ETV Bharat / sports

ಅರ್ಧ ಐಪಿಎಲ್​ ಮುಕ್ತಾಯ.. ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನ, ಆರ್​ಸಿಬಿ ಎಲ್ಲಿದೆ ಗೊತ್ತಾ? - 4ನೇ ಸ್ಥಾನದಲ್ಲಿದೆ ರಾಹುಲ್​ ಬಳಗ

ಐಪಿಎಲ್​ 2023 ಲೀಗ್​ನ ಅರ್ಧ ಪಂದ್ಯಗಳು ಮುಕ್ತಾಯಗೊಂಡಿದ್ದು, ಪಾಯಿಂಟ್​ ಟೇಬಲ್​ನಲ್ಲಿ ಯಾವ ತಂಡ ಮೊದಲು ಮತ್ತು ಯಾವ ತಂಡ ಕೊನೆ ಸ್ಥಾನದಲ್ಲಿದೆ ಎಂಬುದು ತಿಳಿಯೋಣ ಬನ್ನಿ..

Half IPL is over  Chennai is the top  RCB is the fifth position in the list  ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನ  ಅರ್ಧ ಐಪಿಎಲ್​ ಮುಕ್ತಾಯ  ಐಪಿಎಲ್​ 2023 ಲೀಗ್​ನ ಅರ್ಧ ಪಂದ್ಯಗಳು ಮುಕ್ತಾಯ  ಪಾಯಿಂಟ್​ ಟೇಬಲ್​ನಲ್ಲಿ ಯಾವ ತಂಡ ಮೊದಲು  ಅಗ್ರಸ್ಥಾನದಲ್ಲಿ ಚೆನ್ನೈ ತಂಡ  ಗುಜರಾತ್​ ಟೈಟಾನ್ಸ್​ಗೆ ಎರಡನೇ ಸ್ಥಾನ  3ನೇ ಸ್ಥಾನದಲ್ಲಿದೆ ರಾಜಸ್ಥಾನ್​ ರಾಯಲ್ಸ್  4ನೇ ಸ್ಥಾನದಲ್ಲಿದೆ ರಾಹುಲ್​ ಬಳಗ  ಐದನೇ ಸ್ಥಾನದಲ್ಲಿ ಆರ್​ಸಿಬಿ
ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನ
author img

By

Published : Apr 26, 2023, 1:04 PM IST

ಅಹ್ಮದಾಬಾದ್​, ಗುಜರಾತ್​: ಕಳೆದಿನ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಗುಜರಾತ್​ ಟೈಟಾನ್ಸ್​ ಗೆದ್ದು ಪಾಯಿಂಟ್​ ಸ್ಥಾನದಲ್ಲಿ 2ಕ್ಕೆ ಏರಿಕೆ ಕಂಡಿದೆ. ಐಪಿಎಲ್​ನಲ್ಲಿ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು ರನ್​ರೇಟ್​ ಆಧಾರದ ಮೇಲೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.

ಅಗ್ರಸ್ಥಾನದಲ್ಲಿ ಚೆನ್ನೈ ತಂಡ: ಐಪಿಎಲ್​ನ ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ಮಹೇಂದ್ರ ಸಿಂಗ್​ ಧೋನಿ ನೇತೃತ್ವದ ಚೆನ್ನೈ ಸೂಪರ್​ ಕಿಂಗ್​ ತಂಡ ಪಾಯಿಂಟ್ ಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೊದಲನೇ ಸ್ಥಾನವನ್ನು ಅಲಂಕರಿಸಿದೆ. ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​​ ಕಿಂಗ್​ ಭರ್ಜರಿ ಜಯ ಸಾಧಿಸಿದೆ. ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್‌ ಪರ 29 ಎಸೆತಗಳಲ್ಲಿ 71 ರನ್ ಗಳಿಸಿ ಮಿಂಚಿದರು. ಈಡನ್ ಗಾರ್ಡನ್ಸ್​ನಲ್ಲಿ ನೆರದಿದ್ದ ಸಹಸ್ರಾರು ಪ್ರೇಕ್ಷಕರ ಬೆಂಬಲದಿಂದ ಉತ್ತೇಜಿತರಾಗಿ ಭರ್ಜರಿ ಬ್ಯಾಟ್​ ಬೀಸಿದರು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಂದ ಭರ್ಜರಿ ಜಯಗಳಿಸಿ ರನ್​ರೇಟ್​ ಆಧಾರದ ಮೇಲೆ ಪಾಯಿಂಟ್​ ಟೇಬಲ್​ನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇನ್ನು ಕೊನೆಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಅಲಂಕರಿಸಿದೆ. ಆಡಿರುವ 7 ಪಂದ್ಯಗಳಲ್ಲಿ ಡೆಲ್ಲಿ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿದೆ.

Half IPL is over  Chennai is the top  RCB is the fifth position in the list  ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನ  ಅರ್ಧ ಐಪಿಎಲ್​ ಮುಕ್ತಾಯ  ಐಪಿಎಲ್​ 2023 ಲೀಗ್​ನ ಅರ್ಧ ಪಂದ್ಯಗಳು ಮುಕ್ತಾಯ  ಪಾಯಿಂಟ್​ ಟೇಬಲ್​ನಲ್ಲಿ ಯಾವ ತಂಡ ಮೊದಲು  ಅಗ್ರಸ್ಥಾನದಲ್ಲಿ ಚೆನ್ನೈ ತಂಡ  ಗುಜರಾತ್​ ಟೈಟಾನ್ಸ್​ಗೆ ಎರಡನೇ ಸ್ಥಾನ  3ನೇ ಸ್ಥಾನದಲ್ಲಿದೆ ರಾಜಸ್ಥಾನ್​ ರಾಯಲ್ಸ್  4ನೇ ಸ್ಥಾನದಲ್ಲಿದೆ ರಾಹುಲ್​ ಬಳಗ  ಐದನೇ ಸ್ಥಾನದಲ್ಲಿ ಆರ್​ಸಿಬಿ
ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನ

ಗುಜರಾತ್​ ಟೈಟಾನ್ಸ್​ಗೆ ಎರಡನೇ ಸ್ಥಾನ: ಮಂಗಳವಾರ ರಾತ್ರಿ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್​ ಟೈಟಾನ್ಸ್​ ಎದುರಿನ ಸವಾಲಿನಲ್ಲಿ ಮುಂಬೈ ಇಂಡಿಯನ್ಸ್​ ಮುಗ್ಗರಿಸಿದೆ. ಬ್ಯಾಟಿಂಗ್​ ವೈಫಲ್ಯದಿಂದಾಗಿ 55 ರನ್​ಗಳ ಸೋಲು ಕಂಡಿತು. ಮೊದಲು ಬ್ಯಾಟ್​ ಮಾಡಿ ಗುಜರಾತ್​ ಟೈಟಾನ್ಸ್ ನೀಡಿದ 207 ರನ್​​ಗಳ ಸವಾಲಿಗೆ ಉತ್ತರವಾಗಿ ಮುಂಬೈ 152 ರನ್​ ಮಾತ್ರ ಗಳಿಸಿ ಸೋಲು ಕಂಡಿತು. ಈ ಗೆಲುವಿನ ಮೂಲಕ ಗುಜರಾತ್​ ಪಾಯಿಂಟ್​ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಗುಜರಾತ್​ ತಂಡವೂ ಸಹ 10 ಅಂಕಗಳು ಪಡೆದಿದ್ದು, ರನ್​ರೇಟ್​ ಆಧಾರದ ಮೇಲೆ ಎರಡನೇ ಸ್ಥಾನಕ್ಕೆ ಕುಸಿದಿದೆ. 9ನೇ ಸ್ಥಾನದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮುಂದುವರಿದಿದೆ. ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಹೈದರಾಬಾದ್ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದ್ದು, 4 ಅಂಕಗಳೊಂದಿಗೆ ರನ್​ ರೇಟ್​ ಆಧಾರ ಮೇಲೆ 9ನೇ ಸ್ಥಾನವನ್ನು ಅಲಂಕರಿಸಿದೆ.

3ನೇ ಸ್ಥಾನದಲ್ಲಿದೆ ರಾಜಸ್ಥಾನ್​ ರಾಯಲ್ಸ್​: ರಾಜಸ್ಥಾನ ರಾಯಲ್ಸ್ ತಂಡ ಭಾನುವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಆರ್​ಆರ್​ ತಂಡ ಈ ಸೋಲಿನ ಮೂಲಕ 8 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿತ ಕಂಡಿತು. ಇನ್ನು ಎಂಟನೇ ಸ್ಥಾನವನ್ನು ಕೋಲ್ಕತ್ತಾ ನೈಟ್​ ರೈಡರ್ಸ್​ ಅಲಂಕರಿಸಿದೆ. ಭಾನುವಾರ ನಡೆದ ​ಚೆನ್ನೈ ಸೂಪರ್​​ ಕಿಂಗ್​ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ಸೋಲು ಕಂಡಿತು. ಆಡಿರುವ 7 ಪಂದ್ಯಗಳಲ್ಲಿ ಶಾರೂಖ್​ ಖಾನ್​ ತಂಡ ಕೇವಲ 2 ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿದೆ. ರನ್​ ರೇಟ್​ ಆಧಾರದ ಮೇಲೆ ಕೆಕೆಆರ್​ ತಂಡ ಎಂಟನೇ ಸ್ಥಾನದಲ್ಲಿದೆ.

4ನೇ ಸ್ಥಾನದಲ್ಲಿದೆ ರಾಹುಲ್​ ಬಳಗ: ಗುಜರಾತ್ ಟೈಟಾನ್ಸ್ ವಿರುದ್ಧ ಶನಿವಾರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರ 68 (61) ರನ್‌ ತಂಡದ ಗೆಲುವಿಗೆ ಕೊಡುಗೆಯಾಗಲಿಲ್ಲ. ಲಕ್ನೋಗೆ ಕೊಟ್ಟಿದ್ದ 136 ರನ್​ನ ಅಲ್ಪ ಮೊತ್ತದ ಗುರಿಯನ್ನು ಗುಜರಾತ್​ ಟೈಟಾನ್ಸ್​ ಯಶಸ್ವಿಯಾಗಿ ನಿಯಂತ್ರಿಸಿ 7 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಕೊನೆಯ ಓವರ್​ನಲ್ಲಿ ಮೋಹಿತ್​ ಶರ್ಮಾ ಮಾಡಿದ ಮ್ಯಾಜಿಕ್​ನಿಂದ ಗುಜರಾತ್​ ಟೈಟಾನ್ಸ್​ ತಂಡ ಲಕ್ನೋವನ್ನು ಮಣಿಸಿತು. ಕೊನೆಯ ಓವರ್​ ಒಂದರಲ್ಲೇ 4 ವಿಕೆಟ್​ ಕಳೆದುಕೊಂಡ ಲಕ್ನೋ ನಿಗದಿತ 20 ಓವರ್​ಗೆ 128 ರನ್ ಗಳಿಸಿ ಸೋಲು ಕಂಡಿತು. ಈ ಮೂಲಕ ರಾಹುಲ್​ ಬಳಗ 8 ಅಂಕಗಳೊಂದಿಗೆ ರನ್​ ರೇಟ್ ಆಧಾರದ ಮೇಲೆ ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಇನ್ನು ಗುಜರಾತ್​ ಟೈಟಾನ್ಸ್​ ವಿರುದ್ಧ ಸೋಲು ಕಂಡ ಮುಂಬೈ ತಂಡ 7 ನೇ ಸ್ಥಾನದಲ್ಲಿ ಮುಂದುವರಿದಿದೆ.

ಐದನೇ ಸ್ಥಾನದಲ್ಲಿ ಆರ್​ಸಿಬಿ: ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್​ಸಿಬಿ ತಂಡ 7 ರನ್​ನಿಂದ ಸೋಲುಣಿಸಿತ್ತು. 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸಲಷ್ಟೇ ಆರ್​ಆರ್​ ಬ್ಯಾಟರ್​ಗಳಿಗೆ ಸಾಧ್ಯವಾಯಿತು. ಆರ್​ಸಿಬಿಯ ನಿಯಂತ್ರಿತ ಬೌಲಿಂಗ್​ನಿಂದ ಗ್ರೀನ್​ ಜರ್ಸಿಯಲ್ಲಿ ಮತ್ತೊಂದು ಗೆಲುವು ದಾಖಲಿಸಿತ್ತು. ಈ ಮೂಲಕ ಆರ್​ಸಿಬಿ ಎಂಟು ಅಂಕಗಳೊಂದಿಗೆ ರನ್​ ರೇಟ್​ ಆಧಾರದ ಮೇಲೆ 5 ಸ್ಥಾನವನ್ನು ಅಲಂಕರಿಸಿದೆ. ಇನ್ನು ಆರನೇ ಸ್ಥಾನದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಮುಂದುವರಿದಿದೆ. ಮುಂಬೈ ವಿರುದ್ಧ 13 ರನ್​ಗಳ ಜಯ ಸಾಧಿಸಿತ್ತು.

ಐಪಿಎಲ್​ ಪಾಯಿಂಟ್​ ಟೇಬಲ್ಸ್​ 2023:

ತಂಡಗಳುಪಂದ್ಯಗಳುಗೆಲುವುಸೋಲುಟೈರದ್ದುಅಂಕನೆಟ್​ ರನ್​ ರೇಟ್​
ಚೆನ್ನೈ ಸೂಪರ್ ಕಿಂಗ್ಸ್7520010+0.662
ಗುಜರಾತ್ ಟೈಟನ್ಸ್7520010+0.580
ರಾಜಸ್ಥಾನ ರಾಯಲ್ಸ್​ 743008+0.844
ಲಕ್ನೋ ಸೂಪರ್​ ಜೈಂಟ್ಸ್ 743008+0.547
ರಾಯಲ್ ಚಾಲೆಂಜರ್ಸ್​ ಬೆಂಗಳೂರು 743008-0.008
ಪಂಜಾಬ್​ ಕಿಂಗ್ಸ್ 743008-0.162
ಮುಂಬೈ ಇಂಡಿಯನ್ಸ್​ 734006-0.620
ಕೋಲ್ಕತ್ತಾ ನೈಟ್​ ರೈಡರ್ಸ್ 725004-0.186
ಸನ್​ ರೈಸರ್ಸ್ ಹೈದರಾಬಾದ್ 725004-0.725
ಡೆಲ್ಲಿ ಕ್ಯಾಪಿಟಲ್ಸ್725004-0.961

ಓದಿ: ಗುಜರಾತ್​ ಆಲ್​​ರೌಂಡ್​ ಆಟಕ್ಕೆ ಮುಂಬೈ ಬೆಚ್ಚು: ಹಾರ್ದಿಕ್​ ಪಡೆಗೆ 55 ರನ್​ಗಳ ಭರ್ಜರಿ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.