ಮುಂಬೈ: ಡಿ.ವೈ ಪಾಟೀಲ್ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಆರಂಭಿಕ ಜೋಡಿ ಹೊಸದೊಂದು ದಾಖಲೆ ನಿರ್ಮಿಸಿದೆ. ಆರಂಭದಿಂದ ಕೊನೆ ಓವರ್ವರೆಗೂ ಬ್ಯಾಟ್ ಮಾಡಿದ ಡಿಕಾಕ್ ಹಾಗೂ ಕೆಎಲ್ ರಾಹುಲ್ ಐಪಿಎಲ್ ಐತಿಹಾಸದಲ್ಲೇ ಆರಂಭಿಕರಾಗಿ ಗರಿಷ್ಠ ರನ್ಗಳ ಜೊತೆಯಾಟದ ದಾಖಲೆ ಬರೆದಿದ್ದಾರೆ.
ಆರಂಭದಲ್ಲಿ ಎಚ್ಚರಿಕೆ ಆಟಕ್ಕೆ ಒತ್ತು ನೀಡಿದ ಈ ಜೋಡಿ, ತದನಂತರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿತು. ಡಿಕಾಕ್ 59 ಎಸೆತಗಳಲ್ಲಿ 100ರನ್ ಪೂರೈಕೆ ಮಾಡಿದರೆ, ರಾಹುಲ್ 43 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದಾದ ಬಳಿಕ ಸ್ಫೋಟಕ ಆಟಕ್ಕೆ ಒತ್ತು ನೀಡಿದ ಡಿಕಾಕ್ ತಾವು ಎದುರಿಸಿದ 70 ಎಸೆತಗಳಲ್ಲಿ 10 ಬೌಂಡರಿ, 10 ಸಿಕ್ಸರ್ ಸಮೇತವಾಗಿ ಅಜೇಯ 140 ರನ್ಗಳಿಕೆ ಮಾಡಿದರು. ಇವರಿಗೆ ಸಾಥ್ ನೀಡಿದ ರಾಹುಲ್ 51 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಸಮೇತ ಅಜೇಯ 68ರನ್ಗಳಿಸಿದರು.
IPLನಲ್ಲಿ ಗರಿಷ್ಠ ಆರಂಭಿಕ ಜೊತೆಯಾಟ: ಅತ್ಯಾಕರ್ಷಕ ಜೊತೆಯಾಟ ಪ್ರದರ್ಶನ ನೀಡಿದ ಡಿಕಾಕ್-ರಾಹುಲ್ ಐಪಿಎಲ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಗರಿಷ್ಠ ಜೊತೆಯಾಟ ಪ್ರದರ್ಶನ ಮಾಡಿರುವ ದಾಖಲೆ ಬರೆದಿದ್ದಾರೆ. ಈ ಜೋಡಿ 20 ಓವರ್ಗಳಲ್ಲಿ 210ರನ್ಗಳಿಕೆ ಮಾಡಿದ್ದು, ಐಪಿಎಲ್ ಇತಿಹಾಸದಲ್ಲೇ ಹೊಸದೊಂದು ದಾಖಲೆಯಾಗಿದೆ. ಈ ಹಿಂದೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಕೊಹ್ಲಿ-ಡಿಕಾಕ್ ಜೋಡಿ 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ 229ರನ್ ಜೊತೆಯಾಟವಾಡಿದ್ದರು. ಇದಕ್ಕೂ ಮೊದಲ 2015ರಲ್ಲೇ ಎಬಿಡಿ- ಕೊಹ್ಲಿ ಮುಂಬೈ ವಿರುದ್ಧ 215ರನ್ಗಳ ಜೊತೆಯಾಟ ಆಡಿದ್ದರು. ಇಂದಿನ ಪಂದ್ಯದಲ್ಲಿ ರಾಹುಲ್-ಡಿಕಾಕ್ 210ರನ್ಗಳ ಜೊತೆಯಾಟ ಪ್ರದರ್ಶಿಸಿದ್ದಾರೆ.
-
Well played, QDK 💯
— IndianPremierLeague (@IPL) May 18, 2022 " class="align-text-top noRightClick twitterSection" data="
Live - https://t.co/NbhFO1ozC7 #KKRvLSG #TATAIPL pic.twitter.com/re4ZnUz82P
">Well played, QDK 💯
— IndianPremierLeague (@IPL) May 18, 2022
Live - https://t.co/NbhFO1ozC7 #KKRvLSG #TATAIPL pic.twitter.com/re4ZnUz82PWell played, QDK 💯
— IndianPremierLeague (@IPL) May 18, 2022
Live - https://t.co/NbhFO1ozC7 #KKRvLSG #TATAIPL pic.twitter.com/re4ZnUz82P
ಯಾವೆಲ್ಲ ದಾಖಲೆ ಸೃಷ್ಟಿಯಾದ್ವು
- ಐಪಿಎಲ್ ಇತಿಹಾಸದಲ್ಲೇ ಮೊದಲ ವಿಕೆಟ್ಗೆ ದಾಖಲೆಯ ಗರಿಷ್ಠ ಜೊತೆಯಾಟ
- ಒಂದೇ ಒಂದು ವಿಕೆಟ್ ಕಳೆದುಕೊಳ್ಳದೇ ಸಂಪೂರ್ಣ 20 ಓವರ್ ಬ್ಯಾಟ್ ಮಾಡಿದ ರೆಕಾರ್ಡ್
- ಯಾವುದೇ ವಿಕೆಟ್ಗೆ ದಾಖಲಾದ ಮೂರನೇ ಗರಿಷ್ಠ ಜೊತೆಯಾಟ
- ಐಪಿಎಲ್ ಇನ್ನಿಂಗ್ಸ್ವೊಂದರಲ್ಲಿ ಮೂರನೇ ಗರಿಷ್ಠ ವೈಯಕ್ತಿಕ ರನ್ಗಳಿಸಿದ ಡಿಕಾಕ್
ವಿಶೇಷವೆಂದರೆ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಡಿಕಾಕ್ ಸಿಡಿಸಿರುವ ವೈಯಕ್ತಿಕ ಗರಿಷ್ಠ ಸ್ಕೋರ್ ಸಹ ಇದಾಗಿದೆ. ಈ ಹಿಂದೆ 2013ರಲ್ಲಿ ಗೇಲ್ ಪುಣೆ ವಿರುದ್ಧ ಅಜೇಯ 175ರನ್, ಆರ್ಸಿಬಿ ವಿರುದ್ಧ ಮೆಕಲಮ್ ಅಜೇಯ 158ರನ್ ಹಾಗೂ 2015ರಲ್ಲಿ ಮುಂಬೈ ವಿರುದ್ಧ ಅಜೇಯ 133ರನ್ ಸಿಡಿಸಿದ್ದರು.