ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸುಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಲಕ್ನೋ ಎದುರು ಆರ್ಸಿಬಿ 18 ರನ್ಗಳ ಗೆಲುವು ಸಾಧಿಸಿದ ನಂತರ ಹಸ್ತಲಾಘವದ ಮುಖಾಮುಖಿಯಾದ ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದರು. ಇದಕ್ಕಾಗಿ ಇಬ್ಬರಿಗೂ ದಂಡ ವಿಧಿಸಲಾಗಿದೆ.
ಇದು ಎರಡು ದಿನದಿಂದ ಚರ್ಚೆಯಲ್ಲಿರುವ ವಿಷಯವಾಗಿದೆ. ಅನುಭವಿಗಳಿಬ್ಬರು ಮೈದಾನದಲ್ಲಿ ಈ ರೀತಿ ಮಾತನಾಡಿಕೊಳ್ಳುವುದು ಎಷ್ಟು ಸರಿ ಎಂದು ಕೆಲವರು ಹೇಳುತ್ತಾರೆ. ಸ್ಟಾರ್ ಸ್ಪೋರ್ಟ್ನಲ್ಲಿ ರವಿಶಾಸ್ತ್ರಿ ಬಳಿ ಅಭಿಮಾನಿ ಒಬ್ಬ ವಿರಾಟ್ ಅವರು ಮಾಡುವ ಸೆಲಬ್ರೇಷನ್ ಅನ್ನು ನೀವು ಕೋಚ್ ಆಗಿದ್ದಾಗ ತಡೆಯುತ್ತಿದ್ದಿರಾ ಎಂದು ಕೇಳಿದ್ದ. ಇದಕ್ಕೆ ಉತ್ತರಿಸಿದ ಶಾಸ್ತ್ರಿ "ಸಂತೋಷವನ್ನು ವ್ಯಕ್ತಪಡಿಸಲು ಎಲ್ಲರಿಗೂ ಅವಕಾಶವಿದೆ" ಎಂದಿದ್ದಾರೆ.
-
ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ..
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) May 2, 2023 " class="align-text-top noRightClick twitterSection" data="
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..#ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.
ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋#Dial112 incase of any emergency..!#RCBVSLSG #ViratKohli @RCBTweets pic.twitter.com/efvrz7PXFo
">ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ..
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) May 2, 2023
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..#ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.
ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋#Dial112 incase of any emergency..!#RCBVSLSG #ViratKohli @RCBTweets pic.twitter.com/efvrz7PXFoಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ..
— Hubballi-Dharwad City Police. ಹು-ಧಾ ನಗರ ಪೊಲೀಸ್ (@compolhdc) May 2, 2023
ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ..#ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ.
ಗೊತ್ತಲ್ಲಾ ನಮ್ಮ ರೀಚ್ ಟೈಮ್..🙋#Dial112 incase of any emergency..!#RCBVSLSG #ViratKohli @RCBTweets pic.twitter.com/efvrz7PXFo
ಈ ಘಟನೆಯನ್ನು ಹುಬ್ಬಳ್ಳಿ ಧಾರವಾಡದ ಅವಳಿ ನಗರದ ಪೋಲೀಸರು ಜಾಗೃತಿಗೆ ಬಳಸಿಕೊಂಡಿದ್ದಾರೆ. ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (Emergency Response Support System-ERSS112)ಯ ಬಗ್ಗೆ ಜನಕ್ಕೆ ಟ್ವಿಟರ್ನಲ್ಲಿ 112ನ ಬಳಕೆ ಬಗ್ಗೆ ಬರೆದುಕೊಂಡಿದ್ದಾರೆ. "ಅಂತಾ ಟೈಮ್ ನ್ಯಾಗ ನೀವ ನಮ್ಮ #ERSS112 ಗ ಕಾಲ್ ಮಾಡ್ಬೇಕಿತ್ರೀ.. ಯಾವುದೇ #ಗಂಭೀರ ಸಮಸ್ಯೆಗಳು ಉಂಟಾದಾಗ 112 ಗೆ ಕರೆ ಮಾಡಿ.. #ವಿರಾಟ ರೂಪದಲ್ಲಿ ಸಹಾಯ ಮಾಡಾಕ ಹುಧಾ ನಗರ ಪೋಲಿಸ್ ಸದಾ ಸಿದ್ಧವಾಗಿರುತ್ತದೆ. ಗೊತ್ತಲ್ಲಾ ನಮ್ಮ ರೀಚ್ ಟೈಮ್.." ಎಂದು ಆರ್ಸಿಬಿಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದೆ.
