ಶರ್ಜಾ: 14ನೇ ಆವೃತ್ತಿಯ ಐಪಿಎಲ್‌ನ ಪ್ಲೇ ಆಫ್‌ಗೆ ಮೊದಲ ತಂಡವಾಗಿ ಚೆನ್ನೈ ಸೂಪರ್ ಕಿಂಗ್ಸ್ ಪ್ರವೇಶ ಪಡೆದಿದೆ. ದುಬೈನಲ್ಲಿಂದು ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ 6 ವಿಕೆಟ್‌ಗಳ ಗೆಲುವಿನ ನಂತರ ಆಡಿದ 11 ಪಂದ್ಯಗಳ ಪೈಕಿ 9 ರಲ್ಲಿ ಗೆದ್ದು 18 ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.
ಹೈದರಾಬಾದ್ ನೀಡಿದ್ದ 135 ರನ್ ಗಳ ಗುರಿಯನ್ನು ಚೆನ್ನೈ 18.5 ಓವರ್ ಗಳಲ್ಲಿ ಬೆನ್ನಟ್ಟಿತು. ಆರಂಭಿಕ ಋತುರಾಜ್ ಮತ್ತು ಡುಪ್ಲೆಸಿಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 75 ರನ್ ಗಳಿಸಿದರು. ನಂತರ ಋತುರಾಜ್ (45) ಹೋಲ್ಡರ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರೈನಾ 2 ರನ್‌ಗಳಿಸಿ ಬೇಗ ಪೆವಿಲಿಯನ್ ಸೇರಿಕೊಂಡರು. ಆದರೆ ನಾಯಕ ಧೋನಿ ಹಾಗೂ ರಾಯುಡು ಔಟಾಗದೆ ಕ್ರಮವಾಗಿ 14 ಹಾಗೂ 17 ರನ್‌ಗಳ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಹೈದರಾಬಾದ್ ಪರ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ ರಷೀದ್ ಖಾನ್ 1 ವಿಕೆಟ್ ಕಬಳಿಸಿದರು.
ಕೇನ್ ಪಡೆಯ ಕಳಪೆ ಬ್ಯಾಟಿಂಗ್!
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಬಂದ ಎಸ್‌ಆರ್‌ಹೆಚ್ 4ನೇ ಓವರ್‌ನ 3ನೇ ಎಸೆತದಲ್ಲೇ ಹೇಜಲ್‌ವುಡ್‌ಗೆ ಸ್ಫೋಟಕ ಆಟಗಾರ ಜೇಸನ್ ರಾಯ್ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ವೃದ್ಧಿಮಾನ್ ಸಹಾ ಹೊರತುಪಡಿಸಿದರೆ ಯಾವೊಬ್ಬ ಆಟಗಾರನು ತಂಡ ಸವಾಲಿನ ಮೊತ್ತ ಗಳಿಸಲು ನೆರವಾಗಲಿಲ್ಲ.
ಸಹಾ 46 ಎಸೆತಗಳಿಂದ 1 ಬೌಂಡರಿ 2 ಸಿಕ್ಸರ್ ಸೇರಿ 44 ರನ್‌ಗಳಿಸಿದರು. ನಾಯಕ ವಿಲಿಯಮ್ಸನ್ 11, ಪ್ರಿಯಂ ಗರ್ಗ್ 7, ಅಭಿಷೇಕ್ ಶರ್ಮಾ 18, ಅಬ್ಬುಲ್ ಸಮದ್ 18, ಹೋಲ್ಡರ್ 5, ರಷೀದ್ ಖಾನ್ ಹಾಗೂ ಭವನೇಶ್ವರ್ ಕುಮಾರ್ ಔಟಾಗದೆ ಕ್ರಮವಾಗಿ 17 ಹಾಗೂ 2 ರನ್ ಗಳಿಸಿದರು. ಚೆನ್ನೈ ಪರ ಹೇಜಲ್‌ವುಡ್ 3 ವಿಕೆಟ್ ಪಡೆದರೆ, ಡಿಜೆ ಬ್ರಾವೊ 2 ಹಾಗೂ ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ಹೈದರಾಬಾದ್ ತಂಡ ಆಡಿದ 11 ಪಂದ್ಯಗಳ ಪೈಕಿ ಕೈವಲ ಎರಡಲ್ಲಿ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.