ಅಹ್ಮದಾಬಾದ್: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಬೇಸರ ವ್ಯಕ್ತಪಡಿಸಿದರು.
"ಇದು ನಮ್ಮ ಅತ್ಯಂತ ಕೆಟ್ಟ ಪ್ರದರ್ಶನ. ಹೊಸ ಪಿಚ್‌ಗೆ ನಾವು ಬಹುಬೇಗ ಹೊಂದಿಕೊಳ್ಳಬೇಕಾಗಿತ್ತು. ಅದರಂತೆ ಬ್ಯಾಟಿಂಗ್‌ನಲ್ಲೂ ಇನ್ನಷ್ಟು ಮೊನಚು ತೋರುವ ಮೂಲಕ 20 ರಿಂದ 30 ರನ್ ಹೆಚ್ಚುವರಿಯಾಗಿ ಗಳಿಸಬೇಕಾಗಿತ್ತು" ಎಂದು ಅವರು ಸೋಲಿನ ಪರಾಮರ್ಶೆ ಮಾಡಿದರು.
"ಇಲ್ಲಿನ ಪಿಚ್ ಸ್ವಲ್ಪ ನಿಧಾನಗತಿ ಹೊಂದಿದೆ. ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಎದುರಾಳಿ ತಂಡವನ್ನು 120 ಅಥವಾ 130 ರನ್‌ಗಳಿಗೆ ಕಟ್ಟಿ ಹಾಕುವುದು ಸಾಧ್ಯವಿಲ್ಲ. ಕೆಲ ಸಾಫ್ಟ್ ಔಟ್‌ಗಳು ತಂಡದ ಮೇಲೆ ಗಂಭೀರ ಪರಿಣಾಮ ಬೀರಿವೆ. ಪಿಚ್ ಎರಡು ರೀತಿ ವರ್ತಿಸುತ್ತಿತ್ತು. ಆದರೆ, ನಾವು ಅದಕ್ಕೆ ಹೊಂದಿಕೊಂಡು ಬ್ಯಾಟಿಂಗ್ ಮಾಡಬೇಕಾಗಿತ್ತು" ಎಂದು ಅವರು ಹೇಳಿದರು.
"ಆರಂಭದ 6 ಓವರ್‌ಗಳಲ್ಲಿ ಒಳ್ಳೆಯ ಹೊಡೆತಗಳನ್ನು ಆಯ್ಕೆ ಮಾಡಿ ಆಡುವ ಬಗ್ಗೆ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ಹೊಸ ಪಿಚ್ ಬಗ್ಗೆ ನಮಗೆ ಹೆಚ್ಚು ಗೊತ್ತಿರದ ಕಾರಣ ಮೊದಲು ಬ್ಯಾಟಿಂಗ್ ಮಾಡುವುದು ಕಠಿಣ. ಆದರೆ, ಬಹುಬೇಗ ಪಿಚ್‌ನ ಪರಿಸ್ಥಿತಿಗೆ ಹೊಂದಿಕೊಳ್ಳುವ ಅಗತ್ಯವಿದೆ. ಇದು ನಮ್ಮಿಂದ ಸಾಧ್ಯವಾಗಲಿಲ್ಲ. ನಮಗೆ ಇನ್ನೂ ಪಂದ್ಯಗಳಿವೆ. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಈ ತಪ್ಪುಗಳು ಮರುಕಳಿಸದಂತೆ ಕಲಿಯುತ್ತೇವೆ" ಎಂದು ಕೆ.ಎಲ್ ರಾಹುಲ್ ತಿಳಿಸಿದರು.
ಇದನ್ನೂ ಓದಿ : ಐಪಿಎಲ್ 2021: ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ನಗೆ ಬೀರಿದ ಕೆಕೆಆರ್