ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಿಷಭ್ ಪಂತ್ ಪಡೆ ಬೌಲಿಂಗ್ ಆಯ್ದುಕೊಂಡಿದೆ.
ಕೋವಿಡ್ 19 ಭೀತಿ ಲೆಕ್ಕಿಸದೇ ಹಿಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸಿದ್ದು, ಇದೀಗ ರಾಜಸ್ಥಾನ್ ರಾಯಲ್ಸ್ ಸವಾಲು ಎದುರಿಸಲಿದೆ. 6 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ 4ರಲ್ಲಿ ಜಯಸಿದ್ದು, ಡೆಲ್ಲಿ ಮೂರರಲ್ಲಿ ಮಾತ್ರ ಜಯ ಸಾಧಿಸಿದೆ.
-
Delhi Capitals have won the toss and they will bowl first against #RR.
— IndianPremierLeague (@IPL) April 22, 2022 " class="align-text-top noRightClick twitterSection" data="
Live - https://t.co/IOIoa87Os8 #DCvRR #TATAIPL pic.twitter.com/81U0oOwrFO
">Delhi Capitals have won the toss and they will bowl first against #RR.
— IndianPremierLeague (@IPL) April 22, 2022
Live - https://t.co/IOIoa87Os8 #DCvRR #TATAIPL pic.twitter.com/81U0oOwrFODelhi Capitals have won the toss and they will bowl first against #RR.
— IndianPremierLeague (@IPL) April 22, 2022
Live - https://t.co/IOIoa87Os8 #DCvRR #TATAIPL pic.twitter.com/81U0oOwrFO
ರಾಜಸ್ಥಾನ ರಾಯಲ್ಸ್: ಜಾಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್(ಕ್ಯಾ, ವಿ,ಕೀ),ಶಿಮ್ರಾನ್ ಹೆಟ್ಮಾಯರ್, ಕರುಣ್ ನಾಯರ್, ರಿಯಾಗ್ ಪರಾಗ್, ಆರ್. ಅಶ್ವಿನ್,ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ, ಒಬ್ಡೆ ಮೈಕೊ, ಯಜುವೇಂದ್ರ ಚಹಲ್
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ರಿಷಭ್ ಪಂತ್(ಕ್ಯಾ, ವಿ,ಕೀ), ಪೊವೆಲ್,ಸರ್ಫರಾಜ್ ಖಾನ್, ಲಲಿತ್ ಯಾದವ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮುಸ್ತುಫಿಜುರ್ ರೆಹಮಾನ್, ಖಲೀಲ್ ಅಹ್ಮದ್
ಎರಡೂ ತಂಡಗಳಲ್ಲೂ ಸ್ಫೋಟಕ ಆಟಗಾರರ ದಂಡೇ ಇದೆ. ರಾಯಲ್ಸ್ ಪರ ಜಾಸ್ ಬಟ್ಲರ್, ಸಂಜು ಸಾಮ್ಸನ್, ಪಡಿಕ್ಕಲ್ ಅದ್ಭುತ ಫಾರ್ಮ್ನಲ್ಲಿದ್ದರೆ, ಇತ್ತ ಡೆಲ್ಲಿ ತಂಡದಲ್ಲಿ ಆರಂಭಿಕ ಬ್ಯಾಟರ್ಗಳಾದ ಪೃಥ್ವಿ ಶಾ, ಡೇವಿಡ್ ವಾರ್ನರ್ ಮತ್ತು ರಿಷಭ್ ಪಂತ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ವಾರ್ನರ್-ಶಾ ಜೋಡಿ ಸತತ 4 ಪಂದ್ಯಗಳಲ್ಲಿ 50 ರನ್ಗಳ ಜೊತೆಯಾಟ ನಡೆಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಹಾಗಾಗಿ ಆರಂಭಿಕ ಕ್ರಮಾಂಕದಲ್ಲಿ ಸಮಬಲದ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ರಾಜಸ್ಥಾನ್ ರಾಯಲ್ಸ್ಗೆ ಹೋಲಿಸಿದರೆ ತಂಡದ ಮಧ್ಯಮ ಕ್ರಮಾಂಕ ಅಷ್ಟೇನೂ ಬಲಿಷ್ಠವಾಗಿಲ್ಲ. ರೋವ್ಮನ್ ಪೋವೆಲ್ ಸಂಪೂರ್ಣ ವಿಫಲರಾದರೆ, ಲಲಿತ್ ಯಾದವ್ ಸರ್ಫರಾಜ್ ಖಾನ್ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಲು ಅವಕಾಶಗಳು ಸಿಕ್ಕಿಲ್ಲ. ಹಾಗಾಗಿ ನಾಳಿನ ಪಂದ್ಯ ಇವರಿಗೆ ಸೂಕ್ತ ವೇದಿಕೆಯಾಗಲಿದೆ. ಆದರೆ ರಾಯಲ್ಸ್ಗೆ ಹೆಟ್ಮಾಯರ್ ಮಧ್ಯಮ ಕ್ರಮಾಂಕದಲ್ಲಿ ಅಮೋಘ ಫಾರ್ಮ್ನಲ್ಲಿದ್ದು ತಂಡಕ್ಕೆ ನಿರ್ಣಾಯಕ ರನ್ ಗಳಿಸುತ್ತಿದ್ದಾರೆ. ಜೊತೆಗೆ ಅಶ್ವಿನ್ ಬ್ಯಾಟಿಂಗ್ನಲ್ಲಿ ನೆರವಾಗುತ್ತಿದ್ದಾರೆ. ಆದರೆ ಪರಾಗ್ ಮಾತ್ರ ಸಿಕ್ಕ ಅವಕಾಶಗಳನ್ನು ಇನ್ನೂ ಸದುಪಯೋಗಪಡಿಸಿಕೊಂಡಿಲ್ಲ.
ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಮತ್ತು ರಾಯಲ್ಸ್ ಟೂರ್ನಿಯಲ್ಲೇ ಅತ್ಯುತ್ತಮ ದಾಳಿಯನ್ನು ಹೊಂದಿವೆ. ಪಂತ್ ಬಳಗದಲ್ಲಿ ಮುಸ್ತಾಫಿಜುರ್ ರಹಮಾನ್, ಶಾರ್ದುಲ್ ಠಾಕೂರ್, ಖಲೀಲ್ ಅಹ್ಮದ್‌ರಂತಹ ಮಾರಕ ವೇಗಿಗಳಿದ್ದಾರೆ. ಇತ್ತ ರಾಯಲ್ಸ್ ತಂಡದಲ್ಲಿ ವೇಗದ ಬೌಲಿಂಗ್ ಬೌಲ್ಟ್ ಬಿಟ್ಟರೆ ಉಳಿದ ಬೌಲರ್ಗಳು ಅಷ್ಟು ಮೊನಚು ಹೊಂದಿಲ್ಲ. ಆದರೆ ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಮತ್ತು ಅಶ್ವಿನ್ ಅಂತಹ ವಿಶ್ವಶ್ರೇಷ್ಠರಿದ್ದಾರೆ. ಹೆಚ್ಚು ಕಡಿಮೆ ಸರಿಸಮನಾದ ಬಳಗವನ್ನು ಹೊಂದಿರುವ ಈ ಎರಡು ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
ಮುಖಾಮುಖಿ: ಉಭಯ ತಂಡಗಳ ನಡುವೆ ಇದುವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 12 ಜಯ ಸಾಧಿಸಿವೆ. ಕಳೆದ ಋತುವಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ತಲಾ 1 ಪಂದ್ಯವನ್ನು ಗೆದ್ದಿವೆ.