ಮುಂಬೈ: ಬಲಿಷ್ಠ ತಂಡ ತಂಡದ ನಾಯಕನಾದ ಕೆ.ಎಲ್ ರಾಹುಲ್ರ ನಾಯಕನ ಆಟ, ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾರ ಜವಾಬ್ದಾರಿ ಪ್ರದರ್ಶನದಿಂದ ಲಖನೌ ಸೂಪರ್ ಜೈಂಟ್ಸ್ ತಂಡ 20 ಓವರ್ಗಳಲ್ಲಿ 169 ರನ್ಗಳ ಸವಾಲಿನ ಗುರಿಯನ್ನು ಹೈದರಾಬಾದ್ ಸನ್ರೈಸರ್ಸ ತಂಡಕ್ಕೆ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ರಾಹುಲ್ ನೇತೃತ್ವದ ತಂಡ ಆರಂಭಿಕ ಆಘಾತ ಅನುಭವಿಸಿತು. 37 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಾಗಿತ್ತು. ಈ ವೇಳೆ ನಾಯಕ ಕೆ.ಎಲ್. ರಾಹುಲ್ಗೆ ಜೊತೆಯಾದ ದೀಪಕ್ ಹೂಡಾ 87 ರನ್ಗಳ ಜೊತೆಯಾಟವಾಡುವ ಮೂಲಕ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
-
Innings Break!
— IndianPremierLeague (@IPL) April 4, 2022 " class="align-text-top noRightClick twitterSection" data="
87-run partnership between @klrahul11 & @HoodaOnFire propel #LSG to a total of 169/7 on the board.
Scorecard - https://t.co/omw6zCMpMR #SRHvLSG #TATAIPL pic.twitter.com/JHj7Viw2Z6
">Innings Break!
— IndianPremierLeague (@IPL) April 4, 2022
87-run partnership between @klrahul11 & @HoodaOnFire propel #LSG to a total of 169/7 on the board.
Scorecard - https://t.co/omw6zCMpMR #SRHvLSG #TATAIPL pic.twitter.com/JHj7Viw2Z6Innings Break!
— IndianPremierLeague (@IPL) April 4, 2022
87-run partnership between @klrahul11 & @HoodaOnFire propel #LSG to a total of 169/7 on the board.
Scorecard - https://t.co/omw6zCMpMR #SRHvLSG #TATAIPL pic.twitter.com/JHj7Viw2Z6
33 ಎಸೆತಗಳನ್ನು ಎದುರಿಸಿದ ದೀಪಕ್ ಹೂಡಾ 51 ರನ್ ಮಾಡಿ ಔಟಾದರು. ಅದರಲ್ಲಿ 3 ಬೌಂಡರಿ, 3 ಸಿಕ್ಸರ್ ಇದ್ದವು. ಇನ್ನೊಂದೆಡೆ ಕ್ರೀಸ್ಗೆ ಅಂಟಿಕೊಂಡೇ ಬ್ಯಾಟ್ ಬೀಸಿದ ನಾಯಕ ಕೆ.ಎಲ್ ರಾಹುಲ್ 50 ಎಸೆತಗಳಲ್ಲಿ 68 ರನ್ ಸಿಡಿಸಿದರು. ಇದರಲ್ಲಿ 6 ಬೌಂಡರಿ, 1 ಸಿಕ್ಸರ್ ಸೇರಿದ್ದವು. ಹೊಸ ಪ್ರತಿಭೆ ಆಯುಷ್ ಬದೋನಿ 19 ರನ್ ಮಾಡಿ ರನ್ಔಟ್ ಆದರು. ಮೊದಲ ಪಂದ್ಯವಾಡುತ್ತಿರುವ ಜಾಸನ್ ಹೋಲ್ಡರ್ 3 ಎಸೆತಗಳೆನ್ನದುರಿಸಿದರೂ 1 ಸಿಕ್ಸರ್ ಬಾರಿಸಿದರು.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡದ ಪರ ವಾಷಿಂಗ್ಟನ್ ಸುಂದದರ್, ರೊಮಾರಿಯೋ ಶೆಫರ್ಡ್, ಟಿ. ನಟರಾಜನ್ ತಲಾ 2 ವಿಕೆಟ್ ಪಡೆದರು.
ಓದಿ: IPL ಪಾಯಿಂಟ್ ಪಟ್ಟಿ: ರಾಜಸ್ತಾನ ರಾಯಲ್ಸ್ಗೆ ಅಗ್ರ, ಸನ್ರೈಸರ್ಸ್ಗೆ ಕೊನೆ ಸ್ಥಾನ