ಭಾರತದಲ್ಲಿ ಕ್ರಿಕೆಟ್ ಕೋಟ್ಯಂತರ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ ಕ್ರೀಡೆ. ಜನರಿಗೆ ಅಚ್ಚುಮೆಚ್ಚಾಗಲು ಹಲವು ಕಾರಣಗಳಿರಬಹುದು. ಆದರೆ ಅದರಲ್ಲಿ ಪ್ರಮುಖವಾದದ್ದು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್). 2008ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಚುಟುಕು ಕ್ರಿಕೆಟ್ ಇಂದು ದೊಡ್ಡ ಹೆಜ್ಜೆ ಗುರುತು ಮೂಡಿಸುತ್ತಿದೆ. ಇಂದಿನ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದ ಮೂಲಕ 1000ನೇ ಪಂದ್ಯದ ಮೈಲಿಗಲ್ಲನ್ನು ಲೀಗ್ ತಲುಪಲಿದೆ.
ಲಲಿತ್ ಮೋದಿ ಕನಸಿನ ಕೂಸು ಎಂದೇ ಐಪಿಎಲ್ ಅನ್ನು ಕರೆಯಬಹುದು. ಮೋದಿ ಕಂಡ ಕನಸು 16 ವರ್ಷಗಳಲ್ಲಿ ಬೃಹತ್ ಲೀಗ್ ಆಗಿ ನಿಂತಿದೆ. ಜಗತ್ತಿನಲ್ಲಿ ಹಲವಾರು ಕ್ರೀಡೆಗಳ ಲೀಗ್ ಪಂದ್ಯಗಳು ನಡೆಯುತ್ತವೆ. ಆದರೆ ಐಪಿಎಲ್ನ ಖ್ಯಾತಿ ಯಾವ ಲೀಗ್ಗೂ ಬಂದಿಲ್ಲ. ಐಪಿಎಲ್ ಕಾರಣದಿಂದ ಕ್ರಿಕೆಟ್ ಮಂಡಳಿಗಳಲ್ಲಿ ಬಿಸಿಸಿಐ ಅತ್ಯಂತ ಶ್ರೀಮಂತ ಸಂಸ್ಥೆಯಾಗಿ ಹೊರಹೊಮ್ಮಿದೆ.
-
🗣️🗣️ 𝘽𝙞𝙜 𝙘𝙤𝙣𝙜𝙧𝙖𝙩𝙪𝙡𝙖𝙩𝙞𝙤𝙣𝙨 𝙩𝙤 𝙩𝙝𝙚 𝘽𝘾𝘾𝙄 👏👏
— IndianPremierLeague (@IPL) April 30, 2023 " class="align-text-top noRightClick twitterSection" data="
Iconic words to celebrate an iconic moment!
Hear what the legendary @sachin_rt has to say on the occasion of 1️⃣0️⃣0️⃣0️⃣th IPL match 👌🏻👌🏻
#IPL1000 | #TATAIPL | #MIvRR pic.twitter.com/wi3mpRa2mJ
">🗣️🗣️ 𝘽𝙞𝙜 𝙘𝙤𝙣𝙜𝙧𝙖𝙩𝙪𝙡𝙖𝙩𝙞𝙤𝙣𝙨 𝙩𝙤 𝙩𝙝𝙚 𝘽𝘾𝘾𝙄 👏👏
— IndianPremierLeague (@IPL) April 30, 2023
Iconic words to celebrate an iconic moment!
Hear what the legendary @sachin_rt has to say on the occasion of 1️⃣0️⃣0️⃣0️⃣th IPL match 👌🏻👌🏻
#IPL1000 | #TATAIPL | #MIvRR pic.twitter.com/wi3mpRa2mJ🗣️🗣️ 𝘽𝙞𝙜 𝙘𝙤𝙣𝙜𝙧𝙖𝙩𝙪𝙡𝙖𝙩𝙞𝙤𝙣𝙨 𝙩𝙤 𝙩𝙝𝙚 𝘽𝘾𝘾𝙄 👏👏
— IndianPremierLeague (@IPL) April 30, 2023
Iconic words to celebrate an iconic moment!
Hear what the legendary @sachin_rt has to say on the occasion of 1️⃣0️⃣0️⃣0️⃣th IPL match 👌🏻👌🏻
#IPL1000 | #TATAIPL | #MIvRR pic.twitter.com/wi3mpRa2mJ
ಭಾರತದಲ್ಲಿ ಐಪಿಎಲ್ ನಡೆಯುವ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳೂ ನಡೆಯುವುದಿಲ್ಲ. ವಿದೇಶಿ ಕ್ರಿಕೆಟ್ನ ಅಂತಾರಾಷ್ಟ್ರೀಯ ತಂಡದ ಬಹುತೇಕ ಆಟಗಾರರು ಈ ಲೀಗ್ನಲ್ಲಿ ಪಾಲ್ಗೊಳ್ಳುತ್ತಾರೆ. ಐಪಿಎಲ್ ಭಾರತೀಯ ಆಟಗಾರರಿಗೆ ಅಂತಾರಾಷ್ಟ್ರೀಯ ತಂಡದ ಆಯ್ಕೆಗೆ ದಾರಿ ಮಾಡಿಕೊಟ್ಟಿರುವುದು ಮಾತ್ರವಲ್ಲದೇ ವಿದೇಶಿ ತಂಡಗಳಲ್ಲೂ ಅವಕಾಶ ಕಲ್ಪಿಸಲು ವೇದಿಕೆಯಾಗಿದೆ.
ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ತಂಡದ ಕದ ತಟ್ಟಲು ಐಪಿಎಲ್ ಒಂದು ಉತ್ತಮ ತಾಣವಾಗಿದೆ. ಭಾರತದ ಸ್ಟಾರ್ ಬೌಲರ್ಗಳಾದ ಯಜುವೇಂದ್ರ ಚಹಾಲ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ತಂಡಕ್ಕೆ ಇತ್ತೀಚಿನ ವರ್ಷಗಳಲ್ಲಿ ಪ್ರವೇಶ ಪಡೆದವರು. ಇನ್ನು ಬ್ಯಾಟಿಂಗ್ನಲ್ಲಿ ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ರನ್ನು ಕಾಣಬಹುದಾಗಿದೆ. ಐಪಿಎಲ್ ಯಶಸ್ವಿ ಮುಂದಾಳತ್ವದಿಂದ ಹಾರ್ದಿಕ್ ಪಾಂಡ್ಯಗೆ ಅಂತಾರಾಷ್ಟ್ರೀಯ ತಂಡದಲ್ಲೂ ಕ್ಯಾಪ್ಟನ್ ಪಟ್ಟ ದೊರೆತಿದೆ.
-
1️⃣0️⃣0️⃣0️⃣ games, ♾️ memories! 😍
— JioCinema (@JioCinema) April 29, 2023 " class="align-text-top noRightClick twitterSection" data="
Watch #MI take 🔛 #RR in this historic game 👉🏻 April 30 - 6:30 pm onwards, streaming FREE on #JioCinema across all telecom operators! #IPLonJioCinema #TATAIPL #IPL2023 #MIvRR pic.twitter.com/TrwzZulT5D
">1️⃣0️⃣0️⃣0️⃣ games, ♾️ memories! 😍
— JioCinema (@JioCinema) April 29, 2023
Watch #MI take 🔛 #RR in this historic game 👉🏻 April 30 - 6:30 pm onwards, streaming FREE on #JioCinema across all telecom operators! #IPLonJioCinema #TATAIPL #IPL2023 #MIvRR pic.twitter.com/TrwzZulT5D1️⃣0️⃣0️⃣0️⃣ games, ♾️ memories! 😍
— JioCinema (@JioCinema) April 29, 2023
Watch #MI take 🔛 #RR in this historic game 👉🏻 April 30 - 6:30 pm onwards, streaming FREE on #JioCinema across all telecom operators! #IPLonJioCinema #TATAIPL #IPL2023 #MIvRR pic.twitter.com/TrwzZulT5D
2008ರಲ್ಲಿ 8 ತಂಡಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿತ್ತು. ಈ ವರ್ಷಕ್ಕೆ ಲೀಗ್ಗೆ 16 ವರ್ಷವಾಗಿದೆ. ಕಳೆದ ವರ್ಷದಿಂದ 10 ತಂಡಗಳು ಆಡುತ್ತಿವೆ. ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್, ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿವೆ.
ಐದು ಬಾರಿ ಕಪ್ ಗೆದ್ದ ಕಾರಣ ಮುಂಬೈ ಇಂಡಿಯನ್ಸ್ ಅನ್ನು ಈ ಲೀಗ್ನ ಯಶಸ್ವಿ ತಂಡ ಎಂದು ಕರೆಯಲಾಗುತ್ತದೆ. ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೋಲ್ಕತ್ತಾ ಎರಡು ಬಾರಿ, ಸನ್ ರೈಸರ್ಸ್ ಮತ್ತು ಡೆಕ್ಕನ್ ಚಾರ್ಜಸ್ ತಲಾ ಒಂದು ಬಾರಿ ಕಪ್ ಗೆದ್ದಿವೆ. 15 ಆವೃತ್ತಿಯಿಂದ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಮತ್ತು ಪಂಜಾಬ್ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.
ಇದನ್ನೂ ಓದಿ: ಚೆನ್ನೈಗೆ ಕಾನ್ವೆ ಬಲ; ಧೋನಿ ಸಿಕ್ಸರ್‌ಗೆ ಅಭಿಮಾನಿಗಳು ಫುಲ್ ಖುಷ್! ಪಂಜಾಬ್ ಗೆಲುವಿಗೆ ಬೇಕು 201 ರನ್