ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿವೆ. ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಪ್ಲೇಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಎರಡು ತಂಡಗಳಿಗೂ ಈ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ.
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಇಂದಿನ ಪಂದ್ಯಕ್ಕಾಗಿ ಹೈದರಾಬಾದ್ ತಂಡ ಮಹತ್ವದ ಬದಲಾವಣೆ ಮಾಡಿದ್ದು, ಕಾರ್ತಿಕ್ ತ್ಯಾಗಿ, ಶ್ರೇಯಸ್ ಗೋಪಾಲ್ ಹಾಗೂ ಸೇನಾ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಗಾಯಗೊಂಡಿರುವ ಟಿ. ನಟರಾಜನ್, ವಾಷಿಂಗ್ಟನ್ ಸುಂದರ್ ಹಾಗೂ ಜಾನ್ಸನ್ ಹೊರಗುಳಿದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಪೃಥ್ವಿ ಶಾ ಆಡುವ 11ರ ಬಳಗದಿಂದ ಹೊರಗುಳಿದಿದ್ದಾರೆ. ದೆಹಲಿ ತಂಡದಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದ್ದು,ಮನದೀಪ್ ಸಿಂಗ್ಮ ರಿಪಾಲ್ ಪಟೇಲ್, ಖಲೀಲ್ ಅಹ್ಮದ್ ಹಾಗೂ ನಾರ್ಟ್ಜೆ ಆಡುವ 11ರಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
-
🚨 Toss Update 🚨@SunRisers have elected to bowl against @DelhiCapitals.
— IndianPremierLeague (@IPL) May 5, 2022 " class="align-text-top noRightClick twitterSection" data="
Follow the match ▶️ https://t.co/0T96z8GzHj #TATAIPL | #DCvSRH pic.twitter.com/11uq5iR8Gv
">🚨 Toss Update 🚨@SunRisers have elected to bowl against @DelhiCapitals.
— IndianPremierLeague (@IPL) May 5, 2022
Follow the match ▶️ https://t.co/0T96z8GzHj #TATAIPL | #DCvSRH pic.twitter.com/11uq5iR8Gv🚨 Toss Update 🚨@SunRisers have elected to bowl against @DelhiCapitals.
— IndianPremierLeague (@IPL) May 5, 2022
Follow the match ▶️ https://t.co/0T96z8GzHj #TATAIPL | #DCvSRH pic.twitter.com/11uq5iR8Gv
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಮನದೀಪ್ ಸಿಂಗ್, ಮಿಚಲ್ ಮಾರ್ಷ್, ರಿಷಭ್ ಪಂತ್(ವಿ.ಕೀ/ಕ್ಯಾಪ್ಟನ್), ಲಲಿತ್ ಯಾದವ್, ಪೊವೆಲ್, ರಿಪಾಲ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಅನ್ರಿಚ್ ನಾರ್ಟ್ಜೆ
ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್(ಕ್ಯಾಪ್ಟನ್), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೂಲಸ್ ಪೊರನ್(ವಿ.ಕೀ), ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೀನ್ ಅಬಾಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲಿಕ್
ಇಲ್ಲಿಯವರೆಗೆ ಹೈದರಾಬಾದ್ 9 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು, ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳಿಂದ 4ರಲ್ಲಿ ಗೆದ್ದು 7ನೇ ಸ್ಥಾನದಲ್ಲಿದೆ. ಐಪಿಎಲ್ನಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ 20 ಸಲ ಮುಖಾಮುಖಿಯಾಗಿದ್ದು, ಇದರಲ್ಲಿ 11 ಸಲ ಸನ್ರೈಸರ್ಸ್ ಗೆಲುವು ದಾಖಲು ಮಾಡಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ 9 ಸಲ ಜಯದ ನಗೆ ಬೀರಿದೆ.