ಅಹಮದಾಬಾದ್ (ಗುಜರಾತ್): ಗೋಲ್ಡನ್ ಫಾರ್ಮ್ನಲ್ಲಿರುವ ಶುಭಮನ್ ಗಿಲ್ ಚೊಚ್ಚಲ ಐಪಿಎಲ್ ಶಕತ ದಾಖಲಿಸಿ ಗುಜರಾತ್ ಟೈಟಾನ್ಸ್ನ್ನು ಪ್ಲೇ ಆಫ್ ಪ್ರವೇಶಕ್ಕೆ ತೆಗೆದುಕೊಂಡು ಹೋಗಲು ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಮೂಲಕ ಗಿಲ್ ಆಡಿದ ಎಲ್ಲಾ ಮಾದರಿಯಲ್ಲೂ ಶತಕ ಗಳಿಸಿದ ಬ್ಯಾಟರ್ ಎಂಬ ಖ್ಯಾತಿಗೆ ಪಾತ್ರರಾದರು.
ಇವರ ಜೊತೆಗೆ ಸಾಯಿ ಸುದರ್ಶನ್ ಗಳಿಸಿದ 47 ರನ್ನ ಸಹಾಯದಿಂದ ಗುಜರಾತ್ ನಿಗಧಿತ ಓವರ್ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಸನ್ ರೈಸರ್ಸ್ ಹೈದರಾಬಾದ್ ಗೆಲುವಿಗೆ 189 ರನ್ನ ಅಗತ್ಯವಿದೆ.
ಟಾಸ್ ಸೋತು ತವರು ಮೈದಾನದಲ್ಲಿ ಗುಜರಾತ್ ಮೊದಲು ಬ್ಯಾಟಿಂಗ್ಗೆ ಇಳಿಯಿತು. ಮೊದಲ ಮೂರನೇ ಬಾಲ್ಗೆ ಆರಂಭಿಕ ವೃದ್ಧಿಮಾನ್ ಸಹಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಅವರ ನಂತರ ಬಂದ ಸಾಯಿ ಸುದರ್ಶನ್ ಗಿಲ್ಗೆ ಜೊತೆಯಾದರು. 2022ರ ಕೊನೆಯಿಂದ ಉತ್ತಮ ಫಾರ್ಮ್ನಲ್ಲಿರುವ ಶುಭಮನ್ ಗಿಲ್ ಅಂತರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಯಲ್ಲೂ ಆಡಿದ್ದು, ಎಲ್ಲದರಲ್ಲೂ ಶತಕ ಗಳಿಸಿದ್ದಾರೆ. ಐಪಿಎಲ್ನಲ್ಲಿ ಲಕ್ನೋ ವಿರುದ್ಧ 94 ರನ್ಗಳಿಸಿ ಔಟ್ ಆಗಿ 6 ರನ್ನಿಂದ ಶತಕ ವಂಚಿತರಾಗಿದ್ದರು.
-
𝙈𝘼𝙄𝘿𝙀𝙉 𝙄𝙋𝙇 𝘾𝙀𝙉𝙏𝙐𝙍𝙔! 💯
— IndianPremierLeague (@IPL) May 15, 2023 " class="align-text-top noRightClick twitterSection" data="
A magnificent TON comes up for @ShubmanGill 👏🏻👏🏻 #TATAIPL | #GTvSRH | @gujarat_titans pic.twitter.com/YZHhiw8RkN
">𝙈𝘼𝙄𝘿𝙀𝙉 𝙄𝙋𝙇 𝘾𝙀𝙉𝙏𝙐𝙍𝙔! 💯
— IndianPremierLeague (@IPL) May 15, 2023
A magnificent TON comes up for @ShubmanGill 👏🏻👏🏻 #TATAIPL | #GTvSRH | @gujarat_titans pic.twitter.com/YZHhiw8RkN𝙈𝘼𝙄𝘿𝙀𝙉 𝙄𝙋𝙇 𝘾𝙀𝙉𝙏𝙐𝙍𝙔! 💯
— IndianPremierLeague (@IPL) May 15, 2023
A magnificent TON comes up for @ShubmanGill 👏🏻👏🏻 #TATAIPL | #GTvSRH | @gujarat_titans pic.twitter.com/YZHhiw8RkN
ಮೊದಲ ವಿಕೆಟ್ ಪತನದ ನಂತರ ಒಂದಾದ ಗಿಲ್ ಸಾಯಿ ಜೋಡಿ ಗುಜರಾತ್ ಟೈಟಾನ್ಸ್ನ ಬೃಹತ್ ಜೊತೆಯಾಟ ದಾಖಲಿಸಿದರು. ಈ ಜೋಡಿ 1 ರಿಂದ 15ನೇ ಓವರ್ ವರೆಗೆ ಜೊತೆಯಾಟ ಮಾಡಿ 147 ರನ್ ಗಳಿಸಿತು. 47 ರನ್ ಗಳಿಸಿದ್ದ ಸಾಯಿ ಸುದರ್ಶನ್ ಜಾನ್ಸನ್ಗೆ ವಿಕೆಟ್ ಕೊಟ್ಟರು. ಇವರ ಇನ್ನಿಂಗ್ಸ್ 6 ಬೌಂಡರಿ 1 ಸಿಕ್ಸ್ ಒಳಗೊಂಡಿತ್ತು.
ಸುದರ್ಶನ್ ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹಾರ್ದಿಕ್ 8 ರನ್ಗೆ ಔಟ್ ಆದರೆ, ಮಿಲ್ಲರ್ (7) ಮತ್ತು ತೆವಾಟಿಯ (3) ಕೂಡ ಹಾರ್ದಿಕ್ ಬೆನ್ನಲ್ಲೇ ವಿಕೆಟ್ ಕಳೆದುಕೊಂಡರು. ನಂತರ ಇಂದಿನ ಪಂದ್ಯದಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಲಂಕಾ ಬ್ಯಾಟರ್ ಶನಕ ಬಂದರು.
ಐಪಿಎಲ್ ಚೊಚ್ಚಲ ಶತಕ ಗಳಿಸಿದ ಗಿಲ್: ಒಂದೆಡೆ ಸುದರ್ಶನ್ ಜೊತೆಗೆ 147 ರನ್ ಜೊತೆಯಾಟ ಮಾಡಿದ ಗಿಲ್, ನಂತರ ಯಾವುದೇ ಜೊತೆಯಾಟ ಸಿಗದೆ ಸಮಸ್ಯೆ ಎದುರಿಸಿದರು. ಆದರೂ ಏಕಾಂಗಿಯಾಗಿ ಆಡಿದ ಅವರು 58 ಬಾಲ್ನಲ್ಲಿ 13 ಬೌಂಡರಿ ಮತ್ತು 1 ಸಿಕ್ಸ್ನಿಂದ 101 ರನ್ ಗಳಿಸಿ ಔಟ್ ಆದರು.
ಹ್ಯಾಟ್ರಿಕ್ ಮತ್ತು ಐದು ವಿಕೆಟ್ ಸಾಧನೆ ಮಾಡಿದ ಭುವನೇಶ್ವರ್: ಈ ಆವೃತ್ತಿಯ ಎರಡನೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಇಂದಿನ ಪಂದ್ಯದಲ್ಲಿ ಆಯಿತು. ಕೊನೆಯ ಓವರ್ ಮಾಡಲು ಬಂದ ಭುವನೇಶ್ವರ್ ಕುಮಾರ್ 19.1ನೇ ಬಾಲ್ನಲ್ಲಿ ಗಿಲ್, 19.2ನೇ ಬಾಲ್ನಲ್ಲಿ ರಶೀದ್ ಖಾನ್, 19.3 ನೇ ಬಾಲ್ನಲ್ಲಿ ನೂರ್ ಅಹಮ್ಮದ್ ವಿಕೆಟ್ ಪಡೆದರು. 4ನೇ ಬಾಲ್ 1 ರನ್ ಬಂದರೆ 5ನೇ ಬಾಲ್ಗೆ ಮತ್ತೆ ವಿಕೆಟ್ ಪಡೆದರು. ಒಟ್ಟು ಈ ಪಂದ್ಯದಲ್ಲಿ 4 ಓವರ್ ಮಾಡಿದ ಭುವಿ 5 ವಿಕೆಟ್ ಪಡೆದು 30 ರನ್ ಬಿಟ್ಟುಕೊಟ್ಟರು. ಇವರ ಜೊತೆಗೆ ಮಾರ್ಕ್ ಜಾನ್ಸೆನ್, ಫಜಲ್ಹಕ್ ಫಾರೂಕಿ ಮತ್ತು ಟಿ ನಟರಾಜನ್ ತಲಾ ಒಂದು ವಿಕೆಟ್ ಪಡೆದುರು.
ತಂಡಗಳು ಇಂತಿವೆ..: ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ನಾಯಕ), ಡೇವಿಡ್ ಮಿಲ್ಲರ್, ದಾಸುನ್ ಶನಕ, ರಾಹುಲ್ ತೆವಾಟಿಯಾ, ಮೋಹಿತ್ ಶರ್ಮಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್
ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಅಬ್ದುಲ್ ಸಮದ್, ಸನ್ವಿರ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಫಜಲ್ಹಕ್ ಫಾರೂಕಿ, ಟಿ ನಟರಾಜನ್
ಇನ್ನೂ ಓದಿ: ನಾಲ್ಕನೇ ಸಲ ಸೊನ್ನೆ ಸುತ್ತಿದ ಬಟ್ಲರ್: ಸೊನ್ನೆ ವೀರರ ಪಟ್ಟಿಗೆ ಸ್ಟಾರ್ ಬ್ಯಾಟರ್