ETV Bharat / sports

ಶುಭ್​ಮನ್​ ಗಿಲ್ ಶತಕದಾಟ, ಹೈದರಾಬಾದ್​ ವಿರುದ್ಧ ಗೆದ್ದ ಟೈಟಾನ್ಸ್​ : ಪ್ಲೇ ಆಫ್​ಗೆ ಪ್ರವೇಶ

ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ತಂಡ ಜಯ ದಾಖಲಿಸಿ ಪ್ಲೇ ಆಫ್​ಗೆ ಪ್ರವೇಶ ಪಡೆಯಿತು.

ಹೈದರಾಬಾದ್​ ವಿರುದ್ಧ ಗೆದ್ದ ಟೈಟಾನ್ಸ್
ಹೈದರಾಬಾದ್​ ವಿರುದ್ಧ ಗೆದ್ದ ಟೈಟಾನ್ಸ್
author img

By

Published : May 16, 2023, 7:28 AM IST

ಅಹಮದಾಬಾದ್​ : ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಸನ್​ರೈಸರ್ಸ ಹೈದರಾಬಾದ್​ ತಂಡ 34 ರನ್‌ಗಳಿಂದ ಸೋಲುವ ಮೂಲಕ ಇನ್ನು ಒಂದು ಪಂದ್ಯ ಬಾಕಿ ಇಉವಾಗಲೇ ಇಂಡಿಯನ್​ ಪ್ರೀಮಿಯರ್​ ಲೀಗ್2023ರ ಪ್ಲೇ ಆಫ್​ನಿಂದ ಹೊರ ಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ನಿಗದಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಸನ್ ರೈಸರ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 154 ರನ್​ ಗಳಿಸಲಷ್ಟೇ ಸೀಮಿತವಾಯಿತು. ಈ ಪಂದ್ಯದ ಗೆಲುವಿನಿಂದ ಗುಜರಾತ್ ತಂಡ​ ಐಪಿಎಲ್​2023ರಲ್ಲಿ ಪ್ಲೇ ಆಫ್​ಗೆ ಪ್ರವೇಶ ಪಡೆದ ಮೊದಲ ತಂಡವಾಯಿತು.

ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಗುಜರಾತ್​ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ (0) ಮೊದಲ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ ಎಸೆತಕ್ಕೆ ಔಟಾದರು. ಸಹಾ ನಂತರ ಬಂದ ಸಾಯಿ ಸುದರ್ಶನ್ (47) ಮತ್ತು ಆರಂಭಿಕ ಆಟಗಾರ ಶುಭಮನ್ ಗಿಲ್ (101) ಜೊತೆಯಾಟವಾಡಿ ತಂಡದ ಸ್ಕೋರನ್ನು 188ಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ​

189 ರನ್​ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಸನ್ ರೈಸರ್ಸ್ ಆರಂಭದಲ್ಲೇ ವಿಫಲವಾಯಿತು. ಆರಂಭಿಕರಾದ ಅನ್ಮೋಲ್‌ಪ್ರೀತ್ ಸಿಂಗ್ (5) ಮತ್ತು ಅಭಿಷೇಕ್ ಶರ್ಮಾ (4) ಏಕ ಅಂಕಿ ಸ್ಕೋರ್‌ಗಳಿಸಲಷ್ಟೇ ಸೀಮಿತರಾದರು. ನಾಯಕ ಏಡೆನ್ ಮಾರ್ಕ್ರಂ (10), ರಾಹುಲ್ ತ್ರಿಪಾಠಿ (1), ಸನ್ವಿರ್ ಸಿಂಗ್ (7), ಅಬ್ದುಲ್ ಸಮದ್ (4), ಮಾರ್ಕೊ ಜಾನ್ಸೆನ್ (3) ಹೀಗೆ ಅಗ್ರ ಕ್ರಮಾಂಕದ ಎಲ್ಲಾ ಬ್ಯಾಟರ್​ಗಳು ಒಬ್ಬರ ಹಿಂದೊಬ್ಬರಂತೆ ಬಹುಬೇಗ ಪೆವಿಲಿಯನ್​ ಸೇರಿದರು. ಇದರಿಂದಾಗಿ ಸನ್ ರೈಸರ್ಸ್ 59 ರನ್​ಗಳಿಗೆ ಪ್ರಮುಖ ಏಳು ವಿಕೆಟ್ ಕಳೆದುಕೊಂಡಿತು. ಇನ್ನು 10, 20 ರನ್​ಗಳಲ್ಲಿ ಸನ್ ರೈಸರ್ಸ್ ಸೋಲನುಭವಿಸುತ್ತದೆ ಎಂದು ಅಂದಾಜಿಸಲಾಗಿತ್ತು.

ಆದರೆ ಈ ಹಂತದಲ್ಲಿ ವಿಕೆಟ್ ಕೀಪರ್ ಕಮ್​ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ 44 ಎಸೆತಗಳಲ್ಲಿ 4 ಬೌಂಡರಿ, 3ಸಿಕ್ಷರ್​ ಸಮೇತ 66 ರನ್​ ಬಾರಿಸಿದರೆ, ಮತ್ತೊಂದೆಡೆ ಭುವನೇಶ್ವರ್​ ಕುಮಾರ್​ 26 ಎಸೆತಗಳಲ್ಲಿ 3 ಬೌಂಡರಿ ಸಮೇತ 27 ರನ್​ ಕಲೆ ಹಾಕುವ ಮೂಲಕ ದೊಡ್ಡ ಅಂತರದ ಸೋಲಿನಿಂದ ತಂಡವನ್ನು ಪಾರುಮಾಡಿದರು. ಈ ಇಬ್ಬರೂ ಎಂಟನೇ ವಿಕೆಟ್‌ಗೆ 68 ರನ್ ಜತೆಯಾಟ ವಾಡಿದರು. ಬಳಿಕ ಹೆನ್ರಿಚ್ ಕ್ಲಾಸೆನ್ ಬೃಹತ್ ಹೊಡೆತಕ್ಕೆ ಕೈ ಹಾಕಿ ಔಟಾದರು. ಕೊನೆಯಲ್ಲಿ ಮಯಾಂಕ್ ಮಾರ್ಕಂಡೆ (18) ಬಿರುಸಿನ ಆಟವಾಡಿದರೂ ಸಹ ತಂಡ ಗೆಲವಿನ ದಡ ಸೇರುವಲ್ಲಿ ವಿಫಲವಾಯಿತು.

ಸ್ಕೋರ್​ ವಿವರ, ಗುಜರಾತ್​ ಟೈಟಾನ್ಸ್​ : ವೃದ್ದಿಮಾನ್​ ಸಹಾ (0), ಶುಭಮನ್​ ಗಿಲ್​ (101), ಸಾಯಿಸುದರ್ಶನ್​ (47), ಹಾರ್ದಿಕ್​ ಪಾಂಡ್ಯ (8), ಮಿಲ್ಲರ್​ (7), ತೆವಾಟಿಯ (3), ಶನಕ (9).

ಬೌಲಿಂಗ್​: ಭುವನೇಶ್ವರ್​ ಕುಮಾರ್​ (30ಕ್ಕೆ5), ಜಾನ್​ಸೆನ್​, ಫಾರೂಕಿ, ನಟರಾಜನ್​ ತಲಾ ಒಂದು ವಿಕೆಟ್​

ಹೈದರಾಬಾದ್​: ಹೆನ್ರಿಚ್​ (64), ಭುವನೇಶ್ವರ್​ ಕುಮಾರ್​ (27), ಮಾರ್ಕಂಡೆ (18).

ಬೌಲಿಂಗ್​: ಮೊಹ್ಮದ್​ ಶಮಿ (20ಕ್ಕೆ4), ಮೋಹಿತ್​ ಶರ್ಮಾ (28ಕ್ಕೆ4),ಯಶ್ ದಯಾಲ್ 1 ವಿಕೆಟ್​

ಇದನ್ನೂ ಓದಿ: GT vs SRH: ಐಪಿಎಲ್​ ಚೊಚ್ಚಲ ಶತಕ ಗಳಿಸಿದ ಶುಭಮನ್​ ಗಿಲ್​ : ಸನ್​ ರೈಸರ್ಸ್​ಗೆ 189 ರನ್​ನ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.