ETV Bharat / sports

IPL 2021: ಕೆಕೆಆರ್‌ಗೆ ಇಂದು ಡಿಸಿ ಸವಾಲ್‌; ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮುಂಬೈ- ಪಂಜಾಬ್‌ ಫೈಟ್‌

author img

By

Published : Sep 28, 2021, 6:13 AM IST

ಶಾರ್ಜಾದಲ್ಲಿಂದು ಮಧ್ಯಾಹ್ನ ನಡೆಯಲಿರುವ ಕೆಕೆಆರ್‌ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ ಸೆಣಸಾಡುತ್ತಿವೆ. ಮತ್ತೊಂದೆಡೆ ಅಬುಧಾಬಿಯಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ಪೈಪೋಟಿ ನಡೆಸಲಿದ್ದಾರೆ.

IPL 2021: KKR vs DC and MI vs PBKS matches today
IPL 2021: ಕೆಕೆಆರ್‌ಗೆ ಇಂದು ಡಿಸಿ ಸವಾಲ್‌; ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಮುಂಬೈ-ಪಂಜಾಬ್‌ ಫೈಟ್‌

ಶಾರ್ಜಾ: ಐಪಿಎಲ್‌ ಟಿ-20 14ನೇ ಆವೃತ್ತಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 2 ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ 5ನೇ ಗೆಲುವಿಗಾಗಿ ಇಂದು ಮಧ್ಯಾಹ್ನ ಶಾರ್ಜಾದಲ್ಲಿ ಸೆಣಸಾಟ ನಡೆಸಲಿವೆ.

10 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಕೆಕೆಆರ್‌ಗೆ ಪ್ಲೇ ಆಫ್‌ ಹಂತವನ್ನು ಜೀವಂತವಾಗಿಸಿಕೊಳ್ಳಬೇಕಾದರೆ ಇಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಂಬೈಗೆ ಪಂಜಾಬ್‌ ಸವಾಲ್‌

ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಕೂಡ ಸತತ ಮೂರು ಪಂದ್ಯಗಳಲ್ಲಿ ಸೋತು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇಂದು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಅಬುದಾಬಿಯಲ್ಲಿ ಪೈಪೊಟಿ ನಡೆಸಲಿದೆ. ಇಲ್ಲೂ ಕೂಡ ಇಂದಿನ ಪಂದ್ಯದಲ್ಲಿ ಸೋಲುವ ತಂಡ ಪ್ಲೇ ಆಫ್‌ನಿಂದ ಹೊರ ಬೀಳುವುದು ಬಹುತೇಕ ಖಚಿತ. ಹೀಗಾಗಿ ಎರಡು ಬಲಿಷ್ಠ ತಂಡಗಳ ಗೆಲುವಿಗಾಗಿ ದೊಡ್ಡ ಮೊತ್ತದ ಆಟವನ್ನು ನಿರೀಕ್ಷಿಸಲಾಗಿದ್ದು, ರನ್‌ಗಳ ಸುರಿಮಳೆ ಹರಿಸುವ ಸಾಧ್ಯತೆ ಇದೆ.

ಮುಂಬೈ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 6ರಲ್ಲಿ ಸೋಲು ಅನುಭವಿಸಿ 7ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿಕೊಂಡು ಹೀಗೂ ಸೋಲಬಹುದು ಎಂದು ತೋರಿಸಿದ್ದ ಪಂಜಾಬ್‌, ವಿಜಯ ಮಾಲೆಗಾಗಿ ಪರದಾಡುತ್ತಿದ್ದು, ತಾನಾಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಹಂತಕ್ಕೆ ಹೋಗಬೇಕಾದರೆ ಇಂದಿನ ಪಂದ್ಯದಲ್ಲಿ ಶತಾಯ ಗತಾಯ ಗೆಲ್ಲಲೇ ಬೇಕೆಂಬ ಒತ್ತಡದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.