ದೆಹಲಿ : ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ನಾಗರಿಕರಿಗೆ ಭಾರತ ಸರ್ಕಾರ ಕೋವಿಡ್-19 ಲಸಿಕೆ ನೀಡುವ ಪ್ರಕ್ರಿಯೆ ಆರಂಭಸಲಿದೆ.
ಐಪಿಎಲ್‌ನ 14ನೇ ಆವೃತ್ತಿಯಲ್ಲಿ ಆಡುತ್ತಿರುವ ಭಾರತೀಯ ಆಟಗಾರರು ಲಸಿಕೆ ಪಡೆಯುವ ಕುರಿತಂತೆ ಬಿಸಿಸಿಐ ಯಾವುದೇ ನಿರ್ಧಾರ ಹೇರಿಲ್ಲ. ಲಸಿಕೆ ಪಡೆಯಬೇಕೋ ಬೇಡವೋ ಎಂಬ ನಿರ್ಧಾರವನ್ನ ಭಾರತೀಯ ಆ ಆಟಗಾರರಿಗೆ ಬಿಡಲಾಗಿದೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.
ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನೇಷನ್ ನೀಡುತ್ತಿದ್ದು, ವ್ಯಾಕ್ಸಿನೇಷನ್ ಪಡೆಯುವುದು ಆಟಗಾರರ ನಿರ್ಧಾರಕ್ಕೆ ಬಿಡಲಾಗಿದೆೆ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.
ಈ ಬಗ್ಗೆ ಈಗಾಗಲೇ ಆಟಗಾರರಿಗೆ ತಿಳಿಸಲಾಗಿದೆ. ಭಾರತೀಯ ಆಟಗಾರರು ಶನಿವಾರದಿಂದ ಲಸಿಕೆ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್‌ನ ಆಟಗಾರರು ಇರುವುದರಿಂದ ವಿದೇಶಿ ಆಟಗಾರರಿಗೂ ವಿನಾಯಿತಿ ನೀಡಬಹುದೇ ಎಂದು ಕೇಳಿದಾಗ, "ಭಾರತೀಯ ಆಟಗಾರರು ಮಾತ್ರ ಇಲ್ಲಿ ಲಸಿಕೆ ಪಡೆಯಬಹುದು" ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಇದನ್ನೂ ಓದಿ : ತಂಡ ತೊರೆದು ತವರಿಗೆ ಮರಳಲಿರುವ ವಾರ್ನರ್, ಸ್ಟೀವ್ ಸ್ಮಿತ್?