ಕೊಹ್ಲಿ ಸನ್ಹೆ ಮೂಲಕ ತಿರುಗೇಟು: ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಬೆಂಗಳೂರು ಕೊಟ್ಟಿದ್ದ ಬೃಹತ್ ಮೊತ್ತವನ್ನು ಲಕ್ನೋ ಗೆದ್ದು ಜೋರಾಗಿಯೇ ಸಂಭ್ರಮಿಸಿತ್ತು. ಈ ಪಂದ್ಯ ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆರ್ಸಿಬಿ ಪಂದ್ಯದಲ್ಲಿ ಸೋತರೂ ಅಭಿಮಾನಿಗಳು ತಂಡವನ್ನು ಹುರಿದುಂಬಿಸುತ್ತಿದ್ದರು. ಇದು ಗಂಭೀರ್ಗೆ ಕೋಪ ತರಿಸಿತ್ತು. ಪ್ರೇಕ್ಷರತ್ತ ತಿರುಗಿ ಬಾಯಿ ಮುಚ್ಚಿಕೊಂಡಿರುವಂತೆ ಸನ್ಹೆ ಮಾಡಿದ್ದರು. ಇದಲ್ಲದೇ ರವಿ ಬಿಷ್ನೋಯ್ ಹೆಲ್ಮೆಟ್ ನೆಲಕ್ಕೆ ಎಸೆದು ಸಂಭ್ರಮಿಸಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಕೊಹ್ಲಿ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ಸನ್ಹೆ ಮಾಡಿದ್ದರು. ಅಲ್ಲದೇ, ಆರ್ಸಿಬಿ ಅಭಿಮಾನಿಗಳಿಗೆ ಸುಮ್ಮನಿರಬೇಡಿ ಎಂದು ಟೀಶರ್ಟ್ ಮೇಲಿದ್ದ ಲೋಗೋ ತೋರಿಸಿ, ಸಂಭ್ರಮಿಸಲು ಸೂಚಿಸಿದ್ದರು.
ಶೇ 100ರಷ್ಟು ದಂಡ: ಮೈದಾನದಲ್ಲಿ ವಾಗ್ವಾದ ಮಾಡಿಕೊಂಡು ಐಪಿಎಲ್‌ನ ನೀತಿ ಸಂಹಿತೆ ಉಲ್ಲಂಘಿಸಿದ ಗಂಭೀರ್ ಮತ್ತು ವಿರಾಟ್ಗೆ ಪಂದ್ಯದ ಶೇ.100 ರಷ್ಟು ದಂಡ ವಿಧಿಸಲಾಗಿದೆ. ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್ ಎರಡರ ಅಪರಾಧದಡಿ ಆಟಗಾರರಿಗೆ ದಂಡ ಹಾಕಲಾಗಿದೆ. ಇದನ್ನು ಇಬ್ಬರೂ ಆಟಗಾರರು ಒಪ್ಪಿಕೊಂಡಿದ್ದಾರೆ. ಪಂದ್ಯದ ನಡುವೆ ವಿರಾಟ್ ಅವರ ಜೊತೆ ಅನುಚಿತವಾಗಿ ವರ್ತಿಸಿದ ನವೀನ್ ಉಲ್ ಹಕ್ಗೂ ಪಂದ್ಯದ ಶುಲ್ಕದ ಶೇ.50 ರಷ್ಟು ದಂಡ ವಿಧಿಸಲಾಗಿದೆ.
ಇದನ್ನೂ ಓದಿ: ನಿವೃತ್ತಿಯ ಬಗ್ಗೆ ಮೌನ ಮುರಿದ ಧೋನಿ.. ಇದು ಕ್ಯಾಪ್ಟನ್ ಕೂಲ್ಗೆ ಕೊನೆಯ ಆವೃತ್ತಿ ಅಲ್ಲ!