ಶಾರ್ಜಾ: ತಂಡವು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ತಕ್ಕಂತೆ ಆಡುತ್ತಿದ್ದೇನೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ವೆಂಕಟೇಶ್ ಅಯ್ಯರ್ ಹೇಳಿದ್ದಾರೆ. ಡೆಲ್ಲಿ ವಿರುದ್ಧ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ(55) ಬಾರಿಸಿ ಕೆಕೆಆರ್ ಫೈನಲ್ ತಲುಪುವಲ್ಲಿ ನೆರವಾದ ಅಯ್ಯರ್ ಪಂದ್ಯದ ಬಳಿಕ ಸಂತಸ ಹಂಚಿಕೊಂಡರು.
ತಂಡದ ನಿರೀಕ್ಷೆಯಂತೆ ನಾನು ಆಡುತ್ತಿದ್ದು, ಗೆಲುವಿನೊಂದಿಗೆ ಪಂದ್ಯ ಕೊನೆಗೊಳಿಸಿರುವುದು ತುಂಬಾ ಸಂತೋಷವಾಗಿದೆ. ಮೈದಾನದಲ್ಲಿ ನನಗಿಷ್ಟದಂತೆ ಬ್ಯಾಟಿಂಗ್ ಮಾಡಲು ಬಯಸುತ್ತೇನೆ, ಅದರಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವುದಿಲ್ಲ. ನನಗೆ ಈ ಅವಕಾಶ ನೀಡಿದ ಮ್ಯಾನೇಜ್ಮೆಂಟ್ಗೆ ಕೃತಜ್ಞನಾಗಿದ್ದೇನೆ. ಶಾರ್ಜಾ ಕ್ರಿಕೆಟ್ಗೆ ಅದ್ಭುತವಾದ ಸ್ಥಳ ಎಂದು ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದರು.
-
CELEBRATIONS. EMOTIONS. CRICKET. 💜💛#KKR #KKRvDC #AmiKKR #KorboLorboJeetbo #আমিKKR #IPL2021 pic.twitter.com/gEZcWgde4D
— KolkataKnightRiders (@KKRiders) October 13, 2021 " class="align-text-top noRightClick twitterSection" data="
">CELEBRATIONS. EMOTIONS. CRICKET. 💜💛#KKR #KKRvDC #AmiKKR #KorboLorboJeetbo #আমিKKR #IPL2021 pic.twitter.com/gEZcWgde4D
— KolkataKnightRiders (@KKRiders) October 13, 2021CELEBRATIONS. EMOTIONS. CRICKET. 💜💛#KKR #KKRvDC #AmiKKR #KorboLorboJeetbo #আমিKKR #IPL2021 pic.twitter.com/gEZcWgde4D
— KolkataKnightRiders (@KKRiders) October 13, 2021
ಮಾತು ಮುಂದುವರಿಸಿದ ಅವರು, ಕಳೆದ ಎರಡು ಪಂದ್ಯಗಳಲ್ಲಿ ಕೊನೆಯವರೆಗೂ ಕ್ರೀಸ್ನಲ್ಲಿರಲು ಬಯಸಿದ್ದರಿಂದ ಬ್ಯಾಟಿಂಗ್ ಆಕ್ರಮಣಶೀಲತೆಯ ನಿರ್ಬಂಧಕ್ಕೆ ಪ್ರಯತ್ನಿಸಿದ್ದೆ. ಆದರೆ ಅದು ನನಗೆ ಹೊಂದಾಣಿಕೆ ಆಗುವುದಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಅಲ್ಲದೆ, ಆ ಯತ್ನದಲ್ಲಿ ನಾನು ವಿಫಲವಾಗಿರುವುದು ಗೊತ್ತಿದೆ ಎಂದರು.
ಐಪಿಎಲ್ ಬಳಿಕ ಪುರುಷರ ಟಿ-20 ವಿಶ್ವಕಪ್‌ಗಾಗಿ ಭಾರತೀಯ ತಂಡದ ಬಯೋಬಬಲ್ನಲ್ಲಿ ಇರುವಂತೆ ಬಿಸಿಸಿಐ ಕರೆನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನಾನು ಭಾರತೀಯ ತಂಡದ ಬಗ್ಗೆ ಯೋಚಿಸುತ್ತಿಲ್ಲ, ಇನ್ನೂ ಒಂದು ಪಂದ್ಯವಿದೆ. ಅದರ ಮೇಲೆ ಸಂಪೂರ್ಣ ಗಮನಹರಿಸಲು ಬಯಸುತ್ತೇನೆ" ಎಂದು ಹೇಳಿದರು.
ಡೆಲ್ಲಿ ವಿರುದ್ಧ 3 ವಿಕೆಟ್ಗಳಿಂದ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಐಪಿಎಲ್ ಫೈನಲ್‌ಗೆ ತಲುಪಿದೆ. ಶುಕ್ರವಾರ ದುಬೈನಲ್ಲಿ ನಡೆಯಲಿರುವ ಫೈನಲ್ನಲ್ಲಿ ಟ್ರೋಫಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ.
ಇದನ್ನೂ ಓದಿ: 'ಮಾತನಾಡಲು ನನ್ನ ಬಳಿ ಪದಗಳೇ ಇಲ್ಲ': KKR ವಿರುದ್ಧ ಸೋತ ಬಳಿಕ ಭಾವುಕರಾದ ಪಂತ್