ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಧೋನಿ ಬಳಗ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಕೆ ಮಾಡಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಸಿಎಸ್ಕೆ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಆಟಕ್ಕೆ ಮೊರೆ ಹೋಯಿತು. ಆರಂಭಿಕರಾಗಿ ಕಣಕ್ಕಿಳಿದ ಗಾಯಕ್ವಾಡ್ ಹಾಗೂ ಡುಪ್ಲೆಸಿ ಜೋಡಿ ಮತ್ತೊಮ್ಮೆ ಉತ್ತಮ ಜೊತೆಯಾಟವಾಡಿದರು. ಈ ಜೋಡಿ8 ಓವರ್ಗಳಲ್ಲಿ 60ರನ್ಗಳಿಕೆ ಮಾಡಿತು. ಆದರೆ, 32ರನ್ಗಳಿಕೆ ಮಾಡಿದ ಗಾಯಕ್ವಾಡ್ ನರೈನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
-
INNINGS BREAK!
— IndianPremierLeague (@IPL) October 15, 2021 " class="align-text-top noRightClick twitterSection" data="
8⃣6⃣ for @faf1307
3⃣7⃣* for Moeen Ali
3⃣2⃣ for @Ruutu1331
3⃣1⃣ for @robbieuthappa
2⃣/2⃣6⃣ for Sunil Narine
1⃣/3⃣2⃣ for @ShivamMavi23
The @KKRiders chase to begin shortly in the #VIVOIPL #Final. #CSKvKKR @ChennaiIPL
Scorecard 👉 https://t.co/JOEYUSwYSt pic.twitter.com/efrXsT1xFY
">INNINGS BREAK!
— IndianPremierLeague (@IPL) October 15, 2021
8⃣6⃣ for @faf1307
3⃣7⃣* for Moeen Ali
3⃣2⃣ for @Ruutu1331
3⃣1⃣ for @robbieuthappa
2⃣/2⃣6⃣ for Sunil Narine
1⃣/3⃣2⃣ for @ShivamMavi23
The @KKRiders chase to begin shortly in the #VIVOIPL #Final. #CSKvKKR @ChennaiIPL
Scorecard 👉 https://t.co/JOEYUSwYSt pic.twitter.com/efrXsT1xFYINNINGS BREAK!
— IndianPremierLeague (@IPL) October 15, 2021
8⃣6⃣ for @faf1307
3⃣7⃣* for Moeen Ali
3⃣2⃣ for @Ruutu1331
3⃣1⃣ for @robbieuthappa
2⃣/2⃣6⃣ for Sunil Narine
1⃣/3⃣2⃣ for @ShivamMavi23
The @KKRiders chase to begin shortly in the #VIVOIPL #Final. #CSKvKKR @ChennaiIPL
Scorecard 👉 https://t.co/JOEYUSwYSt pic.twitter.com/efrXsT1xFY
ಇದಾದ ಬಳಿಕ ಒಂದಾದ ಉತ್ತಪ್ಪ- ಡುಪ್ಲೆಸಿ ಜೋಡಿ ಎದುರಾಳಿ ಬೌಲರ್ಗಳನ್ನ ಚೆಂಡಾಡಿದರು. ಹೀಗಾಗಿ 13.3 ಓವರ್ಗಳಲ್ಲಿ 124ರನ್ಗಳ ಪೇರಿಸಿದರು. ಈ ವೇಳೆ, ಕೇವಲ 15 ಎಸೆತಗಳಲ್ಲಿ 3 ಸಿಕ್ಸರ್ ಸೇರಿದಂತೆ 31ರನ್ಗಳಿಕೆ ಮಾಡಿದಾಗ ನರೈನ್ ಓವರ್ನಲ್ಲಿ ಉತ್ತಪ್ಪ ವಿಕೆಟ್ ಒಪ್ಪಿಸಿದರು.
ಕೊನೆಯವರೆಗೆ ಬ್ಯಾಟ್ ಬೀಸಿದ ಡುಪ್ಲೆಸಿ
ಉತ್ತಪ್ಪ ವಿಕೆಟ್ ಬೀಳುತ್ತಿದ್ದಂತೆ ಮೊಯಿನ್ ಅಲಿ ಜೊತೆ ಸೇರಿ ಆರ್ಭಟಿಸಿದ ಡುಪ್ಲೆಸಿ ತಾವು ಎದುರಿಸಿದ 59 ಎಸೆತಗಳಲ್ಲಿ 3 ಸಿಕ್ಸರ್, 7ಬೌಂಡರಿ ಸೇರಿದಂತೆ 86ರನ್ಗಳಿಕೆ ಮಾಡಿದರು. ಇವರಿಗೆ ಮೊಯಿನ್ ಅಲಿ ಉತ್ತಮ ಸಾಥ್ ನೀಡಿದರು. ತಾವು ಎದುರಿಸಿದ 20 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿ ಸೇರಿದಂತೆ ಅಜೇಯ 37ರನ್ಗಳಿಕೆ ಮಾಡಿದರು. ಆದರೆ, ಡುಪ್ಲೆಸಿ ಕೊನೆ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ 20 ಓವರ್ಗಳಲ್ಲಿ 3ವಿಕೆಟ್ನಷ್ಟಕ್ಕೆ 192ರನ್ಗಳಿಕೆ ಮಾಡಿ ಎದುರಾಳಿಗೆ 193ರನ್ಗಳ ಗುರಿ ನೀಡಿದೆ.
ಕೋಲ್ಕತ್ತಾ ಪರ ನರೈನ್ ತಲಾ 2 ವಿಕೆಟ್ ಪಡೆದುಕೊಂಡರೆ ಮಾವಿ 1 ವಿಕೆಟ್ ಕಿತ್ತರು. ಉಳಿದಂತೆ ಯಾವುದೇ ಬೌಲರ್ ಮಾರಕವಾಗಿ ಪರಿಣಮಿಸಲಿಲ್ಲ.