ಮುಂಬೈ: ಐಪಿಎಲ್ 2022ರ 30ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 7 ರನ್ನಿಂದ ಗೆಲುವು ಸಾಧಿಸಿದೆ. ಜಾಸ್ ಬಟ್ಲರ್(103) ಅವರ ಅಮೋಘ ಶತಕ ಮತ್ತು ಯಜ್ವೇಂದ್ರ ಚಹಾಲ್ ಅವರ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ಗಳು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮುಳುವಾಗಿವೆ.
ಬ್ರಬೋರ್ನ್ ಸ್ಟೇಡಿಂಯನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 217 ರನ್ ಕಲೆಹಾಕಿತು. ರಾಜಸ್ಥಾನ ರಾಯಲ್ಸ್ ಪರ ಜೋಸ್ ಬಟ್ಲರ್ 61 ಎಸೆತಗಳಲ್ಲಿ 103 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 38, ಶಿಮ್ರಾನ್ ಹೆಟ್ಮಿಯರ್ 13 ಎಸೆತಗಳಲ್ಲಿ 26, ದೇವದತ್ ಪಡಿಕ್ಕಲ್ 18 ಎಸೆತಗಳಲ್ಲಿ 24 ರನ್ ಕಲೆಹಾಕಿದರು. ಕೆಕೆಆರ್ ಪರ ಸುನಿಲ್ ನರೈನ್ 21ಕ್ಕೆ 2 ಹಾಗೂ ಆಂಡ್ರೆ ರಸೆಲ್ ಮತ್ತು ಶಿವಂ ಮಾವಿ ತಲಾ ಒಂದೊಂದು ವಿಕೆಟ್ ಪಡೆದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ 217 ರನ್ಗಳನ್ನು ಕಲೆಹಾಕಿತ್ತು.
-
After an absolute thriller of a Match 3⃣0⃣ in the #TATAIPL 2022, here's how the Points Table looks 🔽 #RRvKKR pic.twitter.com/K5e3L9edGP
— IndianPremierLeague (@IPL) April 18, 2022 " class="align-text-top noRightClick twitterSection" data="
">After an absolute thriller of a Match 3⃣0⃣ in the #TATAIPL 2022, here's how the Points Table looks 🔽 #RRvKKR pic.twitter.com/K5e3L9edGP
— IndianPremierLeague (@IPL) April 18, 2022After an absolute thriller of a Match 3⃣0⃣ in the #TATAIPL 2022, here's how the Points Table looks 🔽 #RRvKKR pic.twitter.com/K5e3L9edGP
— IndianPremierLeague (@IPL) April 18, 2022
ರಾಜಸ್ಥಾನ ರಾಯಲ್ಸ್ ನೀಡಿದ 218 ರನ್ಗಳ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ 19.4 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು 210 ರನ್ ಗಳಿಸಲಷ್ಟೇ ಶಕ್ತವಾಯಿತು. ಕೆಕೆಆರ್ ಪರ ಶ್ರೇಯಸ್ ಅಯ್ಯರ್ ಮತ್ತು ಆ್ಯರನ್ ಪಿಂಚ್ ಸಿಡಿಸಿದ ಅರ್ಧ ಶತಕ ವ್ಯರ್ಥವಾಯಿತು. ಆ್ಯರನ್ ಪಿಂಚ್ 28 ಎಸೆತಗಳಲ್ಲಿ 58, ಶ್ರೇಯಸ್ ಅಯ್ಯರ್ 51 ಎಸೆತಗಳಲ್ಲಿ 85 ಗಳಿಸಿದರೆ ಉಮೇಶ್ ಯಾದವ್ ಅವರ 21 ರನ್ ಮತ್ತು ನಿತೀಶ್ ರಾಣಾ ಅವರ 18 ರನ್ ಹೊರತುಪಡಿಸಿದರೆ, ಇನ್ಯಾರೂ ಎರಡಂಕಿಯ ರನ್ ತಲುಪಲು ವಿಫಲರಾದರು.
ರಾಜಸ್ಥಾನ ರಾಯಲ್ಸ್ ಬೌಲಿಂಗ್ ಅಬ್ಬರಕ್ಕೆ ಕೆಕೆಆರ್ ತತ್ತರಿಸಿದ್ದು, ಯಜ್ವೇಂದ್ರ ಚಹಾಲ್ 40 ರನ್ಗೆ 5 ವಿಕೆಟ್, ಒಬೆಡ್ ಮೆಕಾಯ್ 2, ಆರ್ ಅಶ್ವಿನ್ 1 ವಿಕೆಟ್ ಪಡೆದರು. ಈ ಮೂಲಕ ಏಳು ರನ್ಗಳ ಅಂತರದಿಂದ ಗೆಲ್ಲಲು ರಾಜಸ್ಥಾನ ರಾಯಲ್ಸ್ಗೆ ಸಾಧ್ಯವಾಯಿತು.
ಇದನ್ನೂ ಓದಿ: ಜಾಸ್ ಬಟ್ಲರ್ ಭರ್ಜರಿ ಶತಕ... ಕೆಕೆಆರ್ಗೆ 218ರನ್ಗಳ ಬೃಹತ್ ಗುರಿ ನೀಡಿದ ರಾಯಲ್ಸ್