ETV Bharat / sports

ಐಪಿಎಲ್ ಹೊಸ ತಂಡಗಳ ಹರಾಜು ಪ್ರಕ್ರಿಯೆಗೆ ದಿನಗಣನೆ: ಅಹಮದಾಬಾದ್, ಲಖನೌ ಹೊಸ ಫ್ರಾಂಚೈಸಿ? - ಅಹಮದಾಬಾದ್ ಮತ್ತು ಲಖನೌ ತಂಡಗಳು ನ್ಯೂ ಫ್ರಾಂಚೈಸಿಗಳು,

ಐಪಿಎಲ್ 2022ರ ಟೂರ್ನಿಗೆ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗುವುದು ಖಚಿತ. ಹೊಸ ತಂಡಗಳ ಸ್ಥಾನಕ್ಕೆ ಅಹಮದಾಬಾದ್ ಹಾಗು ಲಖನೌ ಮುಂಚೂಣಿಯಲ್ಲಿವೆ ಎನ್ನಲಾಗ್ತಿದೆ.

Ahmedabad and Lucknow Favourites, Ahmedabad and Lucknow Favourites For 2 New Teams, Ahmedabad and Lucknow Favourites For 2 New Teams in Ipl 2022, ಅಹಮದಾಬಾದ್ ಮತ್ತು ಲಖನೌ ನ್ಯೂ ಫ್ರಾಂಚೈಸಿಗಳು, ಅಹಮದಾಬಾದ್ ಮತ್ತು ಲಖನೌ ತಂಡಗಳು ನ್ಯೂ ಫ್ರಾಂಚೈಸಿಗಳು, ಐಪಿಎಲ್​ 2022ನಲ್ಲಿ ಅಹಮದಾಬಾದ್ ಮತ್ತು ಲಖನೌ ತಂಡಗಳು ನ್ಯೂ ಫ್ರಾಂಚೈಸಿಗಳು
ಐಪಿಎಲ್​ನ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯಿಗೆ ದಿನಗಣನೆ
author img

By

Published : Oct 22, 2021, 1:23 PM IST

ನವದೆಹಲಿ: ಐಪಿಎಲ್‌ 2022ರ ಫ್ರಾಂಚೈಸಿಗಳ ರೇಸ್‌ನಲ್ಲಿ ಗುಜರಾತ್‌ನ ಅಹಮದಾಬಾದ್‌ ಮತ್ತು ಉತ್ತರ ಪ್ರದೇಶದ ಲಖನೌ ನಗರಗಳು ಮುಂಚೂಣಿಯಲ್ಲಿವೆ. ಈ ಎರಡು ಫ್ರಾಂಚೈಸಿ ಪಡೆಯಲು ದೇಶದ ಘಟಾನುಘಟಿ ಸಂಸ್ಥೆಗಳು ತೀವ್ರ ಪೈಪೋಟಿ ನಡೆಸುತ್ತಿವೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಅಹಮದಾಬಾದ್‌ ಫ್ರಾಂಚೈಸಿ ಖರೀದಿಸಲು ಭಾರತದ ಬಹುರಾಷ್ಟ್ರೀಯ ಕಂಪನಿ ಅದಾನಿ ಗ್ರೂಪ್ ಮುಂದಾಗಿದೆ ಎಂದು ತಿಳಿದು ಬಂದಿದೆ. ವಿಶ್ವವಿಖ್ಯಾತ ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್​ಬಾಲ್​ ಕ್ಲಬ್​ ಸೇರಿದಂತೆ ಹಲವಾರು ಕ್ರೀಡಾ ತಂಡಗಳ ಮಾಲೀಕರಾಗಿರುವ ಗ್ಲೇಜರ್ ಫ್ಯಾಮಿಲಿ ಐಪಿಎಲ್‌ ತಂಡವನ್ನು ಖರೀದಿಸಲು ಆಸಕ್ತಿ ತೋರಿದೆ. ಅದಕ್ಕಾಗಿ ಬಿಸಿಸಿಐನಿಂದ ಬಿಡ್​ ಇನ್ವಿಟೇಶನ್ ಟು ಟೆಂಡರ್‌ (ಐಟಿಟಿ) ದಾಖಲೆಯನ್ನು ಅಕ್ಟೋಬರ್​ 20ರಂದು ಖರೀದಿಸಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

3,000 ಕೋಟಿಗಿಂತ ಹೆಚ್ಚಿನ ಆದಾಯ ಇರುವ ಕಂಪನಿಗಳಿಗೆ ಮಾತ್ರ ಬಿಡ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಸಿಸಿಐ ಅವಕಾಶ ನೀಡಿದೆ. ಒಟಿಟಿ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳುವುದು ಯುಎಸ್ ಮೂಲದ ಗ್ಲೇಜರ್ ಕುಟುಂಬವು ಫ್ರಾಂಚೈಸಿಗಾಗಿ ಔಪಚಾರಿಕ ಬಿಡ್ ಮಾಡುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲವಾದರೂ, ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್‌ ಬಿಡ್‌ನಲ್ಲಿ ಭಾಗವಹಿಸುವುದಾದರೆ ಭಾರತದಲ್ಲಿ ತನ್ನ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ. ಒಟಿಟಿ ದಾಖಲಾತಿಯು ವಿದೇಶಿ ಸಂಸ್ಥೆಯ ಬಿಡ್ ಯಶಸ್ವಿಯಾಗಬೇಕಾದರೆ ಭಾರತದಲ್ಲಿ ಕಂಪನಿಯನ್ನು ಸ್ಥಾಪಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸುತ್ತದೆ.

ಈಗಾಗಲೇ ಐಪಿಎಲ್ ತಂಡಗಳ ಖರೀದಿಗಾಗಿ ಅದಾನಿ ಗ್ರೂಪ್, ಟೊರೆಂಟೋ ಫಾರ್ಮಾ, ಅರೊಬಿಂದೋ ಫಾರ್ಮಾ, ಆರ್‌ಪಿಜಿ ಸಂಜೀವ್ ಗೋಯೆಂಕಾ ಗ್ರೂಪ್, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ, ಜಿಂದಾಲ್ ಸ್ಟೀಲ್, ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಕಂಪನಿಗಳು ಬಿಡ್​ ದಾಖಲಾತಿಯನ್ನು ಖರೀದಿಸಿವೆ ಎಂದು ತಿಳಿದು ಬಂದಿದೆ.

ಐಪಿಎಲ್‌ನ ಎರಡು ಹೊಸ ತಂಡಗಳ ಹರಾಜು ಪ್ರಕ್ರಿಯೆ ಅಕ್ಟೋಬರ್ 25 ರಂದು ನಡೆಯುವ ಸಾಧ್ಯತೆ ಇದೆ. ಮುಂದಿನ ವರ್ಷದಿಂದ ಐಪಿಎಲ್ ಟೂರ್ನಿಯಲ್ಲಿ 10 ತಂಡಗಳು ಕಾದಾಟ ನಡೆಸಲಿವೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.