ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ವಿನೂತನ ದಾಖಲೆ ಬರೆದರು. ಐಪಿಎಲ್ ಇತಿಹಾಸದಲ್ಲೇ ಈ ಸಾಧನೆ ಮಾಡಿರುವ ಎರಡನೇ ಬೌಲರ್ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.
15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಿವೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಶ್ರೇಯಸ್ ಪಡೆಗೆ ಆರ್ಸಿಬಿ ಬೌಲರ್ಗಳು ಸಿಂಹಸ್ವಪ್ನವಾಗಿ ಕಾಡಿದರು. ತಂಡದ ವೇಗಿ ಹರ್ಷಲ್ ಪಟೇಲ್ ತಾವು ಎಸೆದ ನಾಲ್ಕು ಓವರ್ಗಳಲ್ಲಿ ಕೇವಲ 11ರನ್ ನೀಡಿ, ಪ್ರಮುಖ ಎರಡು ವಿಕೆಟ್ ಪಡೆದುಕೊಂಡು ಗಮನ ಸೆಳೆದರು.
-
We’re just going to call him Mr. Magic Patel. 😎🔥
— Royal Challengers Bangalore (@RCBTweets) March 30, 2022 " class="align-text-top noRightClick twitterSection" data="
First bowler to bowl consecutive wicket-maidens in the #IPL. 👏🏻👏🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvKKR pic.twitter.com/zNbzKyfql0
">We’re just going to call him Mr. Magic Patel. 😎🔥
— Royal Challengers Bangalore (@RCBTweets) March 30, 2022
First bowler to bowl consecutive wicket-maidens in the #IPL. 👏🏻👏🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvKKR pic.twitter.com/zNbzKyfql0We’re just going to call him Mr. Magic Patel. 😎🔥
— Royal Challengers Bangalore (@RCBTweets) March 30, 2022
First bowler to bowl consecutive wicket-maidens in the #IPL. 👏🏻👏🏻#PlayBold #WeAreChallengers #IPL2022 #Mission2022 #RCB #ನಮ್ಮRCB #RCBvKKR pic.twitter.com/zNbzKyfql0
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇನ್ನಿಂಗ್ಸ್ವೊಂದರಲ್ಲಿ ಎರಡು ಓವರ್ ಮೇಡನ್ ಮಾಡಿರುವ ಎರಡನೇ ಬೌಲರ್ ಆಗಿ ಹರ್ಷಲ್ ಪಟೇಲ್ ಹೊರಹೊಮ್ಮಿದ್ದಾರೆ. ಈ ಮೂಲಕ ಸಹ ಆಟಗಾರ ಮೊಹಮ್ಮದ್ ಸಿರಾಜ್ ಅವರ ದಾಖಲೆ ಸರಿಗಟ್ಟಿದರು. 2020ರಲ್ಲಿ ಅಬುದಾಬಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಿರಾಜ್ ಕೂಡ ಎರಡು ಮೇಡನ್ ಓವರ್ ಎಸೆದಿದ್ದರು.
ಇದನ್ನೂ ಓದಿ: ಹಸರಂಗ ಮಾರಕ ಬೌಲಿಂಗ್ ದಾಳಿ: ಆರ್ಸಿಬಿ ಗೆಲುವಿಗೆ 129 ರನ್ ಟಾರ್ಗೆಟ್ ನೀಡಿದ ಕೋಲ್ಕತ್ತಾ
ಇಂಡಿಯನ್ ಪ್ರೀಮಿಯರ್ ಲೀಗ್ನ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ಗೆ ಆರ್ಸಿಬಿ ದಾಖಲೆಯ 10.75 ಕೋಟಿ ರೂ. ನೀಡಿ ಖರೀದಿಸಿದೆ. ವಿಶೇಷವೆಂದರೆ, ಈ ಪ್ಲೇಯರ್ 2021ರಲ್ಲಿ ಅತಿ ಹೆಚ್ಚು 32 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದುಕೊಂಡಿದ್ದರು.