮಿಲ್ಲರ್​, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್​, ರಾಶೀದ್ ಖಾನ್, ಫಾರ್ಗ್ಯೂಸನ್​, ಮೊಹಮ್ಮದ್ ಶಮಿ, ದರ್ಶನ್​ ನಾಲ್ಕೆಂಡ್​

ಪಂಜಾಬ್ ತಂಡದಲ್ಲಿ ರಾಜಪಕ್ಸೆ ಸ್ಥಾನದಲ್ಲಿ ಸ್ಫೋಟಕ ಬ್ಯಾಟರ್​​ ಬೈರ್​ಸ್ಟೋವ್​ಗೆ ಅವಕಾಶ ನೀಡಲಾಗಿದೆ. ಗುಜರಾತ್ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ವಿಜಯ್ ಶಂಕರ್​, ವರುಣ್​​ ಸ್ಥಾನಕ್ಕೆ ಸಾಯಿ ಸುದರ್ಶನ್ ಹಾಗೂ ದರ್ಶನ್​ ಪದಾರ್ಪಣೆ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.