ಪುಣೆ(ಮಹಾರಾಷ್ಟ್ರ): ಸೂರ್ಯಕುಮಾರ್ ಯಾದವ್ ಅರ್ಧಶತಕ ಮತ್ತು ಯುವ ಆಟಗಾರರಾದ ಡೆವಾಲ್ಡ್ ಬ್ರೇವಿಸ್ ಹಾಗೂ ಪೊಲಾರ್ಡ್ ಭರ್ಜರಿ ಆಟದಿಂದ ಮುಂಬೈ ಇಂಡಿಯನ್ಸ್ ಎದುರಾಳಿ ಕೋಲ್ಕತ್ತಾ ತಂಡಕ್ಕೆ 162 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಆದ್ರೆ ಕೆಕೆಆರ್ ತಂಡದ ಜವಾಬ್ದಾರಿ ಆಟದಿಂದ ಮುಂಬೈ ನೀಡಿದ ಗುರಿಯನ್ನು ಸುಲಭವಾಗಿಯೇ ಮುಟ್ಟಿತು.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್: ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿತು. ಆದರೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ 3 ರನ್ ಮತ್ತು ಇಶಾನ್ ಕಿಶನ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದರಿಂದ ಮುಂಬೈಗೆ ನಿರೀಕ್ಷಿತ ಆರಂಭ ದೊರೆಯಲಿಲ್ಲ.
-
Match Report - @patcummins30 stunned everyone with his batting prowess by equalling the record of joint-fastest half-century in the IPL as #KKR chased down the target of 162 with four overs to spare - by @mihirlee_58
— IndianPremierLeague (@IPL) April 6, 2022 " class="align-text-top noRightClick twitterSection" data="
More here - https://t.co/2ZlEmA6Eai #TATAIPL #KKRvMI pic.twitter.com/3pS1gpOaTe
">Match Report - @patcummins30 stunned everyone with his batting prowess by equalling the record of joint-fastest half-century in the IPL as #KKR chased down the target of 162 with four overs to spare - by @mihirlee_58
— IndianPremierLeague (@IPL) April 6, 2022
More here - https://t.co/2ZlEmA6Eai #TATAIPL #KKRvMI pic.twitter.com/3pS1gpOaTeMatch Report - @patcummins30 stunned everyone with his batting prowess by equalling the record of joint-fastest half-century in the IPL as #KKR chased down the target of 162 with four overs to spare - by @mihirlee_58
— IndianPremierLeague (@IPL) April 6, 2022
More here - https://t.co/2ZlEmA6Eai #TATAIPL #KKRvMI pic.twitter.com/3pS1gpOaTe
ಅಲ್ಲದೆ ಉಮೇಶ್ ಯಾದವ್, ರಸಿಖ್ ಸಲಾಮ್, ನರೈನ್ ಬೌಲಿಂಗ್ ದಾಳಿಯಿಂದ ಮುಂಬೈ ತಂಡದ ರನ್ಗತಿಗೆ ಕಡಿವಾಣ ಹಾಕಿದರು. ಆದರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಪಾದಾರ್ಪಣೆ ಬ್ಯಾಟರ್ ಬೇಬಿ ಎಬಿಡಿ ಖ್ಯಾತಿಯ ಬ್ರೇವಿಸ್ 19 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 29 ರನ್ ಗಳಿಸಿದರು. ಆದರೆ ಇವರ ಜೊತೆಗೆ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 21 ಎಸೆತಗಳಲ್ಲಿ ಕೇವಲ 1 ಬೌಂಡರಿ ಸಹಿತ 14 ರನ್ಗಳಿಸಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಓದಿ: ಧೋನಿ ನಾಯಕತ್ವ ತ್ಯಜಿಸಿದ್ದರೂ ಫೀಲ್ಡ್ ಸೆಟ್ಟಿಂಗ್ ಮಾಡುವುದೇಕೆ?: ಟೀಕಾಕಾರರ ಬಾಯಿ ಮುಚ್ಚಿಸಿದ ಜಡ್ಡು
55ಕ್ಕೆ 3 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್ ಚೇತರಿಕೆ ನೀಡಿದರು. ಅವರು ಯುವ ಬ್ಯಾಟರ್ ತಿಲಕ್ ವರ್ಮಾ ಜೊತೆಗೂಡಿ 4ನೇ ವಿಕೆಟ್ಗೆ 83 ರನ್ಗಳ ಜೊತೆಯಾಟ ನೀಡಿ ತಂಡದ ಮೊತ್ತವನ್ನು ಏರಿಸುವಲ್ಲಿ ಸಫಲರಾದರು.
ಸೂರ್ಯ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 52 ರನ್ಗಳಿಸಿ ಔಟಾದರು. ತಿಲಕ್ ವರ್ಮಾ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 38 ರನ್ಗಳಿಸಿದರು. ಕೊನೆಯಲ್ಲಿ 5 ಎಸೆತಗಳನ್ನು ಎದುರಿಸಿದ ಪೊಲಾರ್ಡ್ 3 ಸಿಕ್ಸರ್ ಸೇರಿದಂತೆ ಅಜೇಯ 22 ರನ್ಗಳಿಸಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಕೆಕೆಆರ್ ಪರ ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರೂ 49 ರನ್ ಬಿಟ್ಟುಕೊಟ್ಟರು. ಇನ್ನು ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ ಉಮೇಶ್ ಯಾದವ್ 25ಕ್ಕೆ1, ವರುಣ್ ಚಕ್ರವರ್ತಿ 32ಕ್ಕೆ 1 ವಿಕೆಟ್ ಪಡೆದರು.
ಕೆಕೆಆರ್ ಇನ್ನಿಂಗ್ಸ್: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ್ದ ಕೆಕೆಆರ್ ತಂಡಕ್ಕೆ ಮುಂಬೈ ಇಂಡಿಯನ್ಸ್ ಬೌಲರ್ಗಳು ಶಾಕ್ ನೀಡಿದರು. ಅಜಿಂಕ್ಯ ರಹಾನೆ 7 ರನ್, ನಾಯಕ ಶ್ರೇಯಸ್ ಅಯ್ಯರ್ 10 ರನ್ ಮತ್ತು ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ 17 ರನ್ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಒಂದು ಕಡೆ ಮಾತ್ರ ವೆಂಕಟೇಶ್ ಅಯ್ಯರ್ ಜವಾಬ್ದಾರಿ ಆಟ ಆಡುತ್ತಲೇ ತಂಡವನ್ನು ಮುನ್ನಡೆಸುತ್ತಿದ್ದರು. ಇನ್ನೊಂದಡೆ ಬಂದ ಬ್ಯಾಟ್ಮನ್ಸ್ಗಳು ಪೆವಿಲಿಯನ್ ಹಾದಿ ಹಿಡಿಯುತ್ತಿದ್ದರು. ನಿತೀಶ್ ರಾಣಾ 8 ರನ್ ಮತ್ತು ರಸೇಲ್ 11 ರನ್ ಗಳಿಸಿ ಔಟಾದರು. ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಕನಸು ಕಾಣುತ್ತಿತ್ತು. ಆದ್ರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಯಾಟ್ ಕಮಿನ್ಸ್ ಮುಳ್ಳಿನಂತೆ ಕಾಡಿದರು.
ಓದಿ: ಐಪಿಎಲ್ನಿಂದ ಹೊರಬಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ವೇಗಿ
ಅರ್ಧ ಶತಕ ಪೂರೈಸಿ ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿದ್ದ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಜೊತೆಗೂಡಿದ ಪ್ಯಾಟ್ ಕಮಿನ್ಸ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಮುಂಬೈ ಇಂಡಿಯನ್ಸ್ ಬೌಲರ್ಗಳನ್ನು ಬಗ್ಗು ಬಡಿದ ಅವರು 6 ಸಿಕ್ಸ್, 4 ಬೌಂಡರಿಗಳ ನೆರವಿನಿಂದ ಕೇವಲ 15 ಎಸೆತಗಳಲ್ಲಿ 56 ರನ್ಗಳನ್ನು ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 162 ರನ್ಗಳ ಸ್ಪರ್ಧಾತ್ಮಕ ಮೊತ್ತವನ್ನು ಕೆಕೆಆರ್ ತಂಡ ಸುಲಭವಾಗಿ ಗುರಿ ಮುಟ್ಟಿತು. ಕೇವಲ 16 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 162 ರನ್ಗಳನ್ನು ಕಲೆ ಹಾಕುವ ಮೂಲಕ ಜಯ ಗಳಿಸಿತು. ಇನ್ನು ಈ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ಗೆ ಸತತ ಮೂರನೇ ಸೋಲು ಇದಾಗಿದೆ.
ಮುಂಬೈ ಇಂಡಿಯನ್ಸ್ ಪರ ತೈಮಲ್ ಮಿಲ್ಸ್ ಮತ್ತು ಮುರುಗನ್ ಅಶ್ವಿನ್ ತಲಾ ಎರಡು ವಿಕೆಟ್ ಪಡೆದರು. ಡೆನಿಲ್ ಸ್ಯಾಮ್ಸ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇಂದು ಸಂಜೆ 7.30ಕ್ಕೆ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ನಡುವೆ ಸೆಣಸಾಟ ನಡೆಯಲಿದೆ.