ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಕೆಟ್ ಕೀಪರ್ ಶ್ರೀಕಾರ್ ಭರತ್ ಹಾಗೂ ಗ್ಲೇನ್ ಮ್ಯಾಕ್ಸ್‌ವೆಲ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗಳ ಭರ್ಜರಿ ಗೆಲುವ ಸಾಧಿಸಿದ್ದಾರೆ. ಈ ಜಯದೊಂದಿಗೆ ಆರ್‌ಸಿಬಿ ಆಡಿದ 11 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಉಳಿದಿದೆ.
-
A match winning FIFTY for @Gmaxi_32 as @RCBTweets win by 7 wickets against #RR.
— IndianPremierLeague (@IPL) September 29, 2021 " class="align-text-top noRightClick twitterSection" data="
Scorecard - https://t.co/nORWT9iLHL #RRvRCB #VIVOIPL pic.twitter.com/k2iGxhYPJN
">A match winning FIFTY for @Gmaxi_32 as @RCBTweets win by 7 wickets against #RR.
— IndianPremierLeague (@IPL) September 29, 2021
Scorecard - https://t.co/nORWT9iLHL #RRvRCB #VIVOIPL pic.twitter.com/k2iGxhYPJNA match winning FIFTY for @Gmaxi_32 as @RCBTweets win by 7 wickets against #RR.
— IndianPremierLeague (@IPL) September 29, 2021
Scorecard - https://t.co/nORWT9iLHL #RRvRCB #VIVOIPL pic.twitter.com/k2iGxhYPJN
ಭರತ್ 35 ಎಸೆತಗಳಿಂದ 3 ಬೌಂಡರಿ ಒಂದು ಏಕೈಕ ಸಿಕ್ಸರ್ ಸಹಿತ 44 ರನ್‌ಗಳಿಸಿದರೆ, ಮ್ಯಾಕ್ಸ್‌ವೆಲ್ 30 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೊಂದಿಗೆ 50 ರನ್‌ಗಳ ಅರ್ಧ ಶತಕ ಬಾರಿಸಿ ತಂಡಕ್ಕೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಆರಂಭಿಕರಾಗಿ ಕಣಕ್ಕಿಳಿದ್ದ ವಿರಾಟ್ ಕೊಹ್ಲಿ ಹಾಗೂ ಕನ್ನಡಿಕ ದೇವದತ್ ಪಡಿಕ್ಕಲ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಈ ಜೋಡಿ 5.2 ಎರಡು ಓವರ್‌ಗಳಲ್ಲಿ 48 ರನ್‌ಗಳ ಜೊತೆಯಾಟ ಆಡಿದರು. ಪಡಿಕ್ಕಲ್ 17 ಎಸೆತಗಳಿಂದ 4 ಬೌಂಡರಿಗಳೊಂದಿಗೆ 22 ರನ್ ಗಳಿಸಿ ಮುಸ್ತಾಫಿಜುರ್‌ಗೆ ವಿಕೆಟ್ ಒಪ್ಪಿಸಿದರೆ, 25 ರನ್ ಗಳಿಸಿದ್ದ ನಾಯಕ ಕೊಹ್ಲಿ ರನೌಟ್ ಆದರು. ಆರ್ ಆರ್ ಪರ ಮುಸ್ತಾಪಿಜುರ್ ರೆಹಮಾನ್ 2 ವಿಕೆಟ್ ಪಡೆದರು.
ಅಬ್ಬರಿಸಿದ ಎವಿನ್ ಲೆವಿಸ್
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ ಆರಂಭದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಎವಿನ್ ಲೆವಿಸ್ ಆರ್‌ಸಿಬಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೊಂದಿಗೆ 58 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಲೆವಿಸ್‌ಗೆ ಸಾಥ್ ನೀಡಿದ್ದ ಜೈಸ್ವಾಲ್ 22 ಎಸೆತಗಳಿಂದ 3 ಬೌಂಡರಿ 2 ಸಿಕ್ಸರ್‌ಗಳೊಂದಿಗೆ 31 ರನ್ ಗಳಿಸಿ ಬೃಹತ್ ಮೊತ್ತದ ನಿರೀಕ್ಷೆ ಮೂಡಿಸಿದ್ದರು.
ತಂಡದ ಮೊತ್ತ 180ರ ಗಡಿ ದಾಟುವ ಮುನ್ಸೂಚನೆಯನ್ನು ಇವರು ನೀಡಿದ್ದರು. 9ನೇ ಓವರ್ ಎಸೆಯಲು ಬಂದ ಕ್ರಿಸ್ಟಿಯನ್ 2ನೇ ಎಸೆತದಲ್ಲಿ ಜೈಸ್ವಾಲ್‌ರನ್ನು ಔಟ್ ಮಾಡಿದರು. ಬಳಿಕ 12ನೇ ಓವರ್‌ನ ಮೊದಲ ಎಸೆತದಲ್ಲಿ ಜಾರ್ಜ್ ಗಾರ್ಟನ್, ಲೆವಿಸ್‌ಗೆ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ನಾಯಕ ಸ್ಯಾಮ್ಸನ್ 15 ಎಸೆತಗಳಿಂದ 2 ಸಿಕ್ಸರ್ ಸೇರಿ 19 ರನ್ ಗಳಿಸಿ ಶಹಬಾಜ್ ಅಹಮ್ಮದ್‌ಗೆ ವಿಕೆಟ್ ಒಪ್ಪಿಸಿದರು. ಕ್ರಿಸ್ ಮೋರಿಸ್ 14 ರನ್‌ಗಳನ್ನು ಹೊರತು ಪಡಿಸಿದರೆ ಯಾವೊಬ್ಬ ಆಟಗಾರರ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ ಆರ್‌ಆರ್ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಷ್ಟೇ ಶಕ್ತವಾಯಿತು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರೆ, ಚಾಹಲ್, ಶಹಬಾಜ್ ತಲಾ 2, ಕ್ರಿಸ್ಟಿಯನ್, ಜಾರ್ಜ್ ಗಾರ್ಟನ್ ತಲಾ ಒಂದು ವಿಕೆಟ್ ಪಡೆದರು.