ಮುಂಬೈ: ನಿನ್ನೆ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ನಡೆ ಎಲ್ಲರಲ್ಲೂ ಕೊಂಚ ಆಶ್ಚರ್ಯ ಮೂಡಿಸಿತ್ತು.
ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರಿಗೆ ಟಾಸ್ ಗೆದ್ದ ಪರಿಜ್ಞಾನವೇ ಇರಲಿಲ್ಲ. ತಾವು ಈ ಪಂದ್ಯದಲ್ಲಿ ಟಾಸ್ ಗೆದ್ದರೂ ಸೋತೆನೆಂದು ತಿಳಿದ ಕೊಹ್ಲಿ ಹಿಂದೆ ಸರಿದು ನಿಂತರು. ಈ ಸಮಯದಲ್ಲಿ ಅತ್ತ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಏನು ಮಾಡಬೇಕೆಂದು ತೋಚದೇ ಗೊಂದಲಕ್ಕೊಳಗಾದರು.
-
"I'm not used to winning tosses" 😅 @imVkohli #RCB have the toss and they will bowl first against #RR #VIVOIPL pic.twitter.com/a0bX6JNGak
— IndianPremierLeague (@IPL) April 22, 2021 " class="align-text-top noRightClick twitterSection" data="
">"I'm not used to winning tosses" 😅 @imVkohli #RCB have the toss and they will bowl first against #RR #VIVOIPL pic.twitter.com/a0bX6JNGak
— IndianPremierLeague (@IPL) April 22, 2021"I'm not used to winning tosses" 😅 @imVkohli #RCB have the toss and they will bowl first against #RR #VIVOIPL pic.twitter.com/a0bX6JNGak
— IndianPremierLeague (@IPL) April 22, 2021
ಇನ್ನೊಂದೆಡೆ ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್, ನೀವೇನು ಆಯ್ಕೆ ಮಾಡುತ್ತೀರಾ ಎಂದು ಸಂಜು ಅವರನ್ನು ಪ್ರಶ್ನಿಸಿದರು, ಈ ಸಂದರ್ಭದಲ್ಲಿ ತಕ್ಷಣ ಎಚ್ಚೆತ್ತುಕೊಂಡ ವಿರಾಟ್, 'ಓ ನಾನು ಟಾಸ್ ಗೆದ್ದಿದ್ದೇನೆ. ಕ್ಷಮೆಯಿರಲಿ, ಕ್ಷಮೆಯಿರಲಿ, ನಾನು ಟಾಸ್ ಗೆದ್ದಿದ್ದು ಗಮನಕ್ಕೆ ಬರಲಿಲ್ಲ' ಎಂದು ನಗುಮುಖದಿಂದಲೇ ಹೇಳಿದರು. ಈ ಘಟನೆ ಕೆಲಕಾಲ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತು. ಟಾಸ್ ಗೆದ್ದ ಕೊಹ್ಲಿ ಅಂತಿಮವಾಗಿ ಬೌಲಿಂಗ್ ಆಯ್ದುಕೊಂಡರು. ಈ ಪಂದ್ಯವನ್ನ 9 ವಿಕೆಟ್ಗಳ ಅಂತರದಿಂದ ಗೆದ್ದು ಆರ್ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಓದಿ : 'ಐಪಿಎಲ್ನ ಮೊದಲ ಪಂದ್ಯ ಮಿಸ್ ಆಗಿದ್ದಕ್ಕೆ ಬೇಸರವಿದೆ': ಪಡಿಕ್ಕಲ್