ETV Bharat / sports

ವಯುಸ್ಸು ಹೆಚ್ಚಾದಂತೆ ಗೇಲ್​​ ಅದ್ಭುತವಾಗಿ ಆಡುತ್ತಿದ್ದಾರೆ: ಕೆ.ಎಲ್.ರಾಹುಲ್​

ಪಂದ್ಯದ ನಂತರ ಮಾತನಾಡಿದ ನಾಯಕ ಕೆ.ಎಲ್.ರಾಹುಲ್, ಈ ಪಂದ್ಯದ ಗೆಲುವಿಗೆ ಮುಖ್ಯ ಕಾರಣರಾದ ಕ್ರಿಸ್​ ಗೇಲ್​, ಹಾಗೂ ಹರ್ಪ್ರೀತ್ ಬ್ರಾರ್​ರನ್ನ ಹಾಡಿ ಹೊಗಳಿದ್ದಾರೆ.

ಕೆ. ಎಲ್. ರಾಹುಲ್​
ಕೆ. ಎಲ್. ರಾಹುಲ್​
author img

By

Published : May 1, 2021, 11:16 AM IST

ಅಹಮದಾಬಾದ್: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್​ ತಂಡ 34 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ ಮುಖ್ಯ ಕಾರಣ ನಾಯಕ ಕೆ.ಎಲ್​.ರಾಹುಲ್​, ಕ್ರಿಸ್​ ಗೇಲ್​ ಹಾಗೂ ಹರ್ಪ್ರೀತ್ ಬ್ರಾರ್ ಅದ್ಭುತ ಪ್ರದರ್ಶನ.

"ಗೇಲ್ ಅವರ ವಯುಸ್ಸು ಹೆಚ್ಚಾದಂತೆ ಅದ್ಭುತವಾಗಿ ಆಡುತ್ತಿದ್ದಾರೆ. ಈ ವಯಸ್ಸಿನಲ್ಲೂ ಅವರ ಆಟ ನೋಡಿದರೆ ಖುಷಿ ಆಗುತ್ತೆ. ಈ ಪಂದ್ಯದ ಗೆಲುವಿನಲ್ಲಿ ಅವರ ಪ್ರಭಾವವೂ ದೊಡ್ಡದಾಗಿದೆ" ಎಂದು ರಾಹುಲ್​ ಹೇಳಿದರು.

"ನಾನು ಅವರೊಂದಿಗೆ 7-8 ವರ್ಷಗಳ ಕಾಲ ಆಡಿದ್ದೇನೆ. ಅವರ ವಯಸ್ಸು ಹೆಚ್ಚಾದಂತೆ ಅವರ ಆಟ ಉತ್ತಮಗೊಳ್ಳುತ್ತಲೇ ಇದೆ. ಅವರು ಸಾಮಾನ್ಯವಾಗಿ ಓಪನಿಂಗ್​ ಮಾಡೋದು. ಆದರೆ ತಂಡಕ್ಕಾಗಿ ಗೇಲ್​ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದಾರೆ. ಆ ಮನುಷ್ಯ ಒಮ್ಮೆ ಕ್ರೀಸ್ ಕಚ್ಚಿದರೆ ಅವರನ್ನು ತಡೆಯಲು ಸಾಧ್ಯವಿಲ್ಲ" ಎಂದರು.

"ನಾವು ಇಂತಹ ಪಿಚ್​ಗಾಗಿಯೇ ಬ್ರಾರ್ ಅವರನ್ನ ಸಿದ್ಧಪಡಿಸಿದ್ದೇವೆ. ಅವರ ಸ್ಪಿನ್​ ಸ್ಪೆಲ್​ ಚೆನ್ನಾಗಿದೆ. ನಾವು ಅಂದುಕೊಂಡಂತೆ ಇಂದಿನ ಪಂದ್ಯದಲ್ಲಿ ಪ್ರದರ್ಶನ ನೀಡಿದ್ದಾರೆ. ಹಾಗೇಯೆ ಬ್ಯಾಟಿಂಗ್​ನಲ್ಲೂ ಕೊನೆಯಲ್ಲಿ ಚೆನ್ನಾಗಿ ಆಡಿದರು" ಎಂದರು.

"ಆರ್‌ಸಿಬಿ ವಿರುದ್ಧದ ಪಂದ್ಯವನ್ನ ಅನಿವಾರ್ಯವಾಗಿ ನಾವು ಗೆಲ್ಲಲೇಬೇಕಾಗಿತ್ತು. ಈ ಪಂದ್ಯದಲ್ಲಿ ಗೆದ್ದರೆ ಈ ಟೂರ್ನಮೆಂಟ್‌ನ ಮುಂದಿನ ಪಂದ್ಯದಲ್ಲಿ ಫೈಟ್​ ಕೊಡಬಹುದು ಎಂದುಕೊಂಡಿದ್ದವು, ಅದು ಸಾಧ್ಯವಾಯಿತು" ಎಂದು ರಾಹುಲ್ ಹೇಳಿದರು.

"ತಂಡವನ್ನ ಉತ್ತಮ ಹಂತಕ್ಕೆ ತೆಗೆದುಕೊಂಡು ಹೋಗುವುದು ಮುಖ್ಯವಾಗಿತ್ತು. ಅದನ್ನೇ ಈ ಪಂದ್ಯದಲ್ಲಿ ನಾನು ಮಾಡಿದೆ. ಪ್ರತಿ ಪಂದ್ಯದಲ್ಲೂ ಇದನ್ನೇ ಮಾಡಲು ಪ್ರಯತ್ನಿಸುತ್ತೇನೆ. ಅವಕಾಶ ಸಿಕ್ಕಾಗ ನನ್ನ ಸಾಮರ್ಥ್ಯ ಮೀರಿ ತಂಡಕ್ಕೆ ಆಡಲು ಪ್ರಯತ್ನಿಸುತ್ತೇನೆ" ಎಂದರು.

ಓದಿ : ಐಪಿಎಲ್​ : ಆರ್‌ಸಿಬಿ ಮಣಿಸಿದ ಪಂಜಾಬ್ ಕಿಂಗ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.