ಮುಂಬೈ: ಇಂದು ವಾಂಖೆಡೆ ಮೈದಾನದಲ್ಲಿ ಬ್ಯಾಟ್ಸ್ಮನಗಳನ್ನು ಬೌಲರ್ಗಳು ಕಟ್ಟಿ ಹಾಕಿದ್ದರು. ರನ್ಗಳ ನಾಡಿನಲ್ಲಿ ಬೌಲರ್ಗಳ ಹಾವಳಿ ಹೆಚ್ಚಾಗಿತ್ತು. ಕೊನೆಯ ಕ್ಷಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ರೋಚಕ ಜಯ ಪಡೆದುಕೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್...
ಟಾಸ್ ಗೆದ್ದ ರಾಜಸ್ಥಾನ್ ಫೀಲ್ಡಿಂಗ್ ಆಯ್ದುಕೊಂಡು ರಾಯಲ್ಸ್ ತಂಡದ ನಾಯಕ ಸಾಮ್ಸನ್ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಶ್ರೇಯಸ್ ಗೋಪಾಲ್ ಬದಲು ತಂಡ ಸೇರಿಕೊಂಡಿದ್ದ ಎಡಗೈ ವೇಗಿ ಜಯದೇವ್ ಉನಾದ್ಕಟ್ ತಮ್ಮ ಮೊದಲ ಮೂರು ಓವರ್ಗಳಲ್ಲಿ ಕ್ರಮವಾಗಿ ಪೃಥ್ವಿ ಶಾ(2), ಶಿಖರ್ ಧವನ್(9) ಮತ್ತು ಅಜಿಂಕ್ಯ ರಹಾನೆ(8) ವಿಕೆಟ್ ಪಡೆದು ಡೆಲ್ಲಿ ಆಘಾತ ನೀಡಿದರು.
ಇವರ ನಂತರ ದಾಳಿಗಿಳಿದ ಮುಸ್ತಫಿಜುರ್ ಖಾತೆ ತೆರೆಯುವ ಮುನ್ನವೇ ಮಾರ್ಕಸ್ ಸ್ಟೋಯ್ನಿಸ್ ವಿಕೆಟ್ ಪಡೆದರು. ತಂಡದ ಮೊತ್ತ 37ಕ್ಕೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯಲ್ಲಿದ್ದ ಡೆಲ್ಲಿಗೆ ನಾಯಕ ಪಂತ್ ಮತ್ತು ಇಂದೇ ಪದಾರ್ಪಣೆ ಮಾಡಿದ ಲಲಿತ್ ಯಾದವ್ 5ನೇ ವಿಕೆಟ್ಗೆ 51 ರನ್ ಸೇರಿಸಿ ಚೇತರಿಕೆ ನೀಡಿದರು.
ಅರ್ಧಶತಕ ಪೂರೈಸಿ ಉತ್ತಮವಾಗಿ ಆಡುತ್ತಿದ್ದ ಪಂತ್ ಇಲ್ಲದ ರನ್ ಕದಿಯಲು ಹೋಗಿ ಪರಾಗ್ ಅವರ ಡೈರೆಕ್ಟ್ ಹಿಟ್ಗೆ ಬಲಿಯಾದರು. ಅವರು 32 ಎಸೆತಗಳಲ್ಲಿ 9 ಬೌಂಡರಿ ಸಹಿತ 51 ರನ್ಗಳಿಸಿದ್ದರು. ಇವರ ವಿಕೆಟ್ನೊಂದಿಗೆ ಡೆಲ್ಲಿ ತಂಡದ ಸ್ಪರ್ಧಾತ್ಮಕ ಮೊತ್ತದ ಆಸೆಯೂ ಕಮರಿತು.
ಕೊನೆಗೆ ಲಲಿತ್ ಯಾದವ್ 20 , ಟಾಮ್ ಕರ್ರನ್ 21 ಮತ್ತು ಕ್ರಿಸ್ ವೋಕ್ಸ್ ಅಜೇಯ 15 , ಅಶ್ವಿನ್ 7 ಮತ್ತ ರಬಾಡ 9 ರನ್ಗಳಿಸಿದರು.
ಜಯದೇವ್ ಉನಾದ್ಕಟ್ ಮತ್ತು ಮುಸ್ತಫಿಜುರ್ ರೆಹಮಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್ಗಳಿಸಿದ್ದು, ಡೆಲ್ಲಿಗೆ 148ರನ್ಗಳ ಸಾಧಾರಣ ಗುರಿ ನೀಡಿತು.
ರಾಜಸ್ತಾನ ಪರ ಜಯದೇವ್ ಉನಾದ್ಕಟ್ 3 ವಿಕೆಟ್ಗಳನ್ನು ಪಡೆದ್ರೆ, ಮುಸ್ತಫಿಜುರ್ ರೆಹಮಾನ್ 2 ವಿಕೆಟ್ಗಳನ್ನು ಪಡೆದು ಮಿಂಚಿದರು. ಇನ್ನು ಕ್ರಿಸ್ ಮೋರಿಸ್ 1 ವಿಕೆಟ್ ಪಡೆದರು.
ರಾಜಸ್ತಾನ ರಾಯಲ್ಸ್ ಇನ್ನಿಂಗ್ಸ್...
ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ಗೆ ಡೆಲ್ಲಿ ಬೌಲರ್ಗಳು ತೀವ್ರ ಆಘಾತ ನೀಡಿದ್ದರು. ಕೇವಲ 42 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡು ರಾಜಸ್ಥಾನ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ತಂಡಕ್ಕೆ ಆಸೆರಯಾಗಿದ್ದು ಮಾತ್ರ ಡೆವಿಡ್ ಮಿಲ್ಲರ್.
ಹೌದು, ಡೆಲ್ಲಿ ನೀಡಿದ ಗುರಿಯನ್ನು ಬೆನ್ನತ್ತಿದ್ದ ರಾಜಸ್ಥಾನಕ್ಕೆ ಡೆಲ್ಲಿ ತಂಡ ಆರಂಭಿಕ ಆಘಾತ ನೀಡಿದರು. ಮನನ್ ವೋಹ್ರಾ 9 ರನ್, ಬಟ್ಲರ್ 2 ರನ್, ನಾಯಕ ಸಂಜು ಸ್ಯಾಮ್ಸನ್ 4 ರನ್, ಶಿವಂ ದುಬೆ 2 ರನ್ ಮತ್ತು ರಿಯಾನ್ ಪರಾಗ್ 2 ರನ್ ಕಲೆ ಹಾಕಿ ಪೆವಿಲಿಯನ್ ಹಾದಿ ಹಿಡಿದರು. ಕ್ರಿಸ್ ವೋಕ್ಸ್, ರಬಾಡ ಮತ್ತು ಅವೇಶ್ ಖಾನ್ ದಾಳಿಗೆ ರಾಜಸ್ಥಾನ ತತ್ತರಿಸಿತ್ತು. ಕೇವಲ 42 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನ ತಂಡಕ್ಕೆ ಸೋಲಿನ ಭೀತಿ ಎದುರಾಯ್ತು.
ಐದನೇ ಕ್ರಮಾಂಕದಲ್ಲಿ ಬಂದ ಡೆವಿಡ್ ಮಿಲ್ಲರ್ ಜವಾಬ್ದಾರಿಯುತ ಆಟವಾಡಿದರು. ನಿಧಾನಗತಿಯಲ್ಲೇ ಡೆಲ್ಲಿ ಬೌಲರ್ಗಳ ಬೇವರಿಳಿಸಿದರು. ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 62 ರನ್ಗಳನ್ನು ಕಲೆ ಹಾಕುವ ಮೂಲಕ ಗೆಲುವಿನ ಆಸೆಯನ್ನು ಜೀವಂತಗೊಳಿಸಿದರು. ಡೆವಿಡ್ ಮಿಲ್ಲರ್ಗೆ ರಾಹುಲ್ ತೆವಾಟಿಯಾ ಸಾಥ್ ನೀಡಿದ್ದರು. ರಾಹುಲ್ ತೆವಾಟಿಯ 19 ರನ್ಗಳನ್ನು ಗಳಿಸಿ ರಬಾಡ ಬೌಲಿಂಗ್ನಲ್ಲಿ ವಿಕೆಟ್ವೊಪ್ಪಿಸಿದರು.
-
The @rajasthanroyals camp is elated as they pocket their first win in #IPL2021 after yet another thrilling finish.https://t.co/8aM0TZxgVq #RRvDC #VIVOIPL pic.twitter.com/J1XA8ggmZs
— IndianPremierLeague (@IPL) April 15, 2021 " class="align-text-top noRightClick twitterSection" data="
">The @rajasthanroyals camp is elated as they pocket their first win in #IPL2021 after yet another thrilling finish.https://t.co/8aM0TZxgVq #RRvDC #VIVOIPL pic.twitter.com/J1XA8ggmZs
— IndianPremierLeague (@IPL) April 15, 2021The @rajasthanroyals camp is elated as they pocket their first win in #IPL2021 after yet another thrilling finish.https://t.co/8aM0TZxgVq #RRvDC #VIVOIPL pic.twitter.com/J1XA8ggmZs
— IndianPremierLeague (@IPL) April 15, 2021
ರಾಹುಲ್ ತೆವಾಟಿಯಾ ಔಟಾದ ಬಳಿಕ ಡೆವಿಡ್ ಮಿಲ್ಲರ್ ಹೆಚ್ಚು ಹೊತ್ತು ಕ್ರಿಸ್ನಲ್ಲಿ ಉಳಿಯಲಿಲ್ಲ. 62 ರನ್ಗಳನ್ನು ಗಳಿಸಿದ್ದ ಡೆವಿಡ್ ಮಿಲ್ಲರ್ ಅವೀಶ್ ಖಾನ್ಗೆ ಬಲಿಯಾದರು. ಗೆಲುವಿನ ಆಸೆ ಕಂಡಿದ್ದ ರಾಜಸ್ಥಾನ ತಂಡಕ್ಕೆ ಮತ್ತೆ ನಿರಾಸೆ ಮೂಡಿತು. ಆಗ ತಂಡಕ್ಕೆ ಆಸರೆಯಾಗಿದ್ದು ಕ್ರಿಸ್ ಮೋರಿಸ್.
ಡೆವಿಡ್ ಮಿಲ್ಲರ್ ಔಟಾದ ಬಳಿಕ ಕ್ರಿಸ್ ಮೋರಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 18 ಎಸೆತಗಳಲ್ಲಿ 4 ಸಿಕ್ಸರ್ಗಳ ನೆರವಿನಿಂದ 38 ರನ್ಗಳನ್ನು ಕಲೆ ಹಾಕುವ ಮೂಲಕ ತಂಡವನ್ನು ಗೆಲುವನಿ ದಡ ಸೇರಿಸಿದರು. ಜಯದೇವ್ ಉನಾದ್ಕಟ್ 11 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದರು.
ಒಟ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ ತಂಡ 19.4 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 150 ರನ್ಗಳನ್ನು ಕಲೆ ಹಾಕುವ ಮೂಲಕ 3 ವಿಕೆಟ್ಗಳ ರೋಚಕ ಜಯ ಪಡೆದುಕೊಂಡಿತು.
ಶುಕ್ರವಾರ ಸಂಜೆ 7.30ಕ್ಕೆ ಪಂಬಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಕಾದಾಟ ನಡೆಲಿದೆ